ಉಡುಪಿ: ರೋಟರಿ ಕ್ಲಬ್ ಮಣಿಪಾಲ ವತಿಯಿಂದ ಅಂತರಾಷ್ಟ್ರೀಯ ರೋಟರಿ ಜಿಲ್ಲೆ 3182 ನೀಡುವ ವೃತ್ತಿ ಸೇವಾ ಪ್ರಶಸ್ತಿಯನ್ನು ಕಲಾ ಶಿಕ್ಷಕರಾದ ವೆಂಕಟರಮಣ ಕಾಮತ್ ಅವರಿಗೆ ನೀಡಿ ಗೌರವಿಸಲಾಯಿತು.
ರೋಟರಿ ಜಿಲ್ಲೆಯ ವೃತ್ತಿ ಸೇವಾ ಚೇರ್ಮನ್ ಪುಂಡಲೀಕ ಮರಾಠೆ ಅವರು ಮಾತನಾಡಿ, ಕಲೆಯಿಂದ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕೆಲಸವನ್ನು ವೆಂಕಿಯವರು ಮಾಡುತ್ತಿರುವುದು ಶ್ಲಾಘನೀಯ, ಇಂತಹ ಸೃಜನಶೀಲ ಕಲಾವಿದರಿಗೆ ರೋಟರಿ ಸೇವಾ ಪ್ರಶಸ್ತಿ ನೀಡಿರುವುದು ಸಂತೋಷವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಮಣಿಪಾಲದ ಡಾ. ವಿರೂಪಾಕ್ಷ ದೇವರಮನೆ, ರಾಜವರ್ಮ ಅರಿಗಾ, ರತ್ನಾಕರ್, ದಿನೇಶ್ ಭಂಡಾರಿ, ರವಿರಾಜ್, ಡಾ. ವೀಣಾ, ಡಾ. ಸಪ್ನಾ, ಗುರುರಾಜ್ ಸನಿಲ್, ಬಲರಾಮ ಭಟ್, ರವಿ ಕಾರಂತ್, ನಳಿನಿ ನಾಯರ್ ಉಪಸ್ಥಿತರಿದ್ದರು. ಶಕುಂತಳಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.




By
ForthFocus™