Home ಸುದ್ಧಿಗಳು ರಾಜ್ಯ ರಾಜಪಥದಲ್ಲಿ ಕರ್ನಾಟಕದ ಸ್ತಬ್ಧಚಿತ್ರ

ರಾಜಪಥದಲ್ಲಿ ಕರ್ನಾಟಕದ ಸ್ತಬ್ಧಚಿತ್ರ

801
0

ನವದೆಹಲಿ/ಬೆಂಗಳೂರು: ನವದೆಹಲಿಯಲ್ಲಿ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯದಿಂದ ‘ಕರ್ನಾಟಕ: ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು’ ವಿಷಯದ ಸ್ತಬ್ಧಚಿತ್ರ ಪ್ರದರ್ಶನವಾಗಲಿದ್ದು, ಇಂದು ರಾಜಪಥದಲ್ಲಿ ಸಿದ್ಧತೆ, ತರಬೇತಿ ನಡೆಸಲಾಯಿತು. ದಕ್ಷಿಣ ಭಾರತದ 12 ಸ್ತಬ್ಧ ಚಿತ್ರಗಳಲ್ಲಿ ಆಯ್ಕೆಯಾದ ಏಕೈಕ ಸ್ತಬ್ಧಚಿತ್ರವಿದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.

ಕರ್ನಾಟಕವು ಸತತ 13 ನೇ ವರ್ಷ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ರಾಷ್ಟ್ರ ರಾಜಧಾನಿಯ ಗಣರಾಜ್ಯೋತ್ಸವದಲ್ಲಿ ಕರ್ನಾಟಕ ಪಾಲ್ಗೊಳ್ಳಲು ಆರಂಭಿಸಿದ್ದು 1972 ರಲ್ಲಿ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯಾಗುತ್ತಿರುವ ಸಂದರ್ಭದಲ್ಲಿ ಕರ್ನಾಟಕದ ಈ ಪಾಲ್ಗೊಳ್ಳುವಿಕೆಯು ಸುವರ್ಣ (50) ವರ್ಷ ಪೂರೈಸುತ್ತಿದೆ.

ಕಲಾ ನಿರ್ದೇಶಕ ಶಶಿಧರ್ ಅಡಪ ನೇತೃತ್ವದ ಪ್ರತಿರೂಪಿ ಸಂಸ್ಥೆಯ ನೂರಕ್ಕೂ ಹೆಚ್ಚು ಕಲಾವಿದರು, ಸಂಗೀತ ನಿರ್ದೇಶಕ ಪ್ರವೀಣ್ ದಯಾನಂದ ರಾವ್ ತಂಡ, ಜಾನಪದ ತಜ್ಞ ಡಾ. ರಾಧಾಕೃಷ್ಣ ಉರಾಳ ನೇತೃತ್ವದ ಕಲಾ ಕದಂಬ ತಂಡ ಇದಕ್ಕಾಗಿ ಶ್ರಮಿಸುತ್ತಿದೆ.

ಸ್ತಬ್ಧ ಚಿತ್ರದ ಪ್ರಮುಖಾಂಶ:
ಮುಂಭಾಗ, ಬೀಟೆ, ದಂತದ ಕಸೂತಿ ಕೆತ್ತನೆಯ ಆನೆ, ಕೆಳಭಾಗ ಯಕ್ಷಗಾನದ ಚಿತ್ರಣ, ಗಂಜೀಫಾ ಕಲಾಕೃತಿ. ಮಧ್ಯಭಾಗದಲ್ಲಿ, ಬಿದರಿ ಕಲೆಯಿಂದ ರೂಪಿಸಿದ ಹೂಜಿ, ಭೂತಾರಾಧನೆಯ ಕಲಾಕೃತಿ. ಕೊನೆಯಲ್ಲಿ ಕರಕುಶಲ ಉತ್ಪನ್ನಗಳನ್ನು ಪ್ರೋತ್ಸಾಹಿಸಿದ ಕನ್ನಡತಿ, ಹೋರಾಟಗಾರ್ತಿ, ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಕಲಾಕೃತಿ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.