Tuesday, July 28, 2026
Tuesday, July 28, 2026

ಛಾಯಾ ಸಮ್ಮಾನ್ ಅಭಿನಂದನಾ ಸಮಾರಂಭ

ಛಾಯಾ ಸಮ್ಮಾನ್ ಅಭಿನಂದನಾ ಸಮಾರಂಭ

Date:

ಉಡುಪಿ, ಆ. 18: ಬೇರೆಯವರ ಮುಖದಲ್ಲಿ ನಗುವಿರಲೆಂದು ಆಶಿಸಿ ಸದಾ ಸ್ಮೈಲ್ ಪ್ಲೀಸ್ ಎಂದೆನ್ನುವವರು ಛಾಯಾಗ್ರಾಹಕರು ಮಾತ್ರ. ಹಾಗಾಗಿ ಅವರು ಎಲ್ಲರಿಗೂ ಆತ್ಮೀಯರು. ತಮ್ಮದೇ ವೃತ್ತಿ ಬಾಂಧವರನ್ನು ವ್ಯಾಪಾರ ವಹಿವಾಟನ್ನು ನಡೆಸುವ ವೃತ್ತಿಪರ ಸಂಸ್ಥೆಗಳೊಂದಿಗೆ ಸೇರಿ ಗುರುತಿಸಿ ಗೌರವಿಸುವುದು ಅಭಿನಂದನೀಯ ಎಂದು ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಹೇಳಿದರು. ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಉಡುಪಿ ವಲಯ ಹಾಗೂ ತನಿಷ್ಕ್ ಗೋಲ್ಡ್ ಮತ್ತು ಡೈಮಂಡ್ ಜ್ಯುವೆಲ್ಲರಿ ಉಡುಪಿಯಲ್ಲಿ ಆಯೋಜಿಸಿದ್ದ ಛಾಯಾ ಸಮ್ಮಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು‌.

ಹಿರಿಯ ಹಾಗೂ ಛಾಯಾ ಸಾಧಕ ಛಾಯಾಗ್ರಾಹಕರಾದ ಮಂಜುನಾಥ ದೇವಾಡಿಗ, ಕೃಷ್ಣ ಸೇರಿಗಾರ, ಜಯಕರ ದೇವಾಡಿಗ, ರಮೇಶ್ ಎಸ್. ಪೂಜಾರಿ, ಸುಜಾತ ಅಂದ್ರಾದೆಯವರಿಗೆ ಛಾಯಾ ಸಮ್ಮಾನ್ ನೀಡಿ ಗೌರವಿಸಲಾಯಿತು.

ಪ್ರೊ. ಬಾಲಕೃಷ್ಣ ಮದ್ದೋಡಿ, ಕೆ. ವಾಸುದೇವ ರಾವ್, ಸುಧೀರ್ ಎಂ. ಶೆಟ್ಟಿ, ಸಂದೀಪ್ ಕಾಮತ್, ವಾಮನ ಪಡುಕೆರೆ, ಗ್ರೆಟ್ಟಾ ಸಲ್ಡಾನ್ಹಾ, ಲಿಯಾನ್ ಸಲ್ಡಾನ್ಹಾ, ಒನೆಲ್ ಸಲ್ಡಾನ ಉಪಸ್ಥಿತರಿದ್ದರು. ವಲಯಾಧ್ಯಕ್ಷ ಜನಾರ್ದನ್ ಕೊಡವೂರು ಅಧ್ಯಕ್ಷತೆ ವಹಿಸಿದ್ದರು. ತನಿಷ್ಕ್ ಉಡುಪಿ ಶಾಖೆಯ ಬಿಸಿನೆಸ್ ಅಸೋಸಿಯೇಟ್ ಮ್ಯಾಕ್ಸಿಮ್ ಸ್ಟೀಫನ್ ಸಲ್ಡಾನ್ಹಾ ಸ್ವಾಗತಿಸಿ, ಶೋಬಿತ ವಂದಿಸಿದರು. ಪೂರ್ಣಿಮಾ ಜನಾರ್ದನ್ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನರೇಂದ್ರ ಎಸ್ ಗಂಗೊಳ್ಳಿಗೆ ಕಾವ್ಯಶ್ರೀ ಪ್ರಶಸ್ತಿ

ಗಂಗೊಳ್ಳಿ, ಜು.27: ಕರ್ನಾಟಕ ರಾಜ್ಯ ಬರಹಗಾರರ ಸಂಘ(ರಿ) ಹೂವಿನಹಡಗಲಿ ವತಿಯಿಂದ ಕೊಡಲ್ಪಡುವ...

ಕಾಮನ್‌ವೆಲ್ತ್ ಕ್ರೀಡಾಕೂಟ: ಮುಂದುವರಿದ ಭಾರತದ ಪದಕ ಬೇಟೆ

ಯು.ಬಿ.ಎನ್.ಡಿ., ಜು.27: ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ವೇಟ್‌ಲಿಫ್ಟರ್ ಜ್ಞಾನೇಶ್ವರಿ...

ಸಂಸ್ಕೃತ ಪ್ರತಿಭಾ ಪುರಸ್ಕಾರ

ಉಡುಪಿ, ಜು.27: ಉಡುಪಿ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಶೀರೂರು...
error: Content is protected !!