Friday, November 1, 2024
Friday, November 1, 2024

ಮಣಿಪುರ ಸತ್ಯ ಅರಿಯುವತ್ತ ಹೆಜ್ಜೆ: ಸಂವಾದ ಕಾರ್ಯಕ್ರಮ

ಮಣಿಪುರ ಸತ್ಯ ಅರಿಯುವತ್ತ ಹೆಜ್ಜೆ: ಸಂವಾದ ಕಾರ್ಯಕ್ರಮ

Date:

ಮಂಗಳೂರು, ಆ. 18: ಮೇತಿ ಸಮುದಾಯದ ಮೇಲೆ ಕುಕಿ ಭಯೋತ್ಪಾದಕರಿಂದ ನಿರಂತರ ಹಲ್ಲೆ, ಅತ್ಯಾಚಾರ, ಕೊಲೆ, ಸುಲಿಗೆ ನಡೆಯುತ್ತಿದೆ. ಆಯುಧಗಳನ್ನು ಹಿಡಿದು ಮೇತಿ ಸಮಾಜದವರ ಮನೆಗಳ ಮೇಲೆ ದಾಳಿ ಮಾಡಿ ಸುಟ್ಟು ಹಾಕಲಾಗುತ್ತಿದೆ ಎಂದು ಮಣಿಪುರದ ಪ್ರಥಮ ರಕ್ಷಾ ಮಂತ್ರಿ (ಎನ್.ಸಿ.ಸಿ) ಪದಕ ವಿಜೇತರಾದ ಮೋತಿಮಾಲಾ ಗ್ಯಾಂಗೋಮ್ ಹೇಳಿದರು. ಅವರು ನಮೋ 2.0 ವತಿಯಿಂದ ಡೊಂಗರಕೇರಿಯ ಭುವನೇಂದ್ರ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಮಣಿಪುರದಲ್ಲಿ ಪೋಪಿ ಎನ್ನುವ ಗಾಂಜಾ ಅಫೀಮನ್ನು ಬೆಳೆಸಲಾಗುತ್ತಿದೆ. ಅಲ್ಲಿನ ಯುವ ಸಮುದಾಯ ಅದಕ್ಕೆ ದಾಸವಾಗಿದೆ. ಮೇತಿ ಸಮುದಾಯದ ಸಂಪ್ರದಾಯ ಮತ್ತು ಸಂಸ್ಕೃತಿಗಳ ಮೇಲೆಯೂ ದಾಳಿ ಮಾಡಲಾಗುತ್ತಿದೆ. ಮಣಿಪುರ ಗಡಿ ಮೈಯನ್ಮಾರ್ ದೇಶದೊಂದಿಗೆ ಹಂಚಿಕೊಂಡಿದೆ. ಇದರಿಂದ ವಲಸಿಗರೂ ಕೂಡ ಮಣಿಪುರ ಪ್ರವೇಶಿಸಿ ಮಣಿಪುರದ ಮೂಲ ನಿವಾಸಿಗಳಾದ ಮೇತಿ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದರು.

ಮಣಿಪುರ ಸಂಸ್ಕೃತಿ ವಿದ್ಯಾಲಯದ ಕಲಾ ಅಕಾಡೆಮಿ ಯುವ ಪ್ರತಿಭಾ ಪ್ರಶಸ್ತಿ ಪುರಸ್ಕೃತರಾದ ಡಾ. ಉರ್ಮಿಕಾ ಮಯ್ಬಾಮ ಮಾತನಾಡಿ, ಮೈತೇಯಿ ಸಮುದಾಯದ ಬಳಿ ಹಣ ಇಲ್ಲ. 2011 ರಲ್ಲಿ ಜನಸಂಖ್ಯೆಯ ಗಣತಿ ಆಧಾರದಲ್ಲಿ 30 ಲಕ್ಷ ಜನಸಂಖ್ಯೆ ಇತ್ತು. ಹತ್ತು ವರ್ಷಗಳಲ್ಲಿ ಬೇರೆ ಬೇರೆ ಪ್ರದೇಶಗಳಿಂದ ಕುಕಿ ಸಮುದಾಯದವರು ದೊಡ್ಡ ಸಂಖ್ಯೆಯಲ್ಲಿ ವಲಸೆ ಬಂದಿದ್ದಾರೆ. ಈಗ ಅವರ ಸಂಖ್ಯೆ ಜಾಸ್ತಿ ಇದೆ. ರಾಜಧಾನಿ ಇಂಫಾಲದಲ್ಲಿ ಬುಲೆಟ್ ಸದ್ದು ನಿತ್ಯ ಕೇಳುತ್ತಿರುತ್ತದೆ. ಅಂತರರಾಷ್ಟ್ರೀಯ ಮೀಡಿಯಾ ಮಾಡುತ್ತಿರುವ ಸುದ್ದಿಯಿಂದ ಏಕಪಕ್ಷೀಯ ವಿಷಯ ಮಾತ್ರ ಹೊರಪ್ರಪಂಚಕ್ಕೆ ತಿಳಿಯುತ್ತಿದೆ. ಮೇ 3 ರ ಮೊದಲೇ ಸರಕಾರಿ ಹುದ್ದೆಯಲ್ಲಿರುವ ಕುಕಿ ಅಧಿಕಾರಿಗಳು ರಜೆ ಮೇಲೆ ಹೋಗಿದ್ದಾರೆ. 10 ಕುಕಿ ಶಾಸಕರು ಮಣಿಪುರದ ಪಕ್ಕದ ಮೀಜಾರೋಂ ಗೆ ಹೋಗಿ ನೆಲೆಸಿದ್ದಾರೆ ಎಂದು ಹೇಳಿದರು. ಭಾರತಿ ಸಂಜಯ್ ಪ್ರಭು ಸ್ವಾಗತಿಸಿ ಪ್ರಸ್ತಾಪಿಸಿದರು. ಗೋಪಾಲಕೃಷ್ಣ ಭಟ್ ಪ್ರಾರ್ಥಿಸಿದರು. ಅರುಣ್ ಜಿ ಶೇಟ್ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಗಡಿಯಲ್ಲಿ ಒಂದಿಂಚು ಭೂಮಿಗೂ ರಾಜಿಯ ಪ್ರಶ್ನೆಯೇ ಇಲ್ಲ: ಪ್ರಧಾನಿ ನರೇಂದ್ರ ಮೋದಿ

ಕಚ್, ಅ.31: ಇಂದು ದೇಶವು ಗಡಿಯಲ್ಲಿ ಒಂದು ಇಂಚು ಭೂಮಿಗೂ ರಾಜಿ...

ಉಡುಪಿ ಜಿಲ್ಲಾಮಟ್ಟದ ಕ್ರೀಡಾಕೂಟ ಸಂಪನ್ನ

ಉಡುಪಿ, ಅ.31: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಡುಪಿ ಹಾಗೂ ಉಡುಪಿ...

ಪುನೀತ್ ರಾಜಕುಮಾರ್‌ರಂತೆ ವ್ಯಕ್ತಿತ್ವ ರೂಪಿಸಿಕೊಳ್ಳಿ: ಸೀತಾರಾಮ ಆಚಾರ್

ಕೋಟ, ಅ.31: ಬದುಕಿನ ಆಯಾಮದಲ್ಲಿ ಪುನೀತ್ ರಾಜಕುಮಾರ್ ರಂತೆ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು...

ಆನಂದ ಸಿ ಕುಂದರ್ ರವರಿಗೆ ಅಭಿನಂದನಾ ಕಾರ್ಯಕ್ರಮ

ಕೋಟ, ಅ.31: ಸ.ಹಿ.ಪ್ರಾ ಶಾಲೆ ಮಣೂರು ಪಡುಕರೆ ಇಲ್ಲಿ ಶಾಲಾ ಸಮುದಾಯದತ್ತ...
error: Content is protected !!