Saturday, October 17, 2026
Saturday, October 17, 2026

ಜಿಲ್ಲಾ ಕಸಾಪ ವತಿಯಿಂದ ನಾದವೈಭವಮ್ ಉಡುಪಿ ವಾಸುದೇವ ಭಟ್ ರವರಿಗೆ ನುಡಿ ನಮನ

ಜಿಲ್ಲಾ ಕಸಾಪ ವತಿಯಿಂದ ನಾದವೈಭವಮ್ ಉಡುಪಿ ವಾಸುದೇವ ಭಟ್ ರವರಿಗೆ ನುಡಿ ನಮನ

Date:

ಉಡುಪಿ: ಮಗು ಮನಸ್ಸಿನ ನಗುಮೊಗದ ಖ್ಯಾತ ಸಂಗೀತ ನಿರ್ದೇಶಕ ಉಡುಪಿ ವಾಸುದೇವ ಭಟ್ ಇತ್ತೀಚಿಗೆ ನಿಧನರಾಗಿದ್ದಾರೆ. ಅವರ ನುಡಿ ನಮನ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಡಿಯಾಳಿ ಭರತಾಂಜಲಿಯಲ್ಲಿ ಆಯೋಜಿಸಿತ್ತು.

ದಿವಗಂತ ವಾಸುದೇವ ಭಟ್ ರವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿದ ಸುಹಾಸಂ ಅಧ್ಯಕ್ಷ ಶಾಂತರಾಜ್ ಐತಾಳ್ ಮಾತನಾಡಿ, ಭಟ್ ರವರು ಎಲ್ಲಾ ಕ್ಷೇತ್ರದಲ್ಲಿ ಕೈಯಾಡಿಸಿದವರು.

ಸಂಗೀತ, ಸಾಹಿತ್ಯ, ನಾಟಕ, ಚಲನಚಿತ್ರ ಹೀಗೆ ಹತ್ತು ಹಲವು ಕ್ಷೆತ್ರದಲ್ಲಿ ಸಾಧನೆಗೈದವರು. ಅಸಾಂಖ್ಯಾತ ವಿದ್ಯಾರ್ಥಿಗಳಿಗೆ ಜ್ಞಾನರ್ಜನೆ ಮಾಡಿದವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ ನುಡಿನಮನ ಅರ್ಥಪೂರ್ಣವಾಗಿತ್ತು ಎಂದರು.

ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವದ ವಾಸುದೇವ ಭಟ್ಟರು ನಿರಂತರ ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು.

ಸಾಹಿತ್ಯ ಲೋಕ ಅವರನ್ನು ಕಳಕೊಂಡು ಬಡವಾಗಿದೆ ಎಂದರು. ಸುಪ್ರಸಿದ್ದ ಗಾಯಕ ಹಾಗೂ ವಾಸುದೇವ ಭಟ್ಟರ ಶಿಷ್ಯ ಚಂದ್ರಶೇಖರ ಕೆದ್ಲಾಯ ತನ್ನ ಗುರುಗಳನ್ನು ಸ್ಮರಿಸಿ, ಒಂದು ಗಾಯನವನ್ನು ಹಾಡುವುದರ ಮೂಲಕ ಸಂಗೀತ ನಮನ ಅರ್ಪಿಸಿದರು.

ನಿಕಟವರ್ತಿಯಾಗಿದ್ದ ನಿವೃತ್ತ ಬ್ಯಾಂಕ್ ಅಧಿಕಾರಿ ನರಸಿಂಹಮೂರ್ತಿ ಅವರೊಂದಿಗೆ ಜೊತೆಯಾಗಿದ್ದ ಸಂದರ್ಭದ ರಸನಿಮಿಷಗಳನ್ನು ಹೇಳಿದರು. ಭರತಾಂಜಲಿ ನಿರ್ದೇಶಕಿ ರಶ್ಮಿ ವಿಜೆಯೇಂದ್ರ ಉಪಸ್ಥಿತರಿದ್ದರು.

ಸಂದ್ಯಾ ಶೆಣೈ, ಶ್ರೀನಿವಾಸ ಉಪಾಧ್ಯ, ನಾರಾಯಣ ಮಡಿ, ಜ್ಯೋತಿ ದೇವಾಡಿಗ, ಮರವಂತೆ ಪ್ರಕಾಶ್ ಪಡಿಯಾರ್ ನುಡಿ ನಮನ ಸಲ್ಲಿಸಿದರು. ಜನಾರ್ದನ್ ಕೊಡವೂರ್ ಸ್ವಾಗತಿಸಿ, ರವಿರಾಜ್ ಹೆಚ್. ಪಿ ಪ್ರಸಾವನೆಗೈದರು.

ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಧನ್ಯವಾದವಿತ್ತರು. ರಾಜೇಶ್ ಪಣಿಯಾಡಿ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

2030 ರ ವೇಳೆಗೆ ಭಾರತ ಮತ್ತು ರಷ್ಯಾ 100 ಬಿಲಿಯನ್ ಡಾಲರ್ ದ್ವಿಪಕ್ಷೀಯ ವ್ಯಾಪಾರ ಗುರಿ

ನವದೆಹಲಿ, ಅ.16: ರಷ್ಯಾ ಮತ್ತು ಇತರ ಸದಸ್ಯ ರಾಷ್ಟ್ರಗಳಿಗೆ ರಫ್ತುಗಳನ್ನು ಹೆಚ್ಚಿಸಲು...

ಕ್ರಿಯೇಟಿವ್ ಪಿಯು ಕಾಲೇಜಿನಲ್ಲಿ ಶಿಕ್ಷಕ- ಪೋಷಕರ ಸಭೆ

ಕಾರ್ಕಳ, ಅ.16: ವಿದ್ಯಾರ್ಥಿಗಳ ಕನಸುಗಳಿಗೆ ದಿಕ್ಕು ತೋರಿಸಿ, ಭವಿಷ್ಯದ ಸಾಧನೆಗೆ ಭದ್ರ...

ಉಡುಪಿಯಲ್ಲಿ ತಂಪೆರೆದ ಮುಂಜಾನೆ ಮಳೆ

ಉಡುಪಿ, ಅ.16: ಉಡುಪಿ ಜಿಲ್ಲೆಯ ಹಲವೆಡೆ ಶುಕ್ರವಾರ ಮುಂಜಾನೆ ಗುಡುಗು ಸಹಿತ...

ಸಂಸ್ಕೃತಿ ನಮ್ಮ ಗೌರವದ ಪ್ರತೀಕ: ಡಾ. ವೆಂಕಟರಾಮ್ ಭಟ್

ಉಡುಪಿ, ಅ.16: ಭಾರತೀಯ ಸಂಸ್ಕೃತಿಯ ಉಳಿವಿನಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳ ಪಾತ್ರ...
error: Content is protected !!