Thursday, September 10, 2026
Thursday, September 10, 2026

ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಚಾರ್ಟರ್ಡ್ ಅಕೌಟೆಂಟ್ ಗಳ ಕೊಡುಗೆ ಅಪಾರವಾದದ್ದು: ಸಿ.ಎ ಗೋಪಾಲಕೃಷ್ಣ ಭಟ್

ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಚಾರ್ಟರ್ಡ್ ಅಕೌಟೆಂಟ್ ಗಳ ಕೊಡುಗೆ ಅಪಾರವಾದದ್ದು: ಸಿ.ಎ ಗೋಪಾಲಕೃಷ್ಣ ಭಟ್

Date:

ಕಟಪಾಡಿ, ಜು. 1: ಲೆಕ್ಕ ಪರಿಶೋಧಕರಿಗೆ (ಸಿ.ಎ) ಸಮಾಜದಲ್ಲಿ ಒಂದು ವಿಶೇಷವಾದ ಉನ್ನತ ಸ್ಥಾನಮಾನವಿದೆ. ದೇಶವನ್ನು ಆರ್ಥಿಕವಾಗಿ ಅಭಿವೃದ್ಧಿ ಪಡಿಸುವಲ್ಲಿ ಚಾರ್ಟರ್ಡ್ ಅಕೌಟೆಂಟ್ ಗಳ ಕೊಡುಗೆ ಅಪಾರವಾದದ್ದು, ದೇಶದ ಏಳಿಗೆಗೆ ನಾವು ದುಡಿಯಬೇಕು ಎಂದು ತ್ರಿಶಾ ಸಂಸ್ಥೆಯ ಅಧ್ಯಕ್ಷರಾದ ಸಿ.ಎ ಗೋಪಾಲಕೃಷ್ಣ ಭಟ್ ಹೇಳಿದರು. ಅವರು ಶನಿವಾರ ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ಆಚರಿಸಲಾದ ‘ಚಾರ್ಟರ್ಡ್ ಅಕೌಂಟೆಂಟ್ಸ್ ಡೇ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ವೇದಿಕೆಯಲ್ಲಿದ್ದ ಸಿ.ಎ ಆದರ್ಶ್ ಶೆಣೈ ಹಾಗೂ ಸಿ.ಎ ನಾಗೇಂದ್ರ ಭಕ್ತ ಇವರು ಮಾತನಾಡುತ್ತಾ, ಜೀವನದಲ್ಲಿ ಸಾಧನೆ ಯಾವುದೇ ಅದೃಷ್ಟದಿಂದ ಬರುವುದಿಲ್ಲ, ಸತತ ಪರಿಶ್ರಮ ಒಂದೇ ಅದರ ಹಾದಿ ಎಂದು ಹೇಳಿ ಶುಭ ಹಾರೈಸಿದರು.

ತ್ರಿಶಾ ಸಂಸ್ಥೆಯ ಅಧ್ಯಕ್ಷರ ಎಕ್ಸಿಕ್ಯೂಟಿವ್ ಅಸಿಸ್ಟೆಂಟ್ ಐಶ್ವರ್ಯಾ ಕಾಮತ್ ಬಿ ಗಣ್ಯರಿಗೆ ‘ರಾಪಿಡ್ ಫಯರ್ ರೌಂಡ್’ ನಡೆಸಿದರು. ಸಿದ್ಧಾಂತ್ ಫೌಂಡೇಶನ್ ಖಜಾಂಚಿ ನಮಿತಾ ಜಿ ಭಟ್, ತ್ರಿಶಾ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗೌರಿ ಕಾಮತ್ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಚಾಮರಾಜನಗರ: ಜಿಲ್ಲಾಧಿಕಾರಿ ಶ್ರೀರೂಪ ಅವರಿಂದ ಆಯುಷ್ಮಾನ್ ಆರೋಗ್ಯ ಕೇಂದ್ರಗಳ ನಾಮಫಲಕ, ಪೋಸ್ಟರ್‍ಗಳ ಬಿಡುಗಡೆ

ಚಾಮರಾಜನಗರ, ಸೆ.9: ಆಯುಷ್ಮಾನ್ ಆರೋಗ್ಯ ಕೇಂದ್ರಗಳ ಕುರಿತು ಸುಲಭವಾಗಿ ಮಾಹಿತಿ ದೊರೆಯುವಂತೆ...

ಉಡುಪಿಯಲ್ಲಿ ಬನ್ನಂಜೆಯವರ ಆತ್ಮಕಥನ ‘ಇಂದು ಎನಗೆ ಗೋವಿಂದ’ ಚಿತ್ರದ ವಿಶೇಷ ಪ್ರದರ್ಶನ – ಸೆ.10 ರಂದು ಮೂರು ಪ್ರದರ್ಶನ

ಉಡುಪಿ, ಸೆ.9: ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ, ಬೆಂಗಳೂರು ಅರ್ಪಿಸುವ, ನಾಡಿನ ಹೆಮ್ಮೆಯ...

ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ; ವಿಮಾನ ಪ್ರಯಾಣ ಅಸ್ತವ್ಯಸ್ತ

ಯು.ಬಿ.ಎನ್.ಡಿ., ಸೆ.8: ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟದಿಂದಾಗಿ ಎಂಟು ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆಯನ್ನು...
error: Content is protected !!