Saturday, July 25, 2026
Saturday, July 25, 2026

ಮನದ ತುಡಿತಗಳ ದಾಖಲಿಕರಣವೇ ಸಾಹಿತ್ಯ: ಅಮಿತಾಂಜಲಿ‌ ಕಿರಣ್

ಮನದ ತುಡಿತಗಳ ದಾಖಲಿಕರಣವೇ ಸಾಹಿತ್ಯ: ಅಮಿತಾಂಜಲಿ‌ ಕಿರಣ್

Date:

ಕೋಟ: ಮನದಲ್ಲಿ ಮೂಡುವ ನೂರಾರು ತುಡಿತಗಳ ದಾಖಲಿಕರಣವೇ ಸಾಹಿತ್ಯ. ಸಾಹಿತ್ಯದ ಕಡೆ ಒಲವು ಇರುವವರ ಬದುಕಿನ ಅಂಗವಾಗಿ ಪುಸ್ತಕಗಳಿರುತ್ತೆ. ನಾವು ರಚಿಸಿದ ಕವನ, ಕಥೆಗಳು ನಮ್ಮೊಳಗೆ ಉಳಿಯದೆ ಇಂತಹ ಸಾಹಿತ್ಯ ಸಮ್ಮೇಳನಗಳಲ್ಲಿ ಅನಾವರಣಗೊಳಿಸಬೇಕು‌. ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರು ತಮ್ಮ ಇರುವಿಕೆಯನ್ನು ತೋರಿಸಿಕೊಳ್ಳಬೇಕು ಎಂದು ಸಮ್ಮೇಳನಾಧ್ಯಕ್ಷೆ  ಅಮಿತಾಂಜಲಿ ಕಿರಣ್ ಹೇಳಿದರು.

ಕೋಟ ಕಾರಂತ ಥೀಂ ಪಾರ್ಕ್‌ನ ಹೊರಾಂಗಣದ ಸಂಗೀತ ಕಾರಂಜಿಯ ವೀಕ್ಷಣಾ ಗ್ಯಾಲರಿಯಲ್ಲಿ ಕೋಟ ಡಾ. ಶಿವರಾಮ ಕಾರಂತ ಪ್ರತಿಷ್ಠಾನ, ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಕಾರಂತರ 24ನೇ ಪುಣ್ಯ ಸ್ಮೃತಿ ದಿನಾಚರಣೆಯ ಅಂಗವಾಗಿ ಕೋಟದ ಕಾರಂತ ಥಿಂ ಪಾರ್ಕ್‌ನಲ್ಲಿ ನಡೆದ ಉಡುಪಿ ಜಿಲ್ಲೆಯ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಚಿನಂಪ-2021 (ಕವಿತನದ ಹೂ ಕಂಪನ)ದಲ್ಲಿ ಅವರು ಮಾತನಾಡಿದರು.

ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಹಾಗೂ ಉಪನ್ಯಾಸಕಿ ಅಂಬಲಪಾಡಿಯ ವಾಸಂತಿ ಶೆಟ್ಟಿ ಮಾತನಾಡಿ, ಎಲ್ಲದರಲ್ಲೂ ಶಕ್ತಿ ಅಡಗಿದೆ. ವೈಜ್ಞಾನಿಕ ಯುಗದಲ್ಲಿ ಅಗೋಚರ ಶಕ್ತಿಗಳಿಂದ ಕೂಡಿದ ಪ್ರಕೃತಿಯೊಂದಿಗೆ ನಾವು ಜೀವನ ನಡೆಸುತ್ತಿದ್ದೇವೆ ಎಂದರು. 

ಗೋಪಾಲ ತ್ರಾಸಿ ಅವರ ಲಂಡನ್ ಟು ವ್ಯಾಟಿಕನ್ ಸಿಟಿ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಬಿಡುಗಡೆಗೊಳಿಸಿದರು.

ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ ದಿನೇಶ್‌, ಉಪಾಧ್ಯಕ್ಷ ವಾಸು ಪೂಜಾರಿ, ಪ್ರತಿಷ್ಠಾನದ ಅಧ್ಯಕ್ಷ ಆನಂದ ಸಿ ಕುಂದರ್, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಶಿಕ್ಷಕ ಸತೀಶ್‌ ವಡ್ಡರ್ಸೆ, ಸುಬ್ರಾಯ ಆಚಾರ್‌, ಸುಮನ ಆರ್‌ ಹೇರ್ಳೆ, ಉಪನ್ಯಾಸಕ ಸಂಜೀವ, ಪ್ರಶಾಂತ್‌ ಉಪಸ್ಥಿತರಿದ್ದರು. ನೀಲಾವರ ಸುರೇಂದ್ರ ಅಡಿಗ, ಗೋಪಾಲ ತ್ರಾಸಿ ಮತ್ತು ಅಮಿತಾಂಜಲಿ ಕಿರಣ್ ಅವರನ್ನು ಗೌರವಿಸಲಾಯಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ರೂಮಿನೊಳಗಿಂದ’ ಬಿಡುಗಡೆ

ಗಂಗೊಳ್ಳಿ, ಜು.24: ನರೇಂದ್ರ ಅವರ ಸಾಹಿತ್ಯದಲ್ಲಿನ ವೈವಿಧ್ಯತೆ ಮತ್ತು ಆಕರ್ಷಣೆ ಅಭಿನಂದನೀಯ....

ಜು.27: ಅಜ್ಜರಕಾಡಿನಲ್ಲಿ ನೇರ ಸಂದರ್ಶನ

ಉಡುಪಿ, ಜು.24: ಉಡುಪಿಯ ಅಜ್ಜರಕಾಡು ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯ ಧನಂಜಯ...

ಅಂಚೆ ಜೀವ ವಿಮಾ ಪ್ರತಿನಿಧಿಗಳ ಆಯ್ಕೆಗೆ ನೇರ ಸಂದರ್ಶನ

ಉಡುಪಿ, ಜು.24: ಉಡುಪಿ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ...

ನಾಟಾ ಪರೀಕ್ಷೆ- ಕ್ರಿಯೇಟಿವ್ ಸಂಸ್ಥೆಯ 4 ವಿದ್ಯಾರ್ಥಿಗಳಿಗೆ 100 ರ‍್ಯಾಂಕ್‌ನೊಳಗೆ ಸ್ಥಾನ

ಉಡುಪಿ, ಜು.24: ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ನವರು ನಡೆಸಿದ ನಾಟಾ ಪರೀಕ್ಷೆ...
error: Content is protected !!