ಬ್ರಹ್ಮಾವರ: ದಕ್ಷಿಣ ಪಂಡರಾಪುರ ಬ್ರಹ್ಮಾವರ ಭದ್ರಗಿರಿಯ ಶ್ರೀ ವೀರವಿಠ್ಠಲ ದೇವಸ್ಥಾನದಲ್ಲಿ ನವೆಂಬರ್ 4 ಶುಕ್ರವಾರ ಕಾರ್ತಿಕ ಏಕಾದಶಿಯ ಪರ್ವಕಾಲದಲ್ಲಿ ಬೆಳಿಗ್ಗೆ 8.30 ರಿಂದ ರಾತ್ರಿ 10 ಘಂಟೆಯವರೆಗೆ ಅಖಂಡ ಭಜನಾ ಮಹೋತ್ಸವ ನಡೆಯಲಿದೆ.
ಅಖಂಡ ಭಜನಾ ಮಹೋತ್ಸವದಲ್ಲಿ ಸೇವೆಗೈಯುವ ಭಜನಾ ಮಂಡಳಿಗಳು: ಶ್ರೀ ಮಹಾಲಸಾ ನಾರಾಯಣೀ ಭಜನಾ ಮಂಡಳಿ ತೋನ್ಸೆ, ಶ್ರೀ ವೀರ ಮಾರುತಿ ಭಜನಾ ಮಂಡಳಿ ಉಡುಪಿ, ಶ್ರೀ ಪದ್ಮಾವತಿ ಮಹಿಳಾ ಭಜನಾ ಮಂಡಳಿ ಎಲ್.ವಿ.ಟಿ ಪುತ್ತೂರು, ಶ್ರೀ ಮಹಾಲಖ್ಷ್ಮೀ ಭಜನಾ ಮಂಡಳಿ ಮಣಿಪಾಲ, ಶ್ರೀ ಲಕ್ಷ್ಮೀ ವೆಂಕಟರಮಣ ಮಹಿಳಾ ಭಜನಾ ಮಂಡಳಿ ಬ್ರಹ್ಮಾವರ, ಜಿ.ಎಸ್.ಬಿ ಮಹಿಳಾ ಮಂಡಳಿ ಉಡುಪಿ, ಶ್ರೀ ವೀರ ವಿಠ್ಠಲ ಭಜನಾ ಮಂಡಳಿ ಭದ್ರಗಿರಿ, ಭಗಿನಿ ವೃಂದ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಉಡುಪಿ, ಶ್ರೀ ಪಟ್ಟಾಭಿರಾಮಚಂದ್ರ ಭಜನಾ ಮಂಡಳಿ ಕೋಟೇಶ್ವರ, ಶ್ರೀ ರಾಮಾಂಜನೇಯ ಭಜನಾ ಮಂಡಳಿ ಕಲ್ಯಾಣಪುರ, ಶ್ರೀ ಲಕ್ಷ್ಮೀ ವೆಂಕಟೇಶ ಭಜನಾ ಮಂಡಳಿ ಉಡುಪಿ, ಶೆಣೈ ಕುಟುಂಬಸ್ಥರ ಭಜನಾ ಮಂಡಳಿ ಬೀಡಿನಗುಡ್ಡೆ ಉಡುಪಿ, ಶ್ರೀ ಸುರೇಶ್ ಭಟ್ ಮತ್ತು ಕುಟುಂಬಸ್ಥರು ಲಕ್ಷ್ಮೀನಗರ ಕೊಡವೂರು, ಶ್ರೀ ಕಾಶೀಮಠ ಭಜನಾ ಮಂಡಳಿ ಬ್ರಹ್ಮಾವರ.




By
ForthFocus™