Tuesday, November 3, 2026
Tuesday, November 3, 2026

‘ಕಾರಂತರ ಕಥನಗಳಲ್ಲಿ ಪ್ರಭುತ್ವ ಮತ್ತು ಪ್ರತಿರೋಧದ ನೆಲೆಗಳು’ ವಿಚಾರಗೋಷ್ಠಿ

‘ಕಾರಂತರ ಕಥನಗಳಲ್ಲಿ ಪ್ರಭುತ್ವ ಮತ್ತು ಪ್ರತಿರೋಧದ ನೆಲೆಗಳು’ ವಿಚಾರಗೋಷ್ಠಿ

Date:

ಕುಂದಾಪುರ, ನ.3: ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಶಿವರಾಮ ಕಾರಂತ ಟ್ರಸ್ಟ್, ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಕುಂದಾಪುರದ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ನಡೆದ ಕಾರಂತರ ಕಥನಗಳ ವರ್ತಮಾನದ ಮರುಓದು ವಿಷಯದ ಕುರಿತು ನಡೆದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಕಾರಂತರ ಕಥನಗಳಲ್ಲಿ ಪ್ರಭುತ್ವ ಮತ್ತು ಪ್ರತಿರೋಧದ ನೆಲೆಗಳು ಎಂಬ ವಿಷಯದ ಕುರಿತು ವಿಚಾರಗೋಷ್ಠಿ ಕಾಲೇಜಿನ ಮೂಕಾಂಬಿಕ ಸಭಾಂಗಣದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿ ಖ್ಯಾತ ರಂಗ ತಜ್ಞ ಶ್ರೀಪಾದ್ ಭಟ್ ಮಾತನಾಡಿ, ಡಾ. ಶಿವರಾಮ ಕಾರಂತರೆಂದರೆ ಕರಾವಳಿಯ ಮಣ್ಣಿನ ಗಂಧವನ್ನು ಜಗತ್ತಿಗೆ ಸಾರಿದ, ಸದಾ ಚಲನಶೀಲವಾದ ಒಂದು ಬಂಡಾಯದ ಅರಿವು. ಕೇವಲ ಪುಸ್ತಕದ ಪಾಂಡಿತ್ಯಕ್ಕಷ್ಟೇ ಸೀಮಿತವಾಗದೆ ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ಲಭಿಸಿದ ಅನುಭವದಿಂದ ಮೂಡಿದ ಅರಿವು ಅವರದ್ದಾಗಿತ್ತು. ಅಪೂರ್ವ ಪಶ್ಚಿಮದ ಪರಿಕಲ್ಪನೆಯಲ್ಲಿ ಪಾಶ್ಚಾತ್ಯ ಜ್ಞಾನ-ವಿಜ್ಞಾನಗಳನ್ನು ಮುಕ್ತವಾಗಿ ಸ್ವೀಕರಿಸುತ್ತಲೇ, ನಮ್ಮತನವನ್ನು ಬಿಟ್ಟುಕೊಡದ ಗಟ್ಟಿಯಾದ ಪ್ರತಿರೋಧದ ವೈಚಾರಿಕತೆ ಅವರಲ್ಲಿತ್ತು. ಮೂಕಜ್ಜಿಯ ಕನಸುಗಳು; ಕೃತಿಯ ಮೂಲಕ ಶತಮಾನಗಳ ಮಾನವ ಸಮಾಜದ ಮುಖವಾಡಗಳನ್ನು ಕಳಚಿ, ಮನುಕುಲದ ವಿಕಾಸ ಹಾಗೂ ಅಂತರಾಳದ ಸತ್ಯವನ್ನು ಶೋಧಿಸಿದ ಕಾರಂತರು, ನಮ್ಮ ಅಳತೆಯನ್ನು ಮೀರದ ದೇವರು ಲೇಖನದಲ್ಲಿ ಡಾಂಭಿಕ ಆಚರಣೆಗಳನ್ನು ಬದಿಗೊತ್ತಿ ಸ್ವಯಂ ಅನ್ವೇಷಣೆಯ ಮಾನವತಾವಾದಿ ದೃಷ್ಟಿಕೋನವನ್ನು ಧ್ವನಿಸುತ್ತಾರೆ. ಸಾಹಿತ್ಯ ಮತ್ತು ಯಕ್ಷಗಾನದಂತಹ ಕಲೆಗಳು ಕೇವಲ ಮನರಂಜನೆಯಾಗದೆ ಮನುಷ್ಯನ ಭಾವನೆಗಳ ಮೇಲೆ ಕೆಲಸ ಮಾಡಬೇಕು ಎಂಬ ಸ್ಪಷ್ಟ ಮೀಮಾಂಸೆಯನ್ನು ಹೊಂದಿದ್ದ ಕಾರಂತರು, ನಿಂತ ನೀರಾಗದೆ ಸದಾ ಸತ್ಯದ ಬೆನ್ನು ಹತ್ತಿದ ಅಪ್ರತಿಮ ಚಿಂತಕರಾಗಿ ನಮ್ಮ ಅಸ್ತಿತ್ವದ ಅರಿವಿಗೆ ಎಂದೆಂದಿಗೂ ದಾರಿದೀಪವಾಗಿದ್ದಾರೆ ಎಂದರು.

ಸಮುದಾಯ ಕುಂದಾಪುರದ ಅಧ್ಯಕ್ಷ ಡಾ. ಸದಾನಂದ ಬೈಂದೂರು ಪ್ರತಿಕ್ರಿಯೆ ನೀಡಿ ಮಾತನಾಡಿದರು.ಡಾ. ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕಾಲೇಜಿನ ಪ್ರಾಂಶುಪಾಲ ಪ್ರೊ. ಡಾ. ಕೆ. ಉಮೇಶ್ ಶೆಟ್ಟಿ, ವಿಚಾರ ಸಂಕಿರಣ ಸಂಯೋಜಕ ಉಪ ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ರಶ್ಮಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರಮೇಶ್ ಕಾಂಚನ್ ನೇತೃತ್ವದಲ್ಲಿ ಪೌರಾಯುಕ್ತರಿಗೆ ಮನವಿ

ಉಡುಪಿ, ನ.3: 31ನೇ ಬೈಲೂರು ವಾರ್ಡಿನ ಮಾಜಿ ನಗರಸಭಾ ಸದಸ್ಯರಾದ ರಮೇಶ್...

ಪಡುಕರೆ ಕಡಲ ತೀರದಲ್ಲಿ ಸ್ವಚ್ಛತಾ ಅಭಿಯಾನ

ಕೋಟ, ನ.3: ಪರಿಸರ ಸ್ನೇಹಿ ವಾರಾಂತ್ಯ ಸೇವಾ ಯೋಜನೆಯಾದ ಆನಂದ ಸೃಷ್ಟಿಯ...

ಉಡುಪಿ, ದ.ಕ: ಮಳೆ ಸಾಧ್ಯತೆ

ಉಡುಪಿ, ನ.3: ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ...

ರಥಬೀದಿ ಕಾಲೇಜಿನಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ

ಮಂಗಳೂರು, ನ.3: ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ...
error: Content is protected !!