Monday, May 4, 2026
Monday, May 4, 2026

ಬಿಜೆಪಿ ಗೆಲುವು ಐತಿಹಾಸಿಕ: ಕುಯಿಲಾಡಿ ಸುರೇಶ್ ನಾಯಕ್

ಬಿಜೆಪಿ ಗೆಲುವು ಐತಿಹಾಸಿಕ: ಕುಯಿಲಾಡಿ ಸುರೇಶ್ ನಾಯಕ್

Date:

ಕಾಪು: ಕಾಪು ಪುರಸಭೆ ಚುನಾವಣೆಯ 23 ಸ್ಥಾನಗಳಲ್ಲಿ 12 ಅಭ್ಯರ್ಥಿಗಳು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಗಳಿಸಿರುವ ಬಿಜೆಪಿ ಗೆಲುವು ಐತಿಹಾಸಿಕ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹರ್ಷ ವ್ಯಕ್ತಪಡಿಸಿದ್ದಾರೆ.

ಬಿಜೆಪಿಗೆ ಬಹುಮತ ನೀಡಿದ ಕಾಪು ಪುರಸಭಾ ವ್ಯಾಪ್ತಿಯ ಮತದಾರರಿಗೆ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುವ ಜೊತೆಗೆ ಚುನಾವಣಾ ಗೆಲುವಿಗೆ ಹಗಲಿರುಳು ಶ್ರಮಿಸಿರುವ ಸಚಿವರು, ಸಂಸದರು, ಶಾಸಕರು, ಪಕ್ಷದ ಮುಖಂಡರು, ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತ ಬಂಧುಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಕಾಪುವನ್ನು ಮಾದರಿ ಪುರಸಭೆಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಕುಡಿಯುವ ನೀರು, ಒಳಚರಂಡಿ, ತ್ಯಾಜ್ಯ ನಿರ್ವಹಣೆ, ದಾರಿದೀಪ, ಮೀನು ಮಾರುಕಟ್ಟೆ ಮುಂತಾದ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ವಿಶೇಷ ಒತ್ತು ನೀಡಿ ಮುಂದಿನ 5 ವರ್ಷಗಳಲ್ಲಿ ನವ ಕಾಪು ನಿರ್ಮಾಣದ ಸಂಕಲ್ಪದೊಂದಿಗೆ ಅತ್ಯಂತ ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಕುಯಿಲಾಡಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಟಪಾಡಿ: ನೂತನವಾಗಿ ಆರಂಭಗೊಂಡ ಸಾರಿಗೆ ಬಸ್ಸಿಗೆ ಸಂಭ್ರಮದ ಸ್ವಾಗತ

ಬ್ರಹ್ಮಾವರ, ಮೇ 4: ಬ್ರಹ್ಮವಾರ ಮಟಪಾಡಿ ನೀಲಾವರ ಮಾರ್ಗವಾಗಿ ತೆರಳುವ ಉಡುಪಿ...

ವಿದ್ಯಾರ್ಥಿಗಳೇ ನಿಮ್ಮ ಕನಸು ದೊಡ್ಡದಾಗಿರಲಿ: ಸಟ್ವಾಡಿ ವಿಜಯ ಶೆಟ್ಟಿ

ಕುಂದಾಪುರ, ಮೇ 4: ಶ್ರೀ ಶಾರದಾ ಕಾಲೇಜು ಬಸ್ರೂರು ಇಲ್ಲಿ ಆಹ್ವಾನಿತ...
error: Content is protected !!