Sunday, June 21, 2026
Sunday, June 21, 2026

ರೊಜಾರಿಯೊ ಪ್ರೌಢಶಾಲೆ- ಮಕ್ಕಳ ದಿನಾಚರಣೆ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ

ರೊಜಾರಿಯೊ ಪ್ರೌಢಶಾಲೆ- ಮಕ್ಕಳ ದಿನಾಚರಣೆ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ

Date:

ಮಂಗಳೂರು: ರೊಜಾರಿಯೊ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ರೊಜಾರಿಯೊ ಕಲ್ಚರಲ್ ಸಭಾಂಗಣದಲ್ಲಿ ನಡೆಯಿತು. ಸಂಚಾಲಕ ವ। ಫಾದರ್ ಅಲ್ಪ್ರೇಡ್ ಜೆ. ಪಿಂಟೋ ವಿದ್ಯಾರ್ಥಿ ನಾಯಕ ಸೋಹಾನ್ ಕೋಟ್ಯಾನ್ ಜೊತೆಗೂಡಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಪಂಡಿತ್ ಜವಾಹರಲಾಲ್ ನೆಹರೂ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶುಭ ಹಾರೈಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮವು ಪ್ರಾರ್ಥನೆ ಮತ್ತು ಸ್ವಾಗತ ನೃತ್ಯದೊಂದಿಗೆ ಪ್ರಾರಂಭವಾಯಿತು. ವಿದ್ಯಾರ್ಥಿನಿ ಪೂಜಾ ದಿನದ ಮಹತ್ವವನ್ನು ತಿಳಿಸಿದರು. ವಿದ್ಯಾರ್ಥಿಗಳಿಂದ ಮತ್ತು ಶಿಕ್ಷಕರಿಂದ ನೃತ್ಯ, ಸಂಗೀತ, ಮನೋರಂಜನಾ ಕಾರ್ಯಕ್ರಮ ನಡೆಯಿತು.

ವಿವಿಧ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಮುಖ್ಯೋಪಾಧ್ಯಾಯರಾದ ಅಲೋಶಿಯಸ್ ಡಿಸೋಜ ಸ್ವಾಗತಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಗಿಲ್ಬರ್ಟ್ ಡಿಸಿಲ್ವ, ಪೋಷಕ -ರಕ್ಷಕ ಸಂಘದ ನಳಿನಿ ಶೆಟ್ಟಿ, ಹಿರಿಯ ಶಿಕ್ಷಕಿ ಅಲಿಸ್ ಕೆ.ಜೆ.,ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು, ಪೋಷಕರು ಉಪಸ್ಥಿತರಿದ್ದರು.

ಶಿಕ್ಷಕ ಪ್ರದೀಪ್ ಡಿ.ಎಮ್.ಹಾವಂಜೆ ಮತ್ತು ಶಿಕ್ಷಕಿ ಜೆನೆವಿವ್ ಡಿಸೋಜ ಕಾರ್ಯಕ್ರಮ ಸಂಯೋಜಿಸಿದರು. ವಿದ್ಯಾರ್ಥಿನಿಯರಾದ ಆಯಿಷಾ ಹಿದಾ ಮತ್ತು ಮೋನಿಕಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಅವಿನಾಶ್ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಅರಿವು ಕಾರ್ಯಕ್ರಮ

ಉಡುಪಿ, ಜೂ.20: ಉಡುಪಿ ನಗರಸಭೆ ಹಾಗೂ ಆರೋಗ್ಯ ಇಲಾಖೆ ಇವರ ಜಂಟಿ...

ಜಿಲ್ಲಾ ರೆಡ್‌ಕ್ರಾಸ್ ಸಭಾಪತಿಗಳಾಗಿ ಡಾ..ಅಶೋಕ್ ಕುಮಾರ್ ಆಯ್ಕೆ

ಉಡುಪಿ, ಜೂ.20: ರೆಡ್‌ಕ್ರಾಸ್ ಭವನದಲ್ಲಿ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಮುಂದಿನ...

ಪರಿಸರದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮಾಧ್ಯಮದ ಪಾತ್ರ ಮುಖ್ಯ: ಡಿಎಫ್‌ಓ ಸಿವರಾಮ್ ಬಾಬು

ಉಡುಪಿ, ಜೂ.20: ಪರಿಸರ ದಿನಾಚರಣೆ ಎಂಬುದು ಕೇವಲ ಒಂದೇ ದಿನದಲ್ಲಿ ಮಾಡುವ...

ಹವಾಮಾನಾಧಾರಿತ ಬೆಳೆ ವಿಮೆ ಯೋಜನೆ: ನೋಂದಣಿಗೆ ಜೂ. 30 ಕೊನೆ ದಿನ

ಉಡುಪಿ, ಜೂ.20: ಜಿಲ್ಲೆಯಲ್ಲಿ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ಹವಾಮಾನ ವೈಪರಿತ್ಯದಿಂದಾಗಿ...
error: Content is protected !!