Monday, June 8, 2026
Monday, June 8, 2026

ರಥಬೀದಿ ಕಾಲೇಜು: ತುಳು ಐಸಿರೊ-2026

ರಥಬೀದಿ ಕಾಲೇಜು: ತುಳು ಐಸಿರೊ-2026

Date:

ಮಂಗಳೂರು, ಏ.14: ಇಂದಿನ ಸಾಮಾಜಿಕ ಮಾಧ್ಯಮ, ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಯುವಜನರಿಗೆ ಪರಿಚಯಿಸುವ ಕಾರ್ಯಕ್ರಮಗಳು ಸಂಸ್ಕೃತಿ ಸಂರಕ್ಷಣೆಗೆ ತೀರಾ ಅಗತ್ಯ ಎಂದು ಸಂತ ಅಲೋಶಿಯಸ್ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕ, ಕರಾವಳಿ ವಿಕಿಮಿಡಿಯನ್ ಅಧ್ಯಕ್ಷ ಡಾ. ವಿಶ್ವನಾಥ ಬದಿಕಾನ ಹೇಳಿದರು.

ಅವರು ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತುಳು ವಿಭಾಗ ಮತ್ತು ಸಾಂಸ್ಕೃತಿಕ ವೇದಿಕೆ ಜಂಟಿಯಾಗಿ ನಡೆಸಿದ ತುಳು ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ವೈವಿಧ್ಯಮಯ ಅಂತರ್ ಕಾಲೇಜು ಸ್ಪರ್ಧೆ “ಐಸಿರೊ-2026″ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಯಕರ ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜಕರಾದ ದೇವಿಪ್ರಸಾದ್, ಕಾರ್ಯಕ್ರಮ ಸಂಘಟಿಸಿದ ತುಳು ವಿಭಾಗದ ಡಾ. ಜ್ಯೋತಿಪ್ರಿಯ ಸ್ವಾಗತಿಸಿ, ವಿದ್ಯಾರ್ಥಿನಿ ಮನ್ವಿತಾ ನಿರ್ವಹಿಸಿದರು. ಸಾಂಸ್ಕೃತಿಕ ವೇದಿಕೆಯ ಸಂಯೋಜಕರು ಮತ್ತು ಸದಸ್ಯರಾದ ಡಾ. ಕೃಷ್ಣಪ್ರಭಾ, ಕ್ಷಮಾ, ಗ್ರಂಥಪಾಲಕಿ ಉಮಾ ಎ ಬಿ, ಡಾ. ಸುಪರ್ಣ ಮತ್ತಿತರ ಅಧ್ಯಾಪಕರು ಉಪಸ್ಥಿತರಿದ್ದರು.

ನಂತರ ನಡೆದ ತುಳು ಭಾಷೆ, ಸಂಸ್ಕೃತಿಗೆ ಸಂಬಂಧಿಸಿದ ಹತ್ತು ವಿವಿಧ ಸ್ಪರ್ಧೆಗಳಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಎಂಟು ಸರಕಾರಿ ಪದವಿ ಕಾಲೇಜುಗಳಿಂದ ಆಗಮಿಸಿದ್ದ ಸುಮಾರು 120ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದರು. ಸಮಗ್ರ ಪ್ರಶಸ್ತಿಗಳಲ್ಲಿ ಮೊದಲ ಸ್ಥಾನವನ್ನು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಪುತ್ತೂರು, ದ್ವಿತೀಯ ಸ್ಥಾನವನ್ನು ಕಾಪು ಸರಕಾರಿ ಕಾಲೇಜು ಹಾಗೂ ತೃತೀಯ ಸ್ಥಾನವನ್ನು ಪುಂಜಾಲಕಟ್ಟೆ ಸರಕಾರಿ ಕಾಲೇಜು ಪಡೆದುಕೊಂಡವು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ದುಗ್ಗಪ್ಪ ಕಜೆಕಾರ್ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 29 ರೂ. ಏರಿಕೆ

ನವದೆಹಲಿ, ಜೂ.7: ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 29 ರೂ....

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನಾಕ್ರೋಶಕ್ಕೆ ಬಲಿಯಾಗಲಿದೆ: ರಮೇಶ್ ಕಾಂಚನ್

ಉಡುಪಿ, ಜೂ.7: ಪ್ರತಿದಿನ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆಯ ಮೂಲಕ...

ಅಂತರಾಷ್ಟ್ರೀಯ ಕ್ರೀಡಾಕೂಟ: ಉಡುಪಿ ಜಿಲ್ಲೆಯ ತೆಂಕನಿಡಿಯೂರಿನ ಸುರೇಶ್ ಅವರಿಗೆ ಅವಳಿ ಚಿನ್ನದ ಪದಕ

ಉಡುಪಿ, ಜೂ.7: ಸಂಯುಕ್ತ ಭಾರತೀಯ ಕೇಲ್ ಫೌಂಡೇಷನ್ ವತಿಯಿಂದ ಆಯೋಜಿಸಿದ 14ನೇ...
error: Content is protected !!