Wednesday, July 29, 2026
Wednesday, July 29, 2026

ಕವಿ ಕೆ.ವಿ.ತಿರುಮಲೇಶ್ ಕವಿತೆಗಳು ಮಲೆಯಾಳಕ್ಕೆ

ಕವಿ ಕೆ.ವಿ.ತಿರುಮಲೇಶ್ ಕವಿತೆಗಳು ಮಲೆಯಾಳಕ್ಕೆ

Date:

ಮಲೆಯಾಳದ ಮಹಾಕವಿ ಚಙ್ಙಪ್ಪುಳ ಕೃಷ್ಣ ಪಿಳ್ಳೆಯವರು ಹೇಳಿದಂತೆ ಕಾವ್ಯವು ಒಬ್ಬ ನರ್ತಕಿ ಇದ್ದಂತೆ. ನರ್ತಕಿ ತನಗೆ ಹೇಳಬೇಕಾದ ವಿಚಾರಗಳನ್ನು ಸನ್ನೆ – ಸಂಕೇತಗಳ ಮೂಲಕವೇ ಸೂಚಿಸುತ್ತಾಳೆ. ಚಙ್ಙಪ್ಪುಳ, ವಳ್ಳತ್ತೋಳ್, ಉಳ್ಳೂರ್ ಮೊದಲಾದ ಮಹಾಕವಿಗಳು ಮಲೆಯಾಳ ಕಾವ್ಯದ ತೋರುಗಂಬಗಳಾಗಿ ಉತ್ಕೃಷ್ಟ ಕಾವ್ಯ ರಚನೆ ಮಾಡಿದರು. ವೇದ-ಉಪನಿಷತ್ತುಗಳು, ರಾಮಾಯಣ, ಮಹಾಭಾರತ, ಮೊದಲಾದ ಮಹಾಕಾವ್ಯಗಳು, ಭಗವದ್ಗೀತೆಯಂಥ ಅಮೂಲ್ಯ ಗ್ರಂಥ, ಕಾಳಿದಾಸ-ಭಾಸರಂಥ ಮಹಾಕವಿಗಳು ಸಾಹಿತ್ಯವನ್ನು ಶ್ರೀಮಂತವಾಗಿಸಿದಂತಹ ನಾಡು ನಮ್ಮದು. ಅವರ ಆದರ್ಶದಲ್ಲೇ ಮಲೆಯಾಳ ಕಾವ್ಯವು ರೂಪ ಪಡೆಯಿತು. ಅಂಥ ಸಾಹಿತ್ಯಕ್ಕೆ ಈಗ ಕೆ.ವಿ.ತಿರುಮಲೇಶ್ ಅವರ ಕಾವ್ಯವೂ ಅನುವಾದದ ಮೂಲಕ ಸೇರ್ಪಡೆಗೊಳ್ಳುತ್ತಿರುವುದು ತುಂಬಾ ಸಂತಸ ಪಡಬೇಕಾದ ಸಂಗತಿ ಎಂದು ಮಣಿಪಾಲ ಕೆ.ಎಂ.ಸಿ.ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ಜಯರಾಜ್ ಹೇಳಿದರು.

ಅವರು ಎಸ್.ಎಂ.ಎಸ್.ಕಾಲೇಜಿನ ಕಿರು ಸಭಾಂಗಣದಲ್ಲಿ ಡಾ.ಪಾರ್ವತಿ ಜಿ.ಐತಾಳ್ ಮಲೆಯಾಳಕ್ಕೆ ಅನುವಾದಿಸಿದ ಕೆ.ವಿ.ತಿರುಮಲೇಶಿಂದೆ ತೆರಞ್ಣೆಡುತ್ತ ಕವಿತಗಳ್ (ಕೆ.ವಿ.ತಿರುಮಲೇಶರ ಆಯ್ದ ಕವಿತೆಗಳು) ಕೃತಿಯ ಅನಾವರಣಕ್ಕಾಗಿ ಏರ್ಪಡಿಸಿದ ಸರಳ ಸಮಾರಂಭದಲ್ಲಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲರಾದ ಗಣಪತಿ ಭಟ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಡಾ.ಪಾರ್ವತಿ ಜಿ.ಐತಾಳ್ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಪ್ರೊ.ಬಾಬುರಾಜ್ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿ, ಸಹ-ಅನುವಾದಕ ಡಾ.ಟಿ.ಕೆ.ರವೀಂದ್ರನ್ ಅವರ ಅನುಪಸ್ಥಿತಿಯ ಕಾರಣದಿಂದ ಅವರು ಕೃತಿಯ ಕುರಿತು ಬರೆದ ಪ್ರಬಂಧವನ್ನು ಓದಿ ಹೇಳಿದರು. ಮುಖಚಿತ್ರ ಕಲಾವಿದರಾದ ಡಾ.ಹರ್ಷಿತ್ ಕ್ರಮಧಾರಿಯವರನ್ನು ಸನ್ಮಾನಿಸಲಾಯಿತು. ಜೆಸ್ಸಿ ಎಲಿಝಬೆತ್ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನಿವೃತ್ತ ಶಿಕ್ಷಕ ಮಲ್ಪೆ ರಾಘವೇಂದ್ರರಿಗೆ ಸೇವಾ ಪ್ರಶಸ್ತಿ

ಕಟಪಾಡಿ, ಜು.28: ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದಲ್ಲಿ...

ಹೆಜಮಾಡಿ ಟೋಲ್ ಸಮಸ್ಯೆ: ಅಧಿಕಾರಿಗಳು ಮತ್ತು ಸ್ಥಳೀಯರೊಂದಿಗೆ ಶಾಸಕರ ಸಭೆ

ಹೆಜಮಾಡಿ, ಜು.28: ಹೆಜಮಾಡಿ ಟೋಲ್ ಸಮಸ್ಯೆಗೆ ಸಂಬಂಧಿಸಿದಂತೆ ಶಾಸಕರಾದ ಗುರ್ಮೆ ಸುರೇಶ್...

ಶ್ರೀ ಕಾಮೇಶ್ವರ ದೇವಸ್ಥಾನ ಬೈಕಾಡಿ: ಸಮಿತಿ ಸದಸ್ಯರಿಂದ ಧರ್ಮಸ್ಥಳ ಭೇಟಿ

ಬ್ರಹ್ಮಾವರ, ಜು.28: ಶ್ರೀ ಕಾಮೇಶ್ವರ ದೇವಸ್ಥಾನ ಬೈಕಾಡಿ ಇದರ ಅಭಿವೃದ್ಧಿ ಮತ್ತು...
error: Content is protected !!