Tuesday, April 28, 2026
Tuesday, April 28, 2026

ಪೋಷಕರು ಶಾಲೆಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು: ರಶ್ಮಿ ಭಟ್

ಪೋಷಕರು ಶಾಲೆಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು: ರಶ್ಮಿ ಭಟ್

Date:

ಉಡುಪಿ: ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ ಅಥವಾ ಮೊಬೈಲ್ ತೆಗೆಸಿಕೊಟ್ಟು ಸುಮ್ಮನಾದರೆ ಸಾಲದು. ಮಕ್ಕಳ ವರ್ತನೆಯನ್ನು ಗಮನಿಸುತ್ತ ಶಾಲೆಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಆಗ ಮಾತ್ರ ಸಾಧನೆ ಮಾಡಲು ಶಿಕ್ಷಕರು ಮಕ್ಕಳನ್ನು ಪ್ರೇರೇಪಿಸಬಹುದು, ಸಾಧಿಸುವ ಛಲವನ್ನು ಹುಟ್ಟು ಹಾಕಬಹುದು. ಹಾಗಾಗಿ ಪೋಷಕರು ಆಗಾಗ್ಗೆ ಶಾಲೆಗೆ ಭೇಟಿ ನೀಡುವುದು ಸೂಕ್ತ ಎಂದು ಅಜ್ಜರಕಾಡು ವಾರ್ಡ್ ನಗರಸಭಾ ಸದಸ್ಯೆ ರಶ್ಮಿ ಸಿ. ಭಟ್ ಅಭಿಪ್ರಾಯಪಟ್ಟರು.

ಅವರು ಉಡುಪಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಮತ್ತು ಪೋಷಕರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಈ ಶಾಲೆಯ ವಿದ್ಯಾರ್ಥಿನಿಯರ ಪೋಷಕರು ಬಹುಪಾಲು ಪ್ರಜ್ಞಾವಂತರಾಗಿದ್ದಾರೆ, ಆದ್ದರಿಂದ ಶಿಕ್ಷಕರ ಪ್ರಯತ್ನ ಸಾರ್ಥಕವಾಗುತ್ತಿದೆ. ಶಾಲೆಗೆ ಪೋಷಕರ ಸಹಕಾರ ಇದೇ ರೀತಿ ಮುಂದುವರಿಯಲಿ ಎಂದು ಆಶಿಸಿದರು.

ಸಭಾಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ರುದ್ರೇ ಗೌಡ ವಹಿಸಿ ಮಾತನಾಡುತ್ತಾ, ಸಾಧನೆ ಮಾಡಿದ ವಿದ್ಯಾರ್ಥಿನಿಯರು ತಮ್ಮ ನಂತರದ ಬ್ಯಾಚ್ ನ ವಿದ್ಯಾರ್ಥಿನಿಯರಿಗೆ ತಮ್ಮ ಸಾಧನಾ ಪಥವನ್ನು ವಿವರಿಸಿ ಹೇಳಿ ಅವರಿಗೂ ಮಾರ್ಗದರ್ಶನ ಮಾಡಬೇಕೆಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ತಾರಾ ದೇವಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಅಂಕಗಳಿಸಿ ಪ್ರಥಮ ಸ್ಥಾನಿಯಾದ ಸಮತಾ ಹಾಗೂ ಇಪ್ಪತ್ತು ಮಂದಿ ಸಾಧಕ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಸಮತಾ ತನ್ನ ಅನುಭವವನ್ನು ಹಂಚಿಕೊಂಡರು.

ಶೈಕ್ಷಣಿಕ ವರ್ಷದ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಹೊಸ ಸದಸ್ಯರನ್ನೂ ಕೂಡ ಆಯ್ಕೆ ಮಾಡಲಾಯಿತು.

ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಶಿಕ್ಷಕ ರಾಮಚಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು. ಶೇಖರ್ ಬೋವಿ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರಾಷ್ಟ್ರೀಯ ಗೋಮಾತೆ ಗೌರವ ಅಭಿಯಾನ ಸರಕಾರಕ್ಕೆ ಮನವಿ ಸಲ್ಲಿಕೆ

ಬ್ರಹ್ಮಾವರ, ಏ.27: ಗೋಮಾತೆಯ ಗೌರವ ಅಭಿಯಾನ ಅಂಗವಾಗಿ ಗೋಮಾತಾ ಗೌರವ ದಿನಾಚರಣೆಯನ್ನು...

ಕಸ್ತೂರ್ಬಾ ಆಸ್ಪತ್ರೆ: ವೃತ್ತಿಪರರ ಸಪ್ತಾಹ 2026 ಆಚರಣೆ

ಮಣಿಪಾಲ, ಏ.27: ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲವು ಏಪ್ರಿಲ್ 25 ರಂದು ವೈದ್ಯಕೀಯ...

ಶ್ರೀ ಕೃಷ್ಣ ಮಠಕ್ಕೆ ಉತ್ತರಾಧಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರ ಭೇಟಿ

ಉಡುಪಿ, ಏ.27: ಪರ್ಯಾಯ ಶ್ರೀ ಶೀರೂರು ಮಠ ಪರ್ಯಾಯ ಪೀಠಾಧೀಶರಾದ ಶ್ರೀ...

ನಾಗಬನದಲ್ಲಿ ಅಪೂರ್ವ ಕಾರ್ಯಕ್ರಮ

ಉಡುಪಿ, ಏ.26: ಸುಮಾರು ಒಂದು ಸಾವಿರ ವರ್ಷಗಳ ಹಳೆಯ ಶ್ರೀ ನಾಗಬ್ರಹ್ಮಸ್ಥಾನ...
error: Content is protected !!