Saturday, October 17, 2026
Saturday, October 17, 2026

ರಾಷ್ಟ್ರೀಯ ಗೋಮಾತೆ ಗೌರವ ಅಭಿಯಾನ ಸರಕಾರಕ್ಕೆ ಮನವಿ ಸಲ್ಲಿಕೆ

ರಾಷ್ಟ್ರೀಯ ಗೋಮಾತೆ ಗೌರವ ಅಭಿಯಾನ ಸರಕಾರಕ್ಕೆ ಮನವಿ ಸಲ್ಲಿಕೆ

Date:

ಬ್ರಹ್ಮಾವರ, ಏ.27: ಗೋಮಾತೆಯ ಗೌರವ ಅಭಿಯಾನ ಅಂಗವಾಗಿ ಗೋಮಾತಾ ಗೌರವ ದಿನಾಚರಣೆಯನ್ನು ಅದೇ ರೀತಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ ಅವರ ಮೂಲಕ ಮನವಿ ಸಲ್ಲಿಸಲಾಯಿತು. ಮಾಹಿತಿ ನೀಡಿದ ಗೋಮಾತಾ ಗೌರವ ಅಭಿಯಾನದ ಉಡುಪಿ ದಕ್ಷಿಣ ಕನ್ನಡ ಜಿಲ್ಲಾ ಪ್ರಮುಖ ಶ್ರೀ ಕ್ಷೇತ್ರ ಶಂಕರಪುರದ ಪೀಠಾಧ್ಯಕ್ಷರಾದ ಶ್ರೀ ಸಾಯಿ ಈಶ್ವರ್ ಗುರೂಜಿ, ಗೋವನ್ನು ರಾಷ್ಟ್ರ ಮಾತೆಯನ್ನಾಗಿ ಗೌರವದ ಸ್ಥಾನಮಾನ ನೀಡಬೇಕು. ಗೋ ಸೇವೆಗಾಗಿ ಕೇಂದ್ರೀಯ ಕಾನೂನನ್ನು ಜಾರಿಗೆ ತರಬೇಕು ಮತ್ತು ಕೇಂದ್ರೀಯ ಸತ್ಯವಾಲಯವನ್ನು ಸ್ಥಾಪನೆ ಮಾಡಬೇಕು ಎಂದು ಹೇಳಿದರು. ಮೇವು ಭದ್ರತಾ ನೀತಿ, ಗೋ ಆಧಾರಿತ ಕೃಷಿ ಗೋ ಉತ್ಪನ್ನಗಳ ಮಾರುಕಟ್ಟೆ ಹೆಚ್ಚಳ, ಅದೇ ರೀತಿ ದೇಶದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರುವಂತೆ ಮನವಿಯಲ್ಲಿ ತಿಳಿಸಲಾಗಿದೆ.

ಗೋಮಾತೆಯ ಗೌರವ ಅಭಿಯಾನದ ಬ್ರಹ್ಮಾವರ ತಾಲೂಕು ಪ್ರಮುಖರಾದ ರಾಘವೇಂದ್ರ ಪ್ರಭು ಕರ್ವಾಲು, ಸುಂದರ ಪೂಜಾರಿ ಮೂಡುಕುಕ್ಕುಡೆ, ಮಧುಸೂದನ್ ಹೇರೂರು, ಶ್ರೀನಾಥ್ ಕೋಟ, ಸತ್ಯರಾಜ್ ಬ್ರಹ್ಮಾವರ, ಸತೀಶ್ ಮುಂತಾದವರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೆಚ್‌ಐವಿ /ಏಡ್ಸ್ ಅರಿವು ಮೂಡಿಸಲು ಜಿಲ್ಲಾಮಟ್ಟದ ರೆಡ್ ರಿಬ್ಬನ್ ರನ್ ಮ್ಯಾರಥಾನ್

ಉಡುಪಿ, ಅ.17: ಹೆಚ್‌ಐವಿ/ಏಡ್ಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಯುವಜನರಲ್ಲಿ ಆರೋಗ್ಯದ...

ಪೊಲೀಸರಂತೆ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರ ಕಾರ್ಯ ಶ್ಲಾಘನೀಯ: ಹರಿರಾಮ್ ಶಂಕರ್

ಉಡುಪಿ, ಅ.17: ಕಾನೂನು ಸುವ್ಯವಸ್ಥೆ, ಬಂದೋಬಸ್ತ್ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪೊಲೀಸ್...

ಕಾರ್ಮಿಕರು ತಮ್ಮ ಹಕ್ಕುಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ.ಶಾಹಿದ್ ತೆಕ್ಕಿಲ್

ಉಡುಪಿ, ಅ.17: ಸರಕಾರವು ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಜಾರಿಗೊಳಿಸಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಅರ್ಹ...
error: Content is protected !!