Monday, July 27, 2026
Monday, July 27, 2026

ಸಿದ್ದರಾಮಯ್ಯ ಅವರಿಂದ ಹಿಂದುತ್ವದ ಪಾಠ ಕಲಿಯುವ ಅಗತ್ಯತೆ ಬಿಜೆಪಿಗಿಲ್ಲ: ಐರೋಡಿ ವಿಠ್ಠಲ್ ಪೂಜಾರಿ

ಸಿದ್ದರಾಮಯ್ಯ ಅವರಿಂದ ಹಿಂದುತ್ವದ ಪಾಠ ಕಲಿಯುವ ಅಗತ್ಯತೆ ಬಿಜೆಪಿಗಿಲ್ಲ: ಐರೋಡಿ ವಿಠ್ಠಲ್ ಪೂಜಾರಿ

Date:

ಕೋಟ: ಈ ಹಿಂದೆ ಸ್ವ ಪಕ್ಷದ ಶಾಸಕರಾದ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಮೇಲೆ ಸ್ವ-ಪಕ್ಷದ ಕಾರ್ಯಕರ್ತರೆಲ್ಲ ಗುಂಪಾಗಿ ಹೋಗಿ ದೌರ್ಜನ್ಯ ಹಿಂಸೆ ಮಾಡಿ ಮನೆ ಆಸ್ತಿ ಪಾಸ್ತಿಗೆ ಬೆಂಕಿ ಇಟ್ಟಾಗ, ಸಿದ್ದರಾಮಯ್ಯ ಅವರಿಗೆ ಇಲ್ಲದ ಕಾಳಜಿ ಈಗ ರಾಜಕೀಯ ಚದುರಂಗದಾಟಕ್ಕೆ ಧಾಳವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯದರ್ಶಿ ಐರೋಡಿ ವಿಠ್ಠಲ ಪೂಜಾರಿ ಹೇಳಿದ್ದಾರೆ.

ಭಾರತೀಯ ಜನತಾ ಪಾರ್ಟಿ ಹಿಂದುತ್ವ, ಸನಾತನ ಧರ್ಮದ ಯಾವುದೇ ಪಂಗಡ ಸಮುದಾಯದವರ ವಿರುದ್ಧ ಎಷ್ಟೇ ಪ್ರಭಾವಿಗಳು ದೌರ್ಜನ್ಯ ಎಸಗಲು ಬಂದರೂ, ಎಸಗಿದರೂ ನಾವು ಖಂಡಾತುಂಡವಾಗಿ ಖಂಡಿಸುತ್ತೇವೆ.

ತಪ್ಪು ಮಾಡಿದ ಯಾವುದೇ ವ್ಯಕ್ತಿಯನ್ನಾಗಲಿ, ಅಧಿಕಾರಿಯನ್ನಾಗಲಿ ರಕ್ಷಣೆ ಮಾಡುವ ಅಗತ್ಯತೆ ನಮಗಿಲ್ಲ. ಈ ನೆಲದ ಕಾನೂನನ್ನು ಗೌರವಿಸುವ ನಾವು ಅಪರಾಧ ಮಾಡಿದವರಿಗೆ ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷೆಯಾಗಿ ದೌರ್ಜನ್ಯ ಹಿಂಸೆಯಿಂದ ನೊಂದವರಿಗೆ ನ್ಯಾಯ ಸಿಗಬೇಕು ಎನ್ನುವುದು ನಮ್ಮ ಪ್ರಪ್ರಥಮ ಆದ್ಯತೆ ಹಾಗು ಬದ್ಧತೆ ಕೂಡ ಹೌದು.

ಹಾಗಾಗಿ ಸಿದ್ದರಾಮಯ್ಯನವರ ನೀತಿ ಪಾಠ, ಬೋಧನೆಯ ಅವಶ್ಯಕತೆ ಭಾಜಪ ಪಕ್ಷಕ್ಕೆ ಇಲ್ಲ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೊರ್ಚಾ ರಾಜ್ಯ ಕಾರ್ಯದರ್ಶಿ ಐರೋಡಿ ವಿಠ್ಠಲ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದು ಹೆಮ್ಮೆಯ ಕ್ಷಣ: ಕಾರ್ಗಿಲ್ ಯೋಧ ಅನಂತಪದ್ಮನಾಭ ನಾಯಕ್

ಶಿರ್ವ, ಜು.26: 1999 ರ ಕಾರ್ಗಿಲ್ ಯುದ್ಧದಲ್ಲಿ ಭಾರತ ದೇಶದ ಪರವಾಗಿ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ದೇಶದ ಎಚ್ಚೆತ್ತ ಯುವಜನರ ಗೆಲುವಾಗಿದೆ: ಸಿದ್ದರಾಮಯ್ಯ

ಬೆಂಗಳೂರು, ಜು.26: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ದೇಶದ ಎಚ್ಚೆತ್ತ ಯುವಜನರ ಗೆಲುವಾಗಿದೆ....
error: Content is protected !!