Monday, August 31, 2026
Monday, August 31, 2026

ಮೀನುಗಾರರಿಗೆ ಕೋವಿಡ್-2ನೇ ಅಲೆಯ ಪರಿಹಾರ ಪ್ಯಾಕೇಜ್

ಮೀನುಗಾರರಿಗೆ ಕೋವಿಡ್-2ನೇ ಅಲೆಯ ಪರಿಹಾರ ಪ್ಯಾಕೇಜ್

Date:

ರಾಜ್ಯದಲ್ಲಿ ಕೋವಿಡ್ 2ನೇ ಅಲೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈಗಾಗಲೇ ಲಾಕ್ ಡೌನ್ ಜಾರಿಯಲ್ಲಿದ್ದು. ಇದರಿಂದ ಬಾಧಿತವಾದ ಸಮಾಜದ ವಿವಿಧ ವರ್ಗಗಳಿಗೆ ಪರಿಹಾರದ ಪ್ಯಾಕೇಜ್ ನ್ನು ಸರ್ಕಾರವು ಘೋಷಣೆ ಮಾಡಿದೆ.
ಪ್ರಸ್ತುತ ಸಾಲಿನಲ್ಲಿ ಭಾರತ ಸರ್ಕಾರದ ಉಳಿತಾಯ ಮತ್ತು ಪರಿಹಾರ ಯೋಜನೆಯಡಿ ನೋಂದಾಯಿಸಿಕೊಂಡ ಮೀನುಗಾರರಿಗೆ ತಲಾ ರೂ.3000ಗಳ ಪರಿಹಾರವನ್ನು ಕೋವಿಡ್ ಎರಡನೇ ಪ್ಯಾಕೇಜ್ ನಿಧಿಯಡಿಯಲ್ಲಿ ಸರ್ಕಾರದ ಮಾರ್ಗಸೂಚಿ ಮೇರೆಗೆ ಘೋಷಿಸಲಾಗಿದೆ.

ಈ ಯೋಜನೆಯ ಸದರಿ ಪರಿಹಾರವನ್ನು ಡಿ.ಬಿ.ಟಿ (ಡೈರೆಕ್ಟ್ ಬೆನಿಫಿಶರಿ ಟ್ರಾನ್ಸ್ಪರ್ ಪೋರ್ಟಲ್) ಮುಖಾಂತರ ಅರ್ಹ ಫಲಾನುಭವಿಗಳಿಗೆ ಪಾವತಿಸಬೇಕಾಗಿರುವುದರಿಂದ ಎಲ್ಲಾ ಫಲಾನುಭವಿಗಳು ತಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡದಿದ್ದಲ್ಲಿ ಕೂಡಲೇ ಲಿಂಕ್ ಮಾಡಿಸತಕ್ಕದ್ದು.

ಸಾಂಪ್ರದಾಯಿಕ ದೋಣಿ ಮಾಲೀಕರು (ಎನ್ ಎಮ್-ನಾನ್-ಮೋಟರೈಸ್ಡ್ ಅಡಿಯಲ್ಲಿ ನೋಂದಾಯಿತ ದೋಣಿ ಮಾಲೀಕರು) ತಮ್ಮದೋಣಿಯ ಆರ್.ಸಿ., ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ, ಆಧಾರ್ ಲಿಂಕ್ ಲಗತ್ತಿಸಲಾದ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯನ್ನು ಸಂಬಂಧಿತ ಪ್ರಾಧಿಕೃತ ಅಧಿಕಾರಿಗಳ ಕಚೇರಿಗೆ ಒದಗಿಸಬೇಕೆಂದು ಮೀನುಗಾರಿಕೆ ಹಿರಿಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತೆಂಕನಿಡಿಯೂರು ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

ಉಡುಪಿ, ಆ.30: ವಿಶ್ವವೇ ಕಂಡ ಅತ್ಯದ್ಭುತ ಕ್ರೀಡಾಪಟು, ಹಾಕಿ ದಂತಕಥೆ ಮೇಜರ್...

ಕೆಂಜೂರು ಆಯುಷ್ಮಾನ್ ಆರೋಗ್ಯ ಕೇಂದ್ರ ಕಾಮಗಾರಿಗೆ ಶಿಲಾನ್ಯಾಸ

ಬ್ರಹ್ಮಾವರ, ಆ.30: ಕಳ್ತೂರು ಗ್ರಾಮ ಪಂಚಾಯತ್ ಕೆಂಜೂರಿನಲ್ಲಿ ಸುಮಾರು 65 ಲಕ್ಷ...

ಎಸ್.ಐ.ಆರ್ ಪರಿಶೀಲನಾ ಸಭೆ ಮತ್ತು ಬಿ.ಎಲ್.ಎ-2 ಕಾರ್ಯಗಾರ

ಕಾಪು, ಆ.30: ಭಾರತೀಯ ಜನತಾ ಪಾರ್ಟಿ ಕಾಪು ವಿಧಾನಸಭಾ ಕ್ಷೇತ್ರ ಎಸ್.ಐ.ಆರ್...

ಕಾಪು ಪುರಸಭೆಯ ಸಾಮಾನ್ಯ ಸಭೆ

ಕಾಪು, ಆ.30: ಕಾಪು ಪುರಸಭೆಯ ಸಾಮಾನ್ಯ ಸಭೆ ಕಾಪು ಪುರಸಭೆಯ ಸಭಾಂಗಣದಲ್ಲಿ...
error: Content is protected !!