Saturday, October 3, 2026
Saturday, October 3, 2026

ಹೃದ್ರೋಗ ತಜ್ಞರೊಂದಿಗೆ ನೇರ ಮಾತುಕತೆ ಮತ್ತು ಚರ್ಚೆ

ಹೃದ್ರೋಗ ತಜ್ಞರೊಂದಿಗೆ ನೇರ ಮಾತುಕತೆ ಮತ್ತು ಚರ್ಚೆ

Date:

ಮಣಿಪಾಲ: ವಿಶ್ವ ಹೃದಯ ದಿನ 2021 ಅಂಗವಾಗಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ವತಿಯಿಂದ ಸೆಪ್ಟೆಂಬರ್ 29 ಬುಧವಾರದಂದು ಸಂಜೆ 5.00 ರಿಂದ 6.00 ಗಂಟೆಯವರೆಗೆ ಕಸ್ತೂರ್ಬಾ ಆಸ್ಪತ್ರೆಯ ಫೇಸ್ ಬುಕ್ ಚಾನೆಲ್ ನಲ್ಲಿ ಹೃದ್ರೋಗ ತಜ್ಞರೊಂದಿಗೆ ನೇರ ಮಾತುಕತೆ ಮತ್ತು ಮುಕ್ತ ಚರ್ಚಾ ಕಾರ್ಯಕ್ರಮವನ್ನು ಆಯೋಜಿಸಿದೆ.

ಲಾಕ್ಡೌನ್ ಮತ್ತು ಕೋವಿಡ್ -19 ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಜನರ ಮೇಲೆ ಪರಿಣಾಮ ಬೀರಿತು. ಇದಕ್ಕೆ ಕಾರಣ ಹೆಚ್ಚಾಗಿ ಮನೆಯಲ್ಲಿಯೇ ಕುಳಿತು ಕೆಲಸ ಮಾಡುವ ಆರಾಮದಾಯಕ ಜೀವನ ಶೈಲಿ. ಈ ಸಾಂಕ್ರಾಮಿಕ ಸಮಯದಲ್ಲಿ ಜಂಕ್ ಮತ್ತು ಬೀದಿ ಆಹಾರಗಳ ಬಳಕೆ ಕಡಿಮೆಯಾಗಿದ್ದರೂ, ಆರಾಮದಾಯಕ ಕೆಲಸ ಅಥವಾ ಹೆಚ್ಚಾಗಿ ಹೊರಗಡೆ ತಿರುಗಾಡದ ಜೀವನಶೈಲಿಯು ಜನರ ತೂಕವನ್ನು ಹೆಚ್ಚಿಸಲು ಮತ್ತು ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ. “ಮನೆಯಿಂದ ಕೆಲಸ” ಮತ್ತು “ಆನ್ಲೈನ್ ತರಗತಿಗಳು” ಕೂಡ ಜನರ ದೈಹಿಕ ಚಟುವಟಿಕೆ ಮತ್ತು ಹೃದಯದ ಆರೋಗ್ಯದ ಮೇಲೆ ಕಡಿಮೆ ಏಕಾಗ್ರತೆಯೊಂದಿಗೆ ಜೀವನಶೈಲಿಗೆ ಕಾರಣವಾಹಿತು.

ಈ ಮುಕ್ತ ಮಾತುಕತೆಯಲ್ಲಿ ಹೃದ್ರೋಗ ವಿಭಾಗದ ಪ್ರಾಧ್ಯಾಪಕರಾದ ಡಾ. ಅಶ್ವಲ್ ಎ ಜೆ, ಹೃದಯ ಶಸ್ತ್ರ ಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಗುರುಪ್ರಸಾದ್ ರೈ, ಮಕ್ಕಳ ಹೃದ್ರೋಗ ತಜ್ಞರಾದ ಡಾ. ಗುಂಜನ್ ಬಂಗ ಮತ್ತು ಪಥ್ಯಾಹಾರ ವಿಭಾಗದ ಮುಖ್ಯಸ್ಥರಾದ ಸುವರ್ಣ ಹೆಬ್ಬಾರ್ ಭಾಗವಹಿಸಲಿದ್ದಾರೆ.

ಈ ಕೆಳಗಿನ ಲಿಂಕ್ ಮತ್ತು ಕ್ಯೂ ಆರ್ ಕೋಡ್ ಬಳಸಿ ಸಾರ್ವಜನಿಕರು ಫೇಸ್ ಬುಕ್ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪ್ರಶ್ನೆಗಳನ್ನು ಕೇಳಬಹುದು ಎಂದು ವೈದ್ಯಕೀಯ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.
https://www.facebook.com/ManipalKasturbaHospital

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ವಿಶ್ವಭಾರತಿ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ನಿಯಮಿತ- ದಶಮಾನೋತ್ಸವ ಕಾರ್ಯಕ್ರಮ ಹಾಗೂ ವಾರ್ಷಿಕ ಸಾಮಾನ್ಯ ಸಭೆ

ಉಡುಪಿ, ಅ.2: ವಿಶ್ವಭಾರತಿ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ನಿಯಮಿತ, ಉಡುಪಿ...

ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ

ಬೆಂಗಳೂರು, ಅ.2: ಮಹಾತ್ಮ ಗಾಂಧಿ ಜಯಂತಿಯ ಅಂಗವಾಗಿ ಬೆಂಗಳೂರಿನ ಗಾಂಧಿ ಭವನದಲ್ಲಿ...

ಏಷ್ಯನ್ ಗೇಮ್ಸ್: ಭಾರತದ ಒಟ್ಟು ಪದಕಗಳ ಸಂಖ್ಯೆ 76ಕ್ಕೆ ಏರಿಕೆ; ಪದಕ ಪಟ್ಟಿಯಲ್ಲಿ ಐದನೇ ಸ್ಥಾನ

ಯು.ಬಿ.ಎನ್.ಡಿ., ಅ.2: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಪದಕ...
error: Content is protected !!