Home ಸುದ್ಧಿಗಳು ಪ್ರಾದೇಶಿಕ ನೀಟ್– 2021: ಜ್ಞಾನಸುಧಾಕ್ಕೆ ಪ್ರಥಮ ಸುತ್ತಿನ ಆಯ್ಕೆಯಲ್ಲಿ 70 ಎಂ.ಬಿ.ಬಿ.ಎಸ್ ಸೀಟ್

ನೀಟ್– 2021: ಜ್ಞಾನಸುಧಾಕ್ಕೆ ಪ್ರಥಮ ಸುತ್ತಿನ ಆಯ್ಕೆಯಲ್ಲಿ 70 ಎಂ.ಬಿ.ಬಿ.ಎಸ್ ಸೀಟ್

4719
0

ಕಾರ್ಕಳ: ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿರುವ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಲ್ಲಿ, ಎಂಬಿಬಿಎಸ್ ಪ್ರವೇಶ ಪರೀಕ್ಷೆಯಾದ ನೀಟ್-2021ರ ಪ್ರಥಮ ಸುತ್ತಿನ ಆಯ್ಕೆಯ ಪರೀಕ್ಷೆಗೆ ಹಾಜರಾದ ಒಟ್ಟು 320 ವಿದ್ಯಾರ್ಥಿಗಳಲ್ಲಿ 70
ವಿದ್ಯಾರ್ಥಿಗಳಿಗೆ ವಿವಿಧ ಪ್ರತಿಷ್ಠಿತ ಕಾಲೇಜುಗಳಲ್ಲಿ ಎಂ.ಬಿ.ಬಿ.ಎಸ್ ಸೀಟು ದೊರಕಿರುತ್ತದೆ. 4 ವಿದ್ಯಾರ್ಥಿಗಳು ಪ್ರತಿಷ್ಠಿತ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ, 7 ವಿದ್ಯಾರ್ಥಿಗಳು ಮೈಸೂರು ಮೆಡಿಕಲ್‌ ಕಾಲೇಜು, ಇಬ್ಬರು ವಿದ್ಯಾರ್ಥಿಗಳು ಕೆ.ಎಂ.ಸಿ. ಮಂಗಳೂರಿನಲ್ಲಿ ಪ್ರವೇಶ ಪಡೆದಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಯಲ್ಲಿ ಜ್ಙಾನಸುಧಾ ಎಂಟ್ರೆನ್ಸ್ ಅಕಾಡೆಮಿ ನಿರ್ವಹಿಸುತ್ತಿರುವ ಪಾತ್ರವನ್ನು ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರು ಶ್ಲಾಘಿಸಿದ್ದಾರೆ. ಈ ಅಭೂತಪೂರ್ವ ಸಾಧನೆಗೆ ಕಾರಣರಾದ ಎಲ್ಲಾ ಉಪನ್ಯಾಸಕ ವೃಂದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಪ್ರತಿಷ್ಠಿತ ಎನ್‌ಐಟಿಕೆ ಸುರತ್ಕಲ್‌ನಲ್ಲಿ ಗಣಿತಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಪಡೆದು ಕಳೆದ 33 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡ ಡಾ.ಸುಧಾಕರ್ ಶೆಟ್ಟಿ ಅವರು ಸ್ಥಾಪಿಸಿದ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ಸ್ಪರ್ಧಾತ್ಮಕ ಪರೀಕ್ಷೆಯಾದ ನೀಟ್, ಜೆಇಇ, ಕೆವಿಪಿವೈ ಹಾಗೂ ಸಿಇಟಿಯಲ್ಲಿ ಅಭೂತಪೂರ್ವ ಸಾಧನೆಯನ್ನು ಮಾಡಿವೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.