Thursday, October 1, 2026
Thursday, October 1, 2026

ಸಾಹಿತ್ಯ ಸಂಸ್ಕೃತಿ ಕಲೆಯನ್ನು ಆಸ್ವಾದಿಸುವುದು ಬಹಳ ಮುಖ್ಯ: ಹೆಚ್ ವಿಶ್ವನಾಥ್

ಸಾಹಿತ್ಯ ಸಂಸ್ಕೃತಿ ಕಲೆಯನ್ನು ಆಸ್ವಾದಿಸುವುದು ಬಹಳ ಮುಖ್ಯ: ಹೆಚ್ ವಿಶ್ವನಾಥ್

Date:

ಮೈಸೂರು, ಜ.27: ನಮ್ಮನ್ನು ಆಳುವವರು ಯಾರು? ಸರಕಾರ, ರಾಜ ಮಹರಾಜರುಗಳು ಯಾರೂ ಅಲ್ಲ. ಅಧಿಕಾರ ಅಂತಸ್ತುಗಳೂ ಅಲ್ಲ. ನನ್ನನ್ನು ಆಳುವುದು ನನ್ನ ಮನಸ್ಸು. ಅಂತಹ ಮನಸನ್ನು ಮುದವಾಗಿಡುವುದೇ ಸಾಹಿತ್ಯ, ಸಂಸ್ಕೃತಿ, ಕಲೆ, ನೃತ್ಯ. ಇದೆಲ್ಲದಕ್ಕೂ ಹೆಸರಿರುವ ನಾಡು ಮೈಸೂರು. ಅದೆಲ್ಲವನ್ನು ಕೂಡಾ ಜನರಿಗೆ ಪರಿಚಯಿಸಿ ಜನರು ಭಾಗವಹಿಸುವಂತೆ ಒಂದು ದೊಡ್ಡ ಅವಕಾಶ ಕಲ್ಪಿಸಿಕೊಟ್ಟವರು ಮೈಸೂರು ಯದುವಂಶದ ಅರಸರು.

ಒಂದು ಗಂಟೆ ಎರಡು ಗಂಟೆ ಕೂತು ನಾಟಕ ನೋಡುವುದು ಸಾಹಿತ್ಯ ಸಂಸ್ಕೃತಿ ಕಲೆಯನ್ನು ಆಸ್ವಾದಿಸುವುದು ಮನುಷ್ಯನಿಗೆ ಬಹಳ ಮುಖ್ಯ. ಇಂತಹ ಕಾರ್ಯಕ್ರಮಗಳಿಗೆ ಸರಕಾರ ಪ್ರೋತ್ಸಾಹ ನೀಡಬೇಕು ಎಂದು ಕರ್ನಾಟಕ ಸರಕಾರದ ಮೊದಲ ಕನ್ನಡ ಮತ್ತು ಸಂಸ್ಕೃತಿ ಸಚಿವ ಹಾಗೂ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಹೇಳಿದರು.

ಅವರು ರಾಷ್ಟೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ನೇತೃತ್ವದಲ್ಲಿ ಶನಿವಾರ ಕೆ.ಎಸ್.ನರಸಿಂಹ ಸ್ವಾಮಿ ಜನ್ಮದಿನ ಪ್ರಯುಕ್ತ ಮೈಸೂರು ಪುರಭವನದಲ್ಲಿ ಆಯೋಜಿಸಿದ ‘ಮಲ್ಲಿಗೆ ಕಂಪು’ ವಿಚಾರ ಗೋಷ್ಠಿ- ಕವಿಗೋಷ್ಠಿ – ಕೃತಿ ಬಿಡುಗಡೆ ಹಾಗೂ ಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೈಸೂರಿನ ಪ್ರೇಮ ಕವಿಯ ಮಲ್ಲಿಗೆ ಕಂಪು ಕಾರ್ಯಕ್ರಮ ಆಯೋಜಿಸಲು ಮಂಗಳೂರಿನಿಂದ ಮೈಸೂರಿಗೆ ಆಗಮಿಸಿದ ಗಂಗಾಧರ ಗಾಂಧಿ ತಂಡವನ್ನು ನಾನು ಅಭಿನಂದಿಸುವೆ. ಇಂತಹ ಕಾರ್ಯಕ್ರಮಗಳು ನಿರಂತರ ನಡೆಯುತ್ತಿರಬೇಕು. ಮೈಸೂರು ಮಲ್ಲಿಗೆ ಕಂಪು ಸದಾ ಹಸಿರಾಗಿರಬೇಕು. ಆ ಮೂಲಕ ಮೈಸೂರು ಮಲ್ಲಿಗೆಯ ಕಂಪು ಜಗದಗಲ ಹಬ್ಬ ಬೇಕೆಂದು ಹೇಳಿದರು. ಇದಕ್ಕೂ ಮುನ್ನ ಕೆ.ವಿ. ಲಕ್ಷ್ಮಣಮೂರ್ತಿ ಸಾರಥ್ಯದಲ್ಲಿ ಮೂಡಿಬಂದ ಭೂತಾಯಿ, ಕವನ ಕೃಷಿಕ, ರಾಣಿ ಅಬ್ಬಕ್ಕದೇವಿಯ ಜೊತೆ ಪಯಣ, ಮಾತೃ ಮಡಿಲು ಎಂಬ ನಾಲ್ಕು ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು. ಎನ್.ಎಸ್.ಸಿ.ಡಿ.ಎಫ್ ಅಧ್ಯಕ್ಷ ಗಂಗಾಧರ್ ಗಾಂಧಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಗೈದ ಡಾ. ಅಯುಬ್ ಅಹಮದ್‌ಜಿ., ಯಶೋಧಾ ಆರ್., ರಾಣಿಪ್ರಭ ಹೆಚ್. ಪಿ., ಮಾಧ್ಯಮ ಕ್ಷೇತ್ರದಲ್ಲಿ ಜಯಂತ್ ಜಿ., ಮತ್ತು ಸಂಘಟನಾ ಕ್ಷೇತ್ರದಲ್ಲಿ ಡಾ. ಪಳನಿಸ್ವಾಮಿ ಮೂಡುಗೂರು ಇವರಿಗೆ ಎನ್.ಎಸ್.ಸಿ.ಡಿ.ಎಫ್ ಸಾಧನಾ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

ಮುಖ್ಯ ಅತಿಥಿಗಳಾಗಿ ಮೈಸೂರು ಮಹರಾಜ ಕಾಲೇಜಿನ ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮಿ ಮನಾಪುರ, ಲೇಖಕ ಮತ್ತು ವಿಶ್ರಾಂತ ಐ.ಎಫ್.ಎಸ್ ಅಧಿಕಾರಿ ಕೆ.ವಿ.ಲಕ್ಷ್ಮಣ ಮೂರ್ತಿ, ಲೇಖಕ ಮತ್ತು ಕೆ.ಎಸ್.ನರಸಿಂಹಸ್ವಾಮಿ ಪುತ್ರ ಕೆ. ಎನ್. ಮಹಾಬಲ, ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ಭಾಗವಹಿಸಿದ್ದರು.

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ. ಜಯಪ್ಪ ಹೊನ್ನಳ್ಳಿ ಮಾತನಾಡಿ, ಕನ್ನಡ ಕಾವ್ಯ, ನವೋದಯ, ನವ್ಯ, ನವ್ಯೋತ್ತರ, ದಲಿತ, ಬಂಡಾಯ ಮುಂತಾದ ಹಲವು ರೂಪ ಪಡೆದು ಬದಲಾಗುತ್ತ ಬಂದರೂ ನವೋದಯದಲ್ಲಿ ಹೊರಹೊಮ್ಮಿದ ಕೆ.ಎಸ್. ನರಸಿಂಹ ಸ್ವಾಮಿಯವರು ಸರ್ವ ಕಾಲಕ್ಕೂ ಸಲ್ಲುವ ಕವಿ. ಅವರ ಮೈಸುರು ಮಲ್ಲಿಗೆ ಅಮರ ಕಾವ್ಯದಂತೆ ಎಂದು ಅಭಿಪ್ರಾಯಪಟ್ಟರು.

ಕವಿಗೋಷ್ಠಿಯಲ್ಲಿ ರಾಜೇಂದ್ರ ಪ್ರಸಾದ್ ಕೊಳ್ಳೆಗಾಲ, ಪದ್ಮಾ ಆನಂದ್, ಡಾ. ಮಧುಸೂದನ್ ಎನ್., ಮು.ನಾ. ರಮೇಶ್, ಕೆ.ಟಿ.ಶ್ರೀಮತಿ, ಅನಂತ ಎಮ್. ತಾಮ್ಹನ್ಕರ್, ಗಿರೀಶ್ ವಿ., ಬಿ.ಕೆ ಮೀನಾಕ್ಷಿ, ಗು.ಚಿ. ರಮೇಶ್, ಮಂಜುಳಾ ನಾಗರಾಜು, ಕೆರೊಡಿ ಎಂ ಲೋಲಾಕ್ಷಮ್ಮ, ಕೆ.ಎಂ. ಪ್ರಭು ಕಲ್ಲಹಳ್ಳಿ, ಕೃ. ಪಾ. ಮಂಜುನಾಥ್, ವಿ. ಮಂಜುಳಾ ಉಪದ್ಯಾಯಿನಿ, ಆಸರೆ ರಾಜೇಂದ್ರ ಪ್ರಸಾದ್ ಚಾಮರಾಜನಗರ, ಎಂ ಶಿವಕುಮಾರ ಕೆಂಪನಪುರ, ಡಾ. ಹೇಮಾಲತಾ ಪೀ.ಎನ್, ಡಾ. ಕಾವೇರಿ ಪ್ರಕಾಶ್, ಮಾ.ಮಹೇಶ ಮಲೆಯೂರು, ಶೀಲ ಸತ್ಯೇಂದ್ರ ಸ್ವಾಮಿ, ಓಂಕಾರ ಪ್ರಿಯ ಬಾಗೇಪಳ್ಳಿ, ಡಾ. ಕ್ಸೇವಿಯರ್ ಫ್ರಾನ್ಸಿಸ್ ದಾವಣಗೆರೆ ಭಾಗವಹಿಸಿದ್ದರು. ರೇಶ್ಮಾ ಶೆಟ್ಟಿ ಗೋರುರು ಕಾರ್ಯಕ್ರಮ ನಿರೂಪಿಸಿದರು. ವರ್ಷಾ ನಿಖಿಲ್ ರಾಜ್ ಪ್ರಾರ್ಥನೆ ಗೀತೆ ಹಾಡಿದರು. ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ವಂದಿಸಿದರು. ಗಂಗಾಧರ್ ಗಾಂಧಿ ತಂಡದಿಂದ ನಡೆದ ಗೀತ ಗಾಯನವು ಜನಮನ ಸೂರೆಗೊಂಡಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕೆ.ಎಸ್.ಆರ್.ಟಿ.ಸಿ: ಅ. 11 -20- ಉಡುಪಿಯಿಂದ ನವರಾತ್ರಿ ವಿಶೇಷ ಪ್ಯಾಕೇಜ್ ಪ್ರವಾಸ

ಉಡುಪಿ, ಸೆ.30: ಕ.ರಾ.ರ.ಸಾ.ನಿಗಮ ಮಂಗಳೂರು ವಿಭಾಗವು ದಸರಾ ಪ್ರಯುಕ್ತ ಉಡುಪಿ ಘಟಕದಿಂದ...

ʼಕಬ್ಬದುಳುಮೆʼ ಕಾವ್ಯಲೋಕದ ಓದಿನ ಹೊಸಪರಿ

ಹಿರಿಯಡಕ, ಸೆ.30: ಹಳಗನ್ನಡ ಪಠ್ಯಗಳ ಸಂಧಿಬಂಧಗಳನ್ನು ಒಡೆದು ಒಳಗಿನ ತಿಳಿವನ್ನು ಅರಗಿಸಿಕೊಳ್ಳುವ...

ಕೋಟೇಶ್ವರ: ವಿದ್ಯಾರ್ಥಿ ಸಂಘ ಉದ್ಘಾಟನೆ

ಕೋಟೇಶ್ವರ, ಸೆ.30: ಯುವಕರಲ್ಲಿ ನಾಯಕತ್ವ ಗುಣವನ್ನು ಬೆಳೆಸುವಲ್ಲಿ ಕಾಲೇಜು ಹಂತದಲ್ಲಿ ವಿದ್ಯಾರ್ಥಿ...

ಹಿರಿಯ ನಾಗರಿಕರು ಹಿಂಜರಿಕೆಯಿಲ್ಲದೆ ಮುಕ್ತವಾಗಿ ಸ್ಪರ್ಧೆಗಳಲ್ಲಿ ಭಾಗವಹಿಸಿ: ನ್ಯಾ. ನಿತಿನ್ ಯಶ್ವಂತ್ ರಾವ್

ಉಡುಪಿ, ಸೆ.30: ವಯಸ್ಸು ಕೇವಲ ದೇಹಕ್ಕೆ ಮಾತ್ರ ಮನಸ್ಸಿಗಲ್ಲ ಎಂಬ ಚಿಂತನೆಯೊಂದಿಗೆ...
error: Content is protected !!