Monday, October 26, 2026
Monday, October 26, 2026

ಮೇ 18-29, ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಮೇ 18-29, ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

Date:

ಉಡುಪಿ: ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು ಹಾಗೂ ಆದರ್ಶ ಆಸ್ಪತ್ರೆ ಉಡುಪಿ ಇವರ ಸಹಯೋಗದಲ್ಲಿ ಪ್ರಿವೆನ್ಟೀವ್ ಹೆಲ್ತ್ ಕೇರ್ ಟ್ರೈನಿಂಗ್ ಅಂಡ್ ಚೆಕ್‌ಅಪ್ ಯೋಜನೆಯಡಿ, ಜಿಲ್ಲೆಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ಮೇ 18 ರಿಂದ 29 ರ ವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ.

ಶಿಬಿರದ ವೇಳಾಪಟ್ಟಿ ಹೀಗಿದೆ: ಮೇ 18 ರಂದು ಹಂದಾಡಿ ಹಾಗೂ ಹನ್ನೇಹಳ್ಳಿ ಗ್ರಾಮ ಪಂಚಾಯತ್ ಸಭಾಭವನ, ಮೇ 19 ರಂದು ಚೇರ್ಕಾಡಿ ಹಾಗೂ ಕೊಕ್ಕರ್ಣೆ ಗ್ರಾಮ ಪಂಚಾಯತ್ ಸಭಾಭವನ, ಮೇ 20 ರಂದು ಕೋಟತಟ್ಟು ಹಾಗೂ ಪಾಂಡೇಶ್ವರ ಗ್ರಾಮ ಪಂಚಾಯತ್ ಸಭಾಭವನ, ಮೇ 21 ರಂದು ಹಾರಾಡಿ ಹಾಗೂ ಕೋಡಿ ಗ್ರಾಮ ಪಂಚಾಯತ್ ಸಭಾಭವನ, ಮೇ 22 ರಂದು ಬಾರ್ಕೂರು ಹಾಗೂ ಐರೋಡಿ ಗಾಮ ಪಂಚಾಯತ್ ಸಭಾಭವನ, ಮೇ 23 ರಂದು ಚಾಂತಾರು ಹಾಗೂ ವಾರಂಬಳ್ಳಿ ಗ್ರಾಮ ಪಂಚಾಯತ್ ಸಭಾಭವನ, ಮೇ 24 ರಂದು ಬಿಲ್ಲಾಡಿ ಹಾಗೂ ಹೆಗ್ಗುಂಜೆ ಗಾಮ ಪಂಚಾಯತ್ ಸಭಾಭವನ, ಮೇ 25 ರಂದು ಕಾಡೂರು ಹಾಗೂ ಉಪ್ಪೂರು ಗ್ರಾಮ ಪಂಚಾಯತ್ ಸಭಾಭವನ, ಮೇ 26 ರಂದು ಕರ್ಜೆ ಹಾಗೂ ಯಡ್ತಾಡಿ ಗ್ರಾಮ ಪಂಚಾಯತ್ ಸಭಾಭವನ, ಮೇ 27 ರಂದು ಆರೂರು ಹಾಗೂ ವಡ್ಡರ್ಸೆ ಗ್ರಾಮ ಪಂಚಾಯತ್ ಸಭಾಭವನ ಮತ್ತು ಮೇ 29 ರಂದು ಕೋಟಾ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಬೆಳಗ್ಗೆ 10 ರಿಂದ ಸಂಜೆ 6 ರ ವರೆಗೆ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.

18 ರಿಂದ 60 ವರ್ಷದೊಳಗಿನ ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಅವಲಂಬಿತರು, ಕಟ್ಟಡ ಕಾರ್ಮಿಕ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿ, ಆಧಾರ್ ಗುರುತಿನ ಚೀಟಿಯ ಜೆರಾಕ್ಸ್ ಹಾಗೂ ರೇಷನ್ ಕಾರ್ಡ್ನ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಿ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಏಷ್ಯನ್ ಪ್ಯಾರಾ ಕ್ರೀಡಾಕೂಟ: 114 ಪದಕಗಳೊಂದಿಗೆ ಭಾರತದ ಭರ್ಜರಿ ಪ್ರದರ್ಶನ

ಜಪಾನ್‌ನ ನಗೋಯಾದಲ್ಲಿರುವ ಮಿಜುಹೋ ಪಾರ್ಕ್ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ನಡೆದ 2026 ಏಷ್ಯನ್...

ಫ್ರೆಂಚ್ ಓಪನ್: ಪಿ.ವಿ. ಸಿಂಧು ರನ್ನರ್-ಅಪ್

ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ, ಭಾರತದ ಎರಡು...

ಆರ್‌ಬಿಐ ಡೇಟಾ ಸೆಂಟರ್ ಮತ್ತು ಸೈಬರ್‌ ಭದ್ರತಾ ತರಬೇತಿ ಸಂಸ್ಥೆ ಉದ್ಘಾಟಿಸಿದ ಪ್ರಧಾನಿ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು (ಭಾನುವಾರ) ಒಡಿಶಾದ ಭುವನೇಶ್ವರದ...

ನ.1: ಗುಜ್ಜಾಡಿ ನಾಯಕವಾಡಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಗುಜ್ಜಾಡಿ, ಅ.25: ಕರ್ನಾಟಕ ಸರಕಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ಆಯುಷ್...
error: Content is protected !!