Sunday, October 25, 2026
Sunday, October 25, 2026

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ.)- ಪೂರ್ವಭಾವಿ ಸಭೆ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ.)- ಪೂರ್ವಭಾವಿ ಸಭೆ

Date:

ಮಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಧ್ಯಕ್ಷರಾದ ಅಶೋಕ ಹಾರನಹಳ್ಳಿಯವರ ಮಾರ್ಗದರ್ಶನದಂತೆ ರಾಜ್ಯ ಮಹಿಳಾ ವಿಭಾಗವು ರೂಪಾ ಶಾಸ್ತ್ರಿ ಅವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ವಿಭಾಗವನ್ನು ರಚಿಸಲು ಪೂರ್ವಭಾವಿ ಸಭೆ ನಡೆಯಿತು.

ಮಂಗಳೂರಿನ ಪತ್ತುಮುಡಿ ಸೌಧದ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ, ಮಹಾಸಭಾ ಉಪಾಧ್ಯಕ್ಷರಾದ ಮಹೇಶ ಕಜೆಯವರು, ಹಿರಿಯ ಸಂಘಟಕ ಪ್ರದೀಪಕುಮಾರ ಕಲ್ಕೂರ, ಮಂಗಳೂರು ಹವ್ಯಕ ಮಹಾಸಭಾದ ಅಧ್ಯಕ್ಷರಾದ ಡಾ। ರಾಜೇಂದ್ರ ಪ್ರಸಾದ್, ಎಕೆ ಬಿಎಂಎಸ್ ಕೇಂದ್ರ ಕಾರ್ಯಕಾರಿಣಿ ಸಮಿತಿ ಸದಸ್ಯರುಗಳಾದ ತಾರಾನಾಥ ಹೊಳ್ಳ, ಉಮೇಶ ಶಾಸ್ತ್ರಿ, ಪೊಳಲಿ ಗಿರಿ ಪ್ರಕಾಶ ತಂತ್ರಿ, ಕೂಟ ಮಹಾಜಗತ್ತು ಅಂಗಸಂಸ್ಥೆಗಳ ಮಹಿಳಾ ವಿಭಾಗದ ಅಧ್ಯಕ್ಷರು, ಕಾರ್ಯದರ್ಶಿಗಳು, ಹವ್ಯಕ ಮಹಾಸಭಾದ ಮಹಿಳಾ ವಿಭಾಗದ ಅಧ್ಯಕ್ಷರು ಮತ್ತು ಸಂಸ್ಥೆಯ ಸದಸ್ಯರು ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಮಹಿಳಾ ಸದಸ್ಯರು ಭಾಗವಹಿಸಿದ್ದರು.

ಪೂರ್ವಭಾವಿ ಸಭೆಯನ್ನುದ್ದೇಶಿಸಿ ರಾಜ್ಯ ಸಂಚಾಲಕಿ ರೂಪಾ ಶಾಸ್ತ್ರಿಯವರು ಮಾತನಾಡುತ್ತಾ ಮಹಿಳಾ ವಿಭಾಗದ ಸಂಘಟನೆ, ಮುಂದಿನ ಕಾರ್ಯಯೋಜನೆಗಳ ಬಗ್ಗೆ ಹಾಗೂ ಈಗಾಗಲೇ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತು ಸಭೆಗೆ ಮನವರಿಕೆ ಮಾಡಿಕೊಟ್ಟರು.

ದಕ್ಷಿಣ ಕನ್ನಡ ಭಾಗದ ಖ್ಯಾತ ಸಂಘಟಕ ಹಿರಿಯರಾದ ಪ್ರದೀಪ್ ಕುಮಾರ ಕಲ್ಕೂರ ಅವರು ಮಾತನಾಡುತ್ತಾ ಮಹಿಳಾ ಸಂಘಟನೆ ಬಲವರ್ಧನೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮತ್ತು ಸಹಕಾರವನ್ನು ನೀಡುವುದಾಗಿ ತಿಳಿಸಿದರು.

ಮಹಾಸಭಾದ ಉಪಾಧ್ಯಕ್ಷರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿಗಳಾದ ಮಹೇಶ್ ಕಜೆ ಅವರು ಮಾತನಾಡುತ್ತಾ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘಟನೆಯನ್ನು ಬಲಾಢ್ಯಗೊಳಿಸುವಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಸಂಘಟನೆ ದಕ್ಷಿಣ ಕನ್ನಡದಲ್ಲಿ ಹತ್ತಾರು ವರ್ಷಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಹಿಂದಿನ ಎಕೆಬಿಎಂಎಸ್ ನಾಯಕರೆಲ್ಲರ ಸಹಕಾರ ಮತ್ತು ಮಾರ್ಗದರ್ಶನದ ಮೂಲಕ ಸಂಘಟನೆಯನ್ನು ಬಲಾಡ್ಯಗೊಳಿಸೋಣ. ನಿಮ್ಮೊಂದಿಗೆ ನಾವು ನಮ್ಮೊಂದಿಗೆ ನೀವು ಎಂಬ ಧ್ಯೇಯವಾಕ್ಯದೊಂದಿಗೆ ಮುನ್ನಡೆಯೋಣ. ಬ್ರಾಹ್ಮಣ ಮಹಾಸಭಾದ ಧ್ಯೇಯ ವಾಕ್ಯವಾದ ಸ್ವಾವಲಂಬನೆ, ಸಂಘಟನೆ ಮತ್ತು ಸಂಸ್ಕಾರವನ್ನು ಹೆಚ್ಚಿನ ರೀತಿಯಲ್ಲಿ ಅನುಷ್ಠಾನಗೊಳಿಸಬೇಕು ಎಂದರು. ಕೆ.ತಾರಾನಾಥ ಹೊಳ್ಳ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಭೂತಾನ್‌ನ ಮೊಂಗಾರ್ ಜಿಲ್ಲೆಯಲ್ಲಿ ಭಾರತದ ಬೆಂಬಲದೊಂದಿಗೆ ಕೈಗೊಂಡ 15 ಸಮುದಾಯ ಯೋಜನೆಗಳ ಉದ್ಘಾಟನೆ

ನವದೆಹಲಿ, ಅ.24: ಭೂತಾನ್‌ನ ಪೂರ್ವ ಭಾಗದಲ್ಲಿರುವ ಮೊಂಗಾರ್ ಜಿಲ್ಲೆಯಲ್ಲಿ, ಭಾರತ ಸರ್ಕಾರದ...

ಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅಕ್ಟೋಬರ್ 31ರವರೆಗೆ ಸೌದಿ ಅರೇಬಿಯಾಕ್ಕೆ ಇಂಡಿಗೋ ವಿಮಾನಯಾನ ರದ್ದು

ನವದೆಹಲಿ, ಅ.24: ಸೌದಿ ಅರೇಬಿಯಾದ ನಾಲ್ಕು ನಗರಗಳಿಗೆ ಮತ್ತು ಅಲ್ಲಿಂದ ಬರುವ...

2ನೇ ಟಿ20 ಪಂದ್ಯ: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 4 ವಿಕೆಟ್‌ಗಳ ಜಯ; ಸರಣಿಯಲ್ಲಿ 2-0 ಮುನ್ನಡೆ

ಯು.ಬಿ.ಎನ್.ಡಿ., ಅ.24: ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ಶನಿವಾರ ನಡೆದ ಎರಡನೇ ಟಿ20...

ವಿವಿಧ ಜನಪರ ಬೇಡಿಕೆಗಳ ಈಡೇರಿಕೆಗೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ರವರಿಗೆ ಶಾಸಕ ಯಶ್ಪಾಲ್ ಸುವರ್ಣ ಮನವಿ

ಉಡುಪಿ, ಅ.24: ಉಡುಪಿ ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿ...
error: Content is protected !!