Saturday, May 2, 2026
Saturday, May 2, 2026

ಕೃಷಿ ಕಾನೂನು ಹಿಂತೆಗೆದುಕೊಂಡಿರುವುದು ಪ್ರಜಾಪ್ರಭುತ್ವಕ್ಕೆ ಸಂದ ಜಯ: ಉಡುಪಿ ಜಿಲ್ಲಾ ಕಾಂಗ್ರೆಸ್

ಕೃಷಿ ಕಾನೂನು ಹಿಂತೆಗೆದುಕೊಂಡಿರುವುದು ಪ್ರಜಾಪ್ರಭುತ್ವಕ್ಕೆ ಸಂದ ಜಯ: ಉಡುಪಿ ಜಿಲ್ಲಾ ಕಾಂಗ್ರೆಸ್

Date:

ಉಡುಪಿ: ಕೇಂದ್ರ ಸರಕಾರ ಕಳೆದ ವರ್ಷ ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದ ವಿವಾದಾತ್ಮಕ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಂಡಿರುವುದು ಪ್ರಜಾಪ್ರಭುತ್ವಕ್ಕೆ ಸಂದ ಜಯ. ಕಾಂಗ್ರೆಸ್ ಇದನ್ನು
ಸ್ವಾಗತಿಸುತ್ತದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.

ಆದರೆ ಇದು ಪ್ರಧಾನಿ ಮೋದಿ ಸರಕಾರದ ರೈತರ ಕಣ್ಣೊರೆಸುವ ರಾಜಕೀಯ ತಂತ್ರವಾಗಬಾರದು. ಈಗಾಗಲೇ ರಾಷ್ಟ್ರಪತಿಗಳ ಅಂಕಿತದೊಂದಿಗೆ ಜಾರಿಗೆ ಬಂದ ಈ ಕಾನೂನನ್ನು ಮುಂದಿನ ಲೋಕಸಭಾ ಅಧಿವೇಶನದಲ್ಲಿ ಸಾಂವಿಧಾನಿಕ ಮಾನ್ಯತೆಯೊಂದಿಗೆ ಅಧಿಕೃತವಾಗಿ ರದ್ದುಗೊಳಿಸಬೇಕು.

ಸರಕಾರ ಈ ಆಶ್ವಾಸನೆಯನ್ನು ಜನರಿಗೆ ನೀಡಬೇಕು. ಇಲ್ಲವಾದಲ್ಲಿ ಮತ್ತೆ ರೈತ ಹೋರಾಟದ ಕಿಚ್ಚು ಭುಗಿಲೇಳುವುದು ಅನಿವಾರ್ಯವಾದೀತು ಎಂದು ಕಾಂಗ್ರೆಸ್ ಹೇಳಿದೆ.

ಕಳೆದ ಒಂದು ವರ್ಷದಿಂದ ನಡೆದ ಹೋರಾಟದಲ್ಲಿ ಸುಮಾರು 700ಕ್ಕೂ ಹೆಚ್ಚು ರೈತರು ಅಸುನೀಗಿದ್ದು ಇವರ ಕುಟುಂಬಗಳಿಗೆ ಸರಕಾರ ಸೂಕ್ತ ಪರಿಹಾರ ನೀಡಬೇಕು.

ಪ್ರತಿಭಟನೆಯನ್ನು ಹತ್ತಿಕ್ಕಲು ಹುನ್ನಾರ ನಡೆಸಿ ರೈತ ಕುಟುಂಬಗಳ ಕಷ್ಟ ನಷ್ಟಗಳಿಗೆ ಕಾರಣರಾದವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು.

ಇದರೊಂದಿಗೆ ಈಗಾಗಲೇ ಜಾರಿಗೆ ತಂದ ವಿದ್ಯುತ್ ಮಸೂದೆಯನ್ನು ರೈತರ ಹಿತದೃಷ್ಠಿಯಿಂದ ಹಿಂತೆಗೆದುಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ದೋಣಿ ದುರಂತ: ಸಾವನ್ನಪ್ಪಿದವರ ಸಂಖ್ಯೆ 9 ಕ್ಕೆ ಏರಿಕೆ

ಜಬಲ್ಪುರ, ಮೇ 1: ಮಧ್ಯಪ್ರದೇಶದಲ್ಲಿ, ಜಬಲ್ಪುರದಲ್ಲಿ ನಡೆದ ಕ್ರೂಸ್ ದೋಣಿ ದುರಂತದಲ್ಲಿ...

ಪಶ್ಚಿಮ ಬಂಗಾಳದ 15 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶ

ನವದೆಹಲಿ, ಮೇ.1: ಪಶ್ಚಿಮ ಬಂಗಾಳದ 15 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಚುನಾವಣಾ...

ವಾಣಿಜ್ಯ ಎಲ್‌ಪಿಜಿ ಬೆಲೆ ಏರಿಕೆ

ನವದೆಹಲಿ, ಮೇ 1: ಮೇ 1 ರಿಂದ ಜಾರಿಗೆ ಬರುವಂತೆ 19...

ಕಾರ್ಮಿಕರು ದೇಶದ ಅಭಿವೃದ್ಧಿಯ ಶಿಲ್ಪಿಗಳು: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಮೇ.1: ಕಾರ್ಮಿಕರು ದೇಶದ ಆರ್ಥಿಕ ಸಾಮಾಜಿಕ, ಆರ್ಥಿಕ ಅಭಿವೃದ್ಧಿಯ ಶಿಲ್ಪಿಗಳು...
error: Content is protected !!