Thursday, July 30, 2026
Thursday, July 30, 2026

ಶಂಕರನಾರಾಯಣ: ಬೀಳ್ಕೊಡುಗೆ ಸಮಾರಂಭ

ಶಂಕರನಾರಾಯಣ: ಬೀಳ್ಕೊಡುಗೆ ಸಮಾರಂಭ

Date:

ಸಮೃದ್ಧಿ ಯುವಕ ಮಂಡಲ(ರಿ) ಕುಳ್ಳುಂಜೆ ಶಂಕರನಾರಾಯಣ ಇದರ ವತಿಯಿಂದ ಕರ್ನಾಟಕ ಬ್ಯಾಂಕ್ ಕುಳ್ಳುಂಜೆ ಶಾಖೆಯಲ್ಲಿ ಶಾಖಾ ಪ್ರಬಂಧಕರಾಗಿ ಸೇವೆ ಸಲ್ಲಿಸಿದ ಶಿವಪ್ರಸಾದ್‌ರವರಿಗೆ ಬೀಳ್ಕೊಡುಗೆ ಸಮಾರಂಭವು ಶ್ರೀ ಪಾತಾಳ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಸಮೃದ್ಧಿ ಯುವಕ ಮಂಡಲದ ಅಧ್ಯಕ್ಷರಾದ ರಾಘವೇಂದ್ರ ತಲ್ಲಂಜೆಯವರು ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಕರ್ನಾಟಕ ಬ್ಯಾಂಕ್‌ನ ಪ್ರಬಂಧಕರಾದ ಶಿವಪ್ರಸಾದ್ ಗೌರವವನ್ನು ಸ್ವೀಕರಿಸಿ ತಮ್ಮ ಸೇವಾ ಅವಧಿಯ ಅನುಭವವನ್ನು ಹಂಚಿಕೊಂಡು ಬ್ಯಾಂಕಿನ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಮೃದ್ಧಿ ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ರಾಜೇಶ್ ಆಚಾರ್ಯ, ಪ್ರವೀಣ್ ನಾಯ್ಕ್ ಬಾಳೆಕೊಡ್ಲು, ರಘುರಾಮ್ ಕುಳ್ಳುಂಜೆ, ಗೋಪಾಲ ಎಲ್ಮಣ್ಣು, ಯಕ್ಷಸಿರಿ ಮಕ್ಕಳ ಯಕ್ಷಗಾನ ಬಳಗದ ಮುಖ್ಯಸ್ಥರಾದ
ಕಿಶೋರ್ ಕುಮಾರ್ ಆರೂರು, ಭರತ್ ತಲ್ಲಂಜೆ, ನಾರಾಯಣ ಟಿ., ಸುನಿಲ್ ಕುಮಾರ್, ಗಣೇಶ್ ತಲ್ಲಂಜೆ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಸುಜಿತ್ ಶೇಟ್ ಸ್ವಾಗತಿಸಿ, ರಾಘವೇಂದ್ರ ತಲ್ಲಂಜೆ ವಂದಿಸಿದರು. ಸ್ಥಾಪಕಾಧ್ಯಕ್ಷ ನಾಗರಾಜ್ ತಲ್ಲಂಜೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ

ನವದೆಹಲಿ, ಜು.29: ಲೋಕಸಭೆ ಬುಧವಾರ ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ)...

ಶಾಸಕ ಯಶ್ಪಾಲ್ ಸುವರ್ಣ ಅವರಿಗೆ ನೋಟೀಸ್

ಉಡುಪಿ, ಜು.29: ರಾಹುಲ್ ಗಾಂಧಿ ವಿರುದ್ಧ ಶಾಸಕ ಯಶ್ಪಾಲ್ ಸುವರ್ಣ ಅವರು...

ಹಡಪದ ಅಪ್ಪಣ್ಣ ರವರ ಚಿಂತನೆಗಳು ಮನುಕುಲದ ಉದ್ಧಾರಕ್ಕೆ ದಾರಿದೀಪ: ಮಂಜುನಾಥ ಪೂಜಾರಿ

ಉಡುಪಿ, ಜು.29: ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ಅನುಯಾಯಿಯಾಗಿದ್ದ ಶಿವಶರಣ ಹಡಪದ ಅಪ್ಪಣ್ಣ...

ಚಾತುರ್ಮಾಸ ಸಾಧನೆಗೆ ಶ್ರೇಷ್ಠ ಕಾಲ: ಭಂಡಾರಕೇರಿ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು

ಬಾರಕೂರು, ಜು.೨೯: ಶ್ರಾವಣದಿಂದ ಕಾರ್ತಿಕ ಮಾಸದವರೆಗಿನ ನಾಲ್ಕು ತಿಂಗಳ ಕಾಲ ಭಗವಂತ...
error: Content is protected !!