Monday, October 19, 2026
Monday, October 19, 2026

ಗೋವಿಗಾಗಿ ಮೇವು ತಂಡದ ಕಾರ್ಯ ಶ್ಲಾಘನೀಯ: ಮಟ್ಟಾರು ರತ್ನಾಕರ ಹೆಗ್ಡೆ

ಗೋವಿಗಾಗಿ ಮೇವು ತಂಡದ ಕಾರ್ಯ ಶ್ಲಾಘನೀಯ: ಮಟ್ಟಾರು ರತ್ನಾಕರ ಹೆಗ್ಡೆ

Date:

ಬ್ರಹ್ಮಾವರ: ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಕಳೆದ ವರ್ಷ ಆರಂಭಗೊಂಡ ಗೋವಿಗಾಗಿ ಮೇವು ಅಭಿಯಾನಕ್ಕೆ ಮಾರ್ಚ್‌ ತನಕ 300 ಕ್ಕೂ ಹೆಚ್ಚು ಸಂಘಟನೆಗಳು ಭಾಗಿಯಾಗಿ ಅಭಿಯಾನ ಚಿಕ್ಕಮಗಳೂರು ಜಿಲ್ಲೆಗೂ ಹಬ್ಬಿ ಯಶಸ್ವಿಯಾಯಿತ್ತು.

ಈ ವರ್ಷದ ಗೋವಿಗಾಗಿ ಮೇವು ಕಾರ್ಯಕ್ರಮಕ್ಕೆ ನೀಲಾವರ ಗೋಶಾಲೆಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಗೋವಿಗೆ ಮೇವನ್ನು ನೀಡುವುದರ ಮೂಲಕ ಭಾನುವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಗೋವಿಗಾಗಿ ಮೇವು ಅಭಿಯಾನದ ತಂಡ ಜಿಲ್ಲೆಯಲ್ಲೇ ಪಾದರಸದಂತೆ ಕೆಲಸ ಮಾಡಿ ಅನೇಕ ಸಂಘ ಸಂಸ್ಥೆಗಳಿಗೆ ಪ್ರೇರೇಪಿಸುತ್ತಿರುವುದು ತಂಡದ ಗೋಪ್ರೇಮಕ್ಕೆ ಹಿಡಿದ ಕನ್ನಡಿಯಾಗಿದೆ. ಅಭಿಯಾನ ರಾಜ್ಯವ್ಯಾಪಿ ಹರಡಲಿ ಎಂದರು.

ಪ್ರಾಸ್ಥಾವಿಕವಾಗಿ ಮಾತನಾಡಿದ ಗೋವಿಗಾಗಿ ಮೇವು ಅಭಿಯಾನದ ಸ್ಥಾಪಕ ಸಂಚಾಲಕ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ, ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳನ್ನು ಸಂಪರ್ಕಿಸುವ ಪ್ರಯತ್ನ ಮಾಡಿ ಅಭಿಯಾನದಲ್ಲಿ ಕೈ ಜೋಡಿಸಲು ಮನವಿ ಮಾಡಲಾಗುವುದು ಎಂದರು.

ಬಂಟರ ಸಂಘ ಬೆಂಗಳೂರು ಕೋಶಾಧಿಕಾರಿ ದೀಪಕ್ ಶೆಟ್ಟಿ ಬಾರಕೂರು ಮಾತನಾಡಿ, ಸಂಘಟಿತ ಯುವಕರ ಗೋಪ್ರೇಮ, ಗೋಸೇವೆ ಇತರ ಸಂಘಟನೆಗೆ ಮಾದರಿಯಾಗಲಿ ಎಂದರು.

ನೀಲಾವರ ಗೋಶಾಲೆಯ ನರಸಿಂಹ ಭಟ್, ಅರೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಜೀವ ಕುಲಾಲ್, ಕೆಂಜೂರು ಲಯನ್ಸ್ ಕ್ಲಬ್ ಅಧ್ಯಕ್ಷೆ ಜಯಶ್ರೀ ಶೆಟ್ಟಿ, ವಿಕಾಸ್ ಶೆಟ್ಟಿ ಉಡುಪಿ, ಗೋವಿಗಾಗಿ ಮೇವು ಕೋಟ ವಲಯಾದ್ಯಕ್ಷ ಪ್ರದೀಪ್ ಪೂಜಾರಿ, ಮಹಿಳಾ ಅಧ್ಯಕ್ಷೆ ವಿದ್ಯಾ ಸಾಲ್ಯಾನ್, ಜಿಲ್ಲಾ ಸಮಿತಿಯ ನಾಗೇಂದ್ರ ಪುತ್ರನ್, ರಾಘವೇಂದ್ರ ಪ್ರಭು, ಪ್ರದೀಪ್ ಪಡುಕೆರೆ, ಶಿವರಾಮ್ ಬಂಗೇರ ಕೋಟ, ಸ್ಪಂದನ ಯುವಕ ಮಂಡಲ ಆರೂರು, ಮಹಾಲಿಂಗೇಶ್ವರ ಭಜನಾ ಮಂಡಳಿ ಕೂರಾಡಿ, ಪಾಂಚಜನ್ಯ ಯುವಕ ಮಂಡಲ ಕೋಟ, ನೀತಾ ಪ್ರಭು ಗೆಳೆಯರ ಬಳಗ ಹಿರಿಯಡ್ಕ, ಗೋವಿಗಾಗಿ ಮೇವು ಕೋಟ – ಸಾಲಿಗ್ರಾಮ ವಲಯ ತಂಡ ಈ ಸಂಘಟನೆಗಳು ಭಾಗವಹಿಸಿದವು. ಶಿಕ್ಷಕ ಸಂತೋಷ್ ಶೆಟ್ಟಿ ಎಳ್ಳಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನವರಾತ್ರಿ ಮಹೋತ್ಸವ

ಪೀಠಿಕೆ ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಶರತ್ಕಾಲದ ಆಶ್ವಯುಜ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ...

ಉಡುಪಿ ಜಿಲ್ಲಾ ಕಾಂಗ್ರೆಸ್ ಸಭೆ

ಉಡುಪಿ, ಅ.19: ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್...

ಆಯುಷ್ಮಾನ್ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಕಟ್ಟಡದ ಗುದ್ದಲಿ ಪೂಜೆ

ಕಾಪು, ಅ.19: ಕಾಪು ವಿಧಾನಸಭಾ ಕ್ಷೇತ್ರದ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ...

ಚಿತ್ರಕಲಾ ಸ್ಪರ್ಧೆಗಳು ಮಕ್ಕಳ ಸುಪ್ತ ಸೃಜನಶೀಲತೆ ಅನಾವರಣಕ್ಕೆ ವೇದಿಕೆಯಾಗಲಿ: ಯಶ್ಪಾಲ್ ಸುವರ್ಣ

ಉಡುಪಿ, ಅ.19: ಉಚ್ಚಿಲ ದಸರಾ ಮಹೋತ್ಸವದ ಅಂಗವಾಗಿ ಮಹಾಲಕ್ಷ್ಮೀ ಕೋ ಆಪರೇಟಿವ್...
error: Content is protected !!