Friday, June 5, 2026
Friday, June 5, 2026

ಉಡುಪಿ ಬಾಲ ಕಾರ್ಮಿಕ ಮುಕ್ತ ಜಿಲ್ಲೆ ಆಗಬೇಕು: ಡಾ.ನವೀನ್ ಭಟ್

ಉಡುಪಿ ಬಾಲ ಕಾರ್ಮಿಕ ಮುಕ್ತ ಜಿಲ್ಲೆ ಆಗಬೇಕು: ಡಾ.ನವೀನ್ ಭಟ್

Date:

ಚೈಲ್ಡ್ ಲೈನ್ ಉಡುಪಿ ವತಿಯಿಂದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಕಾರ್ಯಕ್ರಮ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆಯಿತು. ಜನಜಾಗೃತಿಗಾಗಿ ಈ ಸಂಬಂಧ ಹೊರತಂದ ಪೋಸ್ಟರನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಅವರು ಬಿಡುಗಡೆ ಮಾಡಿ ಮಾತನಾಡಿದರು.

ಪ್ರತಿಯೊಂದು ಗ್ರಾಮದಲ್ಲಿ ಬಾಲಕಾರ್ಮಿಕತೆಗೆ ಹೆಚ್ಚು ತುತ್ತಾಗುವವರು ಶಾಲೆಯಿಂದ ಹೊರಗುಳಿದ ಮಕ್ಕಳು. ಕೋವಿಡ್ ಮತ್ತು ಇತರ ಕಾರಣಗಳಿಂದ ಅವರನ್ನು ಶಾಲೆಗೆ ಬರುವಂತೆ ಮಾಡುವ ಬಗ್ಗೆ ಎಲ್ಲರೂ ಪ್ರಯತ್ನಿಸಬೇಕು. ಈ ಬಗ್ಗೆ ಈಗಾಗಲೇ ಸರ್ವೆ ಮಾಡಲು ಗ್ರಾಮ ಶಿಕ್ಷಣ ಸಮಿತಿಗೆ ತಿಳಿಸಿದ್ದು ಅದರ ವರದಿಯ ಅನುಸಾರ ಕ್ರಿಯಾ ಯೋಜನೆ ರೂಪಿಸಿ ಬಾಲಕಾರ್ಮಿಕ ಮುಕ್ತ ಗ್ರಾಮಗಳಾಗುವಂತೆ ಮಾಡುವಲ್ಲಿ ಎಲ್ಲರ ಸಹಭಾಗಿತ್ವ ಪ್ರಮುಖವಾಗುತ್ತದೆ ಎಂದರು.

ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ

ಬಾಲಕಾರ್ಮಿಕ ಪದ್ಧತಿ ಕೊನೆಗಾಣಿಸುವ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶೆ ಕಾವೇರಿ ಅವರು, ಸಾರ್ವಜನಿಕರು ಯಾವುದೇ ಮಗು ಬಾಲಕಾರ್ಮಿಕನಾಗಿ ದುಡಿಯುತ್ತಿರುವುದನ್ನು ಕಂಡಲ್ಲಿ ಕೂಡಲೆ 1098 ಚೈಲ್ಡ್ ಲೈನ್ ಗೆ ಕರೆ ಮಾಡಿ ತಿಳಿಸಿದಲ್ಲಿ ಅ ಮಗುವನ್ನು ಅದರಿಂದ ಮುಕ್ತಿಗೊಳಿಸಲು ಸಹಾಯವಾಗುತ್ತದೆಂದು ತಿಳಿಸಿದರು. ಎಲ್ಲರ ಸಹಕಾರದಿಂದ ಉಡುಪಿಯು ಬಾಲಕಾರ್ಮಿಕ ಮುಕ್ತ ಜಿಲ್ಲೆ ಆಗಲೆಂದು ಆಶಿಸಿದರು.

ಚೈಲ್ಡ್ ಲೈನ್ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ, ಬಾಲಕಾರ್ಮಿಕ ವಿರೋಧಿ ದಿನದ ಮಹತ್ವವನ್ನು ತಿ಼ಳಸಿ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಬಾಲಕಾರ್ಮಿಕ ಮುಕ್ತ ಗ್ರಾಮಗಳನ್ನು ಗುರುತಿಸಿ ಗೌರವಿಸಲಾಗುವುದೆಂದು ಘೋಷಿಸಿದರು.

ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷ ನಾರಾಯಣ ಬಿ.ಕೆ., ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ವರ್ಣೇಕರ್, ಕಾರ್ಮಿಕ ನಿರೀಕ್ಷಕ ಪ್ರವೀಣ್, ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಚೈಲ್ಡ್ ಲೈನ್ ಸಹ ನಿರ್ದೇಶಕ ಗುರುರಾಜ ಭಟ್, ಸಂಯೋಜಕಿ ಕಸ್ತೂರಿ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಾರ್ವಜನಿಕರ ಕಷ್ಟಗಳಿಗೆ ತಕ್ಷಣ ಸ್ಪಂದಿಸಿ: ಅಧಿಕಾರಿಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ

ಬೆಂಗಳೂರು, ಜೂ.4: ಸರ್ಕಾರದ ಎಲ್ಲಾ ಅಪರ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ,...

ದೇಶಪ್ರೇಮಿಗೆ ಉಸಿರಿಗಿಂತ ದೇಶ ದೊಡ್ಡದು: ಡಾ.ಸುಧಾಕರ್ ಶೆಟ್ಟಿ; ಸೇನೆಗೆ ಒಂದು ಲಕ್ಷ ರೂಪಾಯಿ ಹಸ್ತಾಂತರದ ಮೂಲಕ ಮಾಲಿಕೆ ಪ್ರಾರಂಭ

ಕಾರ್ಕಳ, ಜೂ.4: ಶಿಕ್ಷಣದ ಜೊತೆಗೆ ದೇಶಭಕ್ತಿಯನ್ನು ನಮ್ಮ ವ್ಯಕ್ತಿತ್ವದೊಂದಿಗೆ ಜೋಡಿಸಿಕೊಂಡಾಗ ರಾಷ್ಟ್ರ...

ಶಿರ್ವ: ಜೀವನೋಪಾಯ ಸೇವಾ ಕೇಂದ್ರ ಉದ್ಘಾಟನೆ

ಶಿರ್ವ, ಜೂ.೪: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ, ಜಿಲ್ಲಾ...

ಸಮಾಜ ಸೇವಕ ಗುರುದತ್ ಪ್ರಭು ಅವರಿಂದ ಪೌರ ಕಾರ್ಮಿಕರಿಗೆ ಹಣ್ಣು, ಬಟ್ಟೆ ವಿತರಣೆ

ಬೆಂಗಳೂರು, ಜೂ.4: ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಕಮಲಾನಗರದಲ್ಲಿ ಸಮಾಜ ಸೇವಕರು...
error: Content is protected !!