Tuesday, September 29, 2026
Tuesday, September 29, 2026

ಆಗುಂಬೆ ಘಾಟಿ- ಭಾರಿ ವಾಹನಗಳ ಸಂಚಾರ ನಿಷೇಧ

ಆಗುಂಬೆ ಘಾಟಿ- ಭಾರಿ ವಾಹನಗಳ ಸಂಚಾರ ನಿಷೇಧ

Date:

ರಾಷ್ಟ್ರ‍ೀಯ ಹೆದ್ದಾರಿ 169ಎ ರ ತೀರ್ಥಹಳ್ಳಿ-ಉಡುಪಿ ರಸ್ತೆಯ ಆಗುಂಬೆ ಘಾಟಿ ರಸ್ತೆಯು ಕಿರಿದಾಗಿದ್ದು, ಮಳೆಗಾಲದಲ್ಲಿ ಭಾರಿ ಸರಕು ಸಾಗಾಣೆ ವಾಹನಗಳು ಸಂಚರಿಸುವುದರಿಂದ ರಸ್ತೆ ಬದಿಯ ಮಣ್ಣು ಕುಸಿದು, ಸುಗಮ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಕೇಂದ್ರ ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ರಾಜ್ಯ ಮೋಟಾರು ವಾಹನಗಳ ನಿಯಮ 1989 ಕಲಂ 221(ಎ)(2) & (5) ರನ್ವಯ ರಾಷ್ಟ್ರ‍ೀಯ ಹೆದ್ದಾರಿ 169 ಎ ರಸ್ತೆಯ ಆಗುಂಬೆ ಘಾಟಿಯಲ್ಲಿ ಅಕ್ಟೋಬರ್ 15 ರವರೆಗೆ 12 ಟನ್‌ಗಿಂತ ಅಧಿಕ ಭಾರದ ವಾಹನಗಳ ಸಂಚಾರವನ್ನು ನಿಷೇಧಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ. ಜಗದೀಶ್ ಆದೇಶಿಸಿದ್ದಾರೆ.

ಬದಲಿ ಮಾರ್ಗದ ವಿವರ:
ಉಡುಪಿ – ಸಿದ್ದಾಪುರ – ಹೊಸಂಗಡಿ – ಬಾಳೆಬರೇ ಘಾಟ್ ಹುಲಿಕಲ್- ಮಾಸ್ತಿಕಟ್ಟೆ- ತೀರ್ಥಹಳ್ಳಿ ಮಾರ್ಗವಾಗಿ ಶಿವಮೊಗ್ಗಕ್ಕೆ ಹಾಗೂ ಮಂಗಳೂರು-ಕಾರ್ಕಳ-ಹೆಬ್ರಿ-ಸಿದ್ಧಾಪುರ-ಹೊಸಂಗಡಿ-ಬಾಳೆಬರೇ ಘಾಟ್ -ಹುಲಿಕಲ್-ಮಾಸ್ತಿಕಟ್ಟೆ-ತೀರ್ಥಹಳ್ಳಿ-ಮಾರ್ಗವಾಗಿ ಶಿವಮೊಗ್ಗ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಂಗೊಳ್ಳಿ ರಾಯಣ್ಣ ಪುರಸ್ಕಾರಕ್ಕೆ ಸಂಘಟಕ, ರಂಗಕರ್ಮಿ ರವಿರಾಜ್ ಎಚ್. ಪಿ. ಆಯ್ಕೆ

ಉಡುಪಿ, ಸೆ.29: ಹತ್ತು ಹಲವು ಸಂಘ ಸಂಸ್ಥೆಯಲ್ಲಿ ತೊಡಗಿಸಿಕೊಂಡಿರುವ ಸಂಘಟಕ, ರಂಗಕರ್ಮಿ,...

ದೇಶದ ಕೃಷಿಯಲ್ಲಿ ರೈತ ಮಹಿಳೆಯರ ಪಾತ್ರ ಪ್ರಮುಖವಾದುದು: ವಿಧಾನಸಭೆ ಸಭಾಧ್ಯಕ್ಷ ಜಿ.ಎಸ್.ಪಾಟೀಲ

ಧಾರವಾಡ, ಸೆ.29: ರೈತರು ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ದೊರೆಯಬೇಕು. ವಿಶ್ವಸಂಸ್ಥೆಯು...

ದಾರಿದೀಪ ಹಾಗೂ ಹೈಮಾಸ್ಟ್ ಲೈಟ್‌ಗಳ ಸಮಸ್ಯೆ ಬಗೆಹರಿಸುವಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಮನವಿ

ಮಣಿಪಾಲ, ಸೆ.29: ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್...
error: Content is protected !!