Tuesday, October 13, 2026
Tuesday, October 13, 2026

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Date:

ಓವಲ್: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ನಲ್ಲಿ ಭಾರತ 157 ರನ್ನುಗಳ ಭರ್ಜರಿ ಗೆಲುವನ್ನು ಸಾಧಿಸುವ ಮೂಲಕ ಸರಣಿಯಲ್ಲಿ 2-1 ಮುನ್ನಡೆ ಕಾಯ್ದುಕೊಂಡಿದೆ. ಐದನೇ ದಿನವಾದ ಇಂದು ಇಂಗ್ಲೆಂಡ್ 100 ರನ್ ಗಳಿಸುವಷ್ಟರಲ್ಲಿ ಶಾರ್ದುಲ್ ಠಾಕೂರ್ ಮೊದಲ ಆಘಾತ ನೀಡಿದರು.

ಆರಂಭಿಕ ಬರ್ನ್ಸ್-ಹಮೀದ್ ಜೋಡಿ ಅರ್ಧಶತಕದ ಮೂಲಕ ಇಂಗ್ಲೆಂಡ್ ತಂಡಕ್ಕೆ ಭರವಸೆಯನ್ನು ನೀಡಿದರೂ ಈ ಜೋಡಿ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ಉಳಿಯಲಿಲ್ಲ. ಬರ್ನ್ಸ್ 50 ಗಳಿಸಿದರೆ ಹಮೀದ್ 63 ರನ್ ಹೊಡೆದು ಪೆವಿಲಿಯನ್ ಸೇರಿದರು.

ಬಳಿಕ ಇಂಗ್ಲೆಂಡ್ ದಾಂಡಿಗರು ಒಂದರ ನಂತರ ಒಂದರಂತೆ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು. ಒಟ್ಟು 147 ರನ್ ಆಗುವಷ್ಟರಲ್ಲಿ ಆಂಗ್ಲರು 6 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿದ್ದರು. 210ಕ್ಕೆ ಸರ್ವಪತನವಾದ ಇಂಗ್ಲೆಂಡ್, ಕೊಹ್ಲಿ ಪಡೆಯ ಎದುರು ತವರಿನ ನೆಲದಲ್ಲಿ 157 ರನ್ ಗಳ ಸೋಲನ್ನು ಅನುಭವಿಸಿತು.

ಬ್ಯಾಟಿಂಗ್ ನಲ್ಲೂ ಅತ್ಯಾಕರ್ಷವಾಗಿ ಆಡುವ ಮೂಲಕ ತಂಡವನ್ನು ಆಧರಿಸಿದ ಉಮೇಶ್ ಯಾದವ್ ಬೌಲಿಂಗ್ ನಲ್ಲೂ ಮಿಂಚಿ 3 ವಿಕೆಟ್ ಪಡೆದರು.

ಬುಮ್ರಾ 22 ಓವರುಗಳಲ್ಲಿ 9 ಮೈಡನ್ ಓವರ್ ಹಾಗೂ ಕೇವಲ 27 ರನ್ ನೀಡಿ ಶಿಸ್ತುಬದ್ಧ ದಾಳಿಯನ್ನು ಸಂಘಟಿಸಿ 2 ವಿಕೆಟ್ ಪಡೆದರು. ಜಡೇಜಾ, ಠಾಕೂರ್ ತಲಾ 2 ವಿಕೆಟ್ ಪಡೆದರು.

ಭಾರತ ಮೊದಲ ಮತ್ತು ದ್ವಿತೀಯ ಇನ್ನಿಂಗ್ಸ್ ನಲ್ಲಿ 191, 466 ರನ್ ಗಳಿಸಿದರೆ ಇಂಗ್ಲೆಂಡ್ 290, 210 ರನ್ ಗಳಿಸಿತು.

ಶತಕವೀರ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಡಾ. ಸುಧಾ ಯಾದವ್ ಕರ್ನಾಟಕದ ನೂತನ ರಾಜ್ಯಪಾಲೆ

ಬೆಂಗಳೂರು, ಅ.12: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಾ. ಸುಧಾ ಯಾದವ್...

ಅಮೇರಿಕನ್ ಅರ್ಥಶಾಸ್ತ್ರಜ್ಞರಾದ ರಾಬರ್ಟ್ ಇ. ಹಾಲ್ ಮತ್ತು ಮೈಕೆಲ್ ವುಡ್‌ಫೋರ್ಡ್ ಅವರಿಗೆ 2026 ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ

ಯು.ಬಿ.ಎನ್.ಡಿ., ಅ.12: 2026 ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಅಮೇರಿಕನ್ ಅರ್ಥಶಾಸ್ತ್ರಜ್ಞರಾದ...

ಅ.17-18: ಬ್ರಹ್ಮಾವರದಲ್ಲಿ ಕೃಷಿ ಮತ್ತು ತೋಟಗಾರಿಕೆ ಮೇಳ

ಉಡುಪಿ, ಅ.12: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ...

ಕ್ರಿಯೇಟಿವ್ ಗ್ಲೋಬಲ್ ಶಾಲೆಯಲ್ಲಿ ಅಂಚೆ ದಿನಾಚರಣೆ

ಕಾರ್ಕಳ, ಅ.12: ಮೊಬೈಲ್ ಸಂದೇಶಗಳ ಭರಾಟೆಯಲ್ಲಿ ಪತ್ರದ ಮಧುರತೆಯನ್ನು ಮರೆತಿರುವ ಇಂದಿನ...
error: Content is protected !!