Monday, September 28, 2026
Monday, September 28, 2026

ಯು.ಎ.ಇ- ಸಿ.ಬಿ.ಎಸ್.ಸಿ.ಕ್ಲಸ್ಟರ್ ವಿಭಾಗದ ಚೆಸ್ ಟೂರ್ನಮೆಂಟ್ ಉದ್ಘಾಟನೆ

ಯು.ಎ.ಇ- ಸಿ.ಬಿ.ಎಸ್.ಸಿ.ಕ್ಲಸ್ಟರ್ ವಿಭಾಗದ ಚೆಸ್ ಟೂರ್ನಮೆಂಟ್ ಉದ್ಘಾಟನೆ

Date:

ಯು.ಬಿ.ಎನ್.ಡಿ., ಸೆ.13: ಯು.ಎ.ಇ ನ ಏಳು ಎಮಿರೇಟ್ಸ್ ವ್ಯಾಪ್ತಿಯ ಶೈಕ್ಷಣಿಕ ಕ್ಲಸ್ಟರ್ ವಿಭಾಗದ ಸಿ.ಬಿ.ಎಸ್.ಸಿ.ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಚೆಸ್ ಟೂರ್ನಮೆಂಟ್ ಅಬುದಾಭಿಯ ಇಂಡಿಯನ್ ಸ್ಕೂಲ್‌ ನಲ್ಲಿ ಉದ್ಘಾಟನೆಗೊಂಡಿತು. ಅಬುಧಾಬಿ ಇಂಡಿಯನ್ ಸ್ಕೂಲಿನ ಶೈಕ್ಷಣಿಕ ಮತ್ತು ಕ್ರೀಡಾ ವಿಭಾಗದ ಆಡಳಿತ ಸಂಯೋಜಕ ಪರೀಕ ಸರ್ವೋತ್ತಮ ಶೆಟ್ಟಿ ಚೆಸ್ ಪಂದ್ಯಾಟಕ್ಕೆ ಚಾಲನೆ ನೀಡಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾಗಿ ಕ್ರೀಡೆ ಇದ್ದರೆ ಅದು ಚೆಸ್. ಈ ಆಟದಲ್ಲಿ ತೊಡಗಿಸಿಕೊಂಡಾಗ ವಿದ್ಯಾರ್ಥಿಗಳಲ್ಲಿ ಜ್ಞಾಪಕ ಶಕ್ತಿ ಸೃಜನಶೀಲತೆ ಯೇೂಚನಾಶಕ್ತಿ ಬೆಳೆಯಲು ಸಹಕಾರಿಯಾಗುತ್ತದೆ ಮಾತ್ರವಲ್ಲದೆ, ವಿದ್ಯಾರ್ಥಿಗಳಿಗೆ ಬದುಕಿನ ಮುಂದಿನ ಸವಾಲುಗಳನ್ನು ಎದುರಿಸುವ ಕೌಶಲ್ಯತೆಯನ್ನು ಬೆಳೆಸುವುದರಲ್ಲಿ ಚೆಸ್ ಕ್ರೀಡೆ ಸಹಕಾರಿ ಅನ್ನುವುದರೊಂದಿಗೆ ವಿಶ್ವದ ಹಾಗೂ ಭಾರತದ ಚೆಸ್ ದಿಗ್ಗಜರ ಸಾಧನೆಯು ನಮ್ಮ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು ಎಂದು ಶುಭ ಹಾರೈಸಿದರು.

ಸಂಸ್ಥೆಯ ಪ್ರಾಂಶುಪಾಲೆ ಡಾ. ಅಲ್ಫನಾ ಸ್ವಾನಿ ಅಧ್ಯಕ್ಷತೆ ವಹಿಸಿದ್ದರು .ವಿಶೇಷ ಅತಿಥಿಯಾಗಿ ಎಂ.ಜಿ.ಎಂ.ಕಾಲೇಜಿನ ರಾಜ್ಯಶಾಸ್ತ್ರ ನಿವೃತ್ತ ಮುಖ್ಯಸ್ಥ ಪ್ರೊ. ಕೊಕ್ಕರ್ಣೆ೯ ಸುರೇಂದ್ರನಾಥ ಶೆಟ್ಟಿ, ಉಪ ಪ್ರಾಂಶುಪಾಲೆ ಲಿಟ್ಟಿ ಥಾಮಸ್, ಯು.ಎ.ಇ.ಚೆಸ್ ಫೆಡರೇಶನ್ ಮುಖ್ಯ ತರಬೇತುದಾರ ಎನ್. ಎಂ. ಸಿ. ಬೊಗಡಾನ್, ಪಂದ್ಯಗಳ ಮುಖ್ಯ ವೀಕ್ಷಕ ಅಜುರುದ್ದೀನ್, ಆಡಳಿತಾಧಿಕಾರಿ ಅನೀಶ್ ಚತುರ್ವೇದಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯು ಎ.ಇ.ಏಳು ಎಮಿರೇಟ್ಸ್ ಶೈಕ್ಷಣಿಕ ಕ್ಲಸ್ಟರ್ ವಿಭಾಗಳಿಂದ 1150 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೊದಲ ದಿನ ಬಾಲಕಿಯರ ವಿಭಾಗದಲ್ಲಿ 39 ಶಾಲಾ ವಿದ್ಯಾರ್ಥಿಗಳು ಎರಡನೇಯ ದಿನ ಬಾಲಕರ ವಿಭಾಗದಲ್ಲಿ 53 ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಯು.ಎ.ಇ.ನಿಂದ ಆಯ್ಕೆಗೊಂಡ ವಿದ್ಯಾರ್ಥಿಗಳು ಭಾರತದಲ್ಲಿ ನಡೆಯುವ ಮುಂದಿನ ಚೆಸ್ ಪಂದ್ಯಗಳಲ್ಲಿ ಭಾಗವಹಿಸುವ ಅರ್ಹತೆ ಪಡೆಯಲಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಟಾಟಾ ಏರಿಸ್ ಬಿಡುಗಡೆ: ಮಾರುತಿ ಡಿಜೈರ್‌ಗೆ ಹೊಸ ಪ್ರತಿಸ್ಪರ್ಧಿಯಾಗಲಿದೆಯೇ ಈ ಕಾರು?

ನವದೆಹಲಿ, ಸೆ.26: ಟಾಟಾ ಮೋಟಾರ್ಸ್ ಭಾರತದಲ್ಲಿ 'ಏರಿಸ್' ಅನ್ನು ರೂ. 5.29...

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನಕ್ಕಾಗಿ ಭಾರತದ ಪ್ರಯತ್ನಕ್ಕೆ ಪೋರ್ಚುಗಲ್ ಮತ್ತು ಮಾರಿಷಸ್ ಬೆಂಬಲ

ನವದೆಹಲಿ, ಸೆ.26: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನ ಪಡೆಯುವ ಭಾರತದ...

ಏಷ್ಯನ್ ಗೇಮ್ಸ್‌ ಕಬಡ್ಡಿ: ಭಾರತಕ್ಕೆ ಅವಳಿ ಚಿನ್ನ

ಯು.ಬಿ.ಎನ್.ಡಿ., ಸೆ.26: ಜಪಾನ್‌ನಲ್ಲಿ ನಡೆಯುತ್ತಿರುವ ಐಚಿ-ನಗೋಯಾ ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ...

ಎಸ್.ಐ.ಆರ್ ಆದೇಶ ಸರ್ವಾನುಮತದಿಂದ ಅನುಮೋದನೆ: ಚುನಾವಣಾ ಆಯೋಗ

ನವದೆಹಲಿ, ಸೆ.26: ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಸ್.ಐ.ಆರ್ ಆದೇಶ...
error: Content is protected !!