Home ಸುದ್ಧಿಗಳು ಕ್ರೀಡೆ ಕಾಮನ್‌ವೆಲ್ತ್: ಭಾರತಕ್ಕೆ ಮತ್ತೊಂದು ಸ್ವರ್ಣ ಪದಕ

ಕಾಮನ್‌ವೆಲ್ತ್: ಭಾರತಕ್ಕೆ ಮತ್ತೊಂದು ಸ್ವರ್ಣ ಪದಕ

352
0

ಬರ್ಮಿಂಗ್‌ಹ್ಯಾಮ್‌: ಕಾಮನ್‌ವೆಲ್ತ್ ಗೇಮ್ಸ್ ಪುರುಷರ 73 ಕೆಜಿ ವಿಭಾಗದಲ್ಲಿ ಭಾರತದ ವೇಟ್‌ಲಿಫ್ಟರ್ ಅಚಿಂತಾ ಶೆಯುಲಿ 313 ಕೆಜಿಯಷ್ಟು ಭಾರ ಎತ್ತುವ ಮೂಲಕ ಚಿನ್ನದ ಪದಕವನ್ನು ಗೆದ್ದಿದ್ದಾರೆ.

ಭಾನುವಾರ ನಡೆದ ಈ ಪಂದ್ಯದಲ್ಲಿ ಅಚಿಂತಾ ಶೆಯುಲಿ ಸ್ನ್ಯಾಚ್ ವಿಭಾಗದ ಕೊನೆಯ ಪ್ರಯತ್ನದಲ್ಲಿ 143 ಕೆಜಿ ಭಾರ ಎತ್ತಿ ನೂತನ ದಾಖಲೆ ನಿರ್ಮಿಸಿದರು.

ಕ್ಲೀನ್ ಮತ್ತು ಜರ್ಕ್ ವಿಭಾಗದ ಮೂರನೇ ಪ್ರಯತ್ನದಲ್ಲಿ 170 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತುವ ಮೂಲಕ ಒಟ್ಟು 313 ಕೆಜಿಯಷ್ಟು ಭಾರ ಎತ್ತಿ ಚಿನ್ನಕ್ಕೆ ಮುತ್ತಿಟ್ಟರು.

ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಇದು ದೇಶಕ್ಕೆ ಬಂದ ಆರನೇ ಪದಕ ಹಾಗೂ ಮೂರನೇ ಚಿನ್ನದ ಪದಕವಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.