ಯು.ಬಿ.ಎನ್.ಡಿ., ಮಾ.19: ನಮ್ಮ ಮನೆಯ ಮಗಳು ಸುರಕ್ಷಿತವಾಗಿ ವಾಪಾಸ್ ಬರಲಿ ಎಂಬ ರೀತಿಯಲ್ಲಿ ಭಾರತೀಯರು ಕಳೆದ ಕೆಲವು ದಿನಗಳಿಂದ ನಡೆಸುತ್ತಿದ್ದ ಪ್ರಾರ್ಥನೆ ಕೊನೆಗೂ ಫಲ ನೀಡಿದೆ. ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ವಿಲ್ಮೋರ್ 286 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದ ನಂತರ ಬುಧವಾರ ಭೂಮಿಗೆ ಮರಳಿದ್ದಾರೆ. ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ವಿಲ್ಮೋರ್ ಗಗನಯಾತ್ರಿಗಳಾದ ನಿಕ್ ಹೇಗ್ ಮತ್ತು ಅಲೆಕ್ಸಾಂಡರ್ ಗೋರ್ಬುನೋವ್ ಅವರೊಂದಿಗೆ ಸ್ಪೇಸ್‌ಎಕ್ಸ್ ಕ್ರೂ ಡ್ರ್ಯಾಗನ್ ಕ್ಯಾಪ್ಸುಲ್‌ನಲ್ಲಿ ಭೂಮಿಗೆ ಮರಳಿದರು.


ಹೇಗಿತ್ತು ಲ್ಯಾಂಡಿಂಗ್?: ಕ್ಯಾಪ್ಯ್ಸೂಲ್ ನೀರಿನಲ್ಲಿ ಬಿದ್ದ ಆದ ತಕ್ಷಣ ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಸಿಬ್ಬಂದಿ ನಾಲ್ವರು ಗಗನಯಾನಿಗಳನ್ನು ಸ್ಪೇಸ್ ಎಕ್ಸ್ ರಿಕವರಿ ಶಿಪ್ ಮೇಗನ್ ನಲ್ಲಿ ಸುರಕ್ಷಿತವಾಗಿ ಕ್ಯಾಪ್ಸೂಲ್ ನಿಂದ ಸ್ಟ್ರೆಚರ್ ಮೂಲಕ ವೈದ್ಯಕೀಯ ಪರೀಕ್ಷೆಗಳಿಗೆ ಹೊರತಂದರು. ಕ್ಯಾಪ್ಸೂಲ್ ನಿಂದ ಹೊರಬರುತ್ತಿದ್ದಂತೆ ಸುನೀತಾ ವಿಲಿಯಮ್ಸ್ ಗೆಲುವಿನ ಚಿಹ್ನೆ ತೋರಿಸಿ ಗೆಲುವಿನ ನಗೆಯನ್ನು ಬೀರಿದರು.

ಗುಜರಾತ್ ನಲ್ಲಿ ಸಂಭ್ರಮಾಚರಣೆ: ಸುನೀತಾ ವಿಲಿಯಮ್ಸ್ ಅವರ ಪೂರ್ವಜರ ಊರಾದ ಗುಜರಾತ್ ರಾಜ್ಯದ ಮೆಹಸಾನ ಜಿಲ್ಲೆಯ ಜೂಲಾಸನ್ ನಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.




By
ForthFocus™