Home ಸುದ್ಧಿಗಳು ಅಂತರಾಷ್ಟ್ರೀಯ ಭಾರೀ ಹಿಮಪಾತ: ರೈಲು ಅವಘಡದಲ್ಲಿ 515 ಮಂದಿಗೆ ಗಾಯ

ಭಾರೀ ಹಿಮಪಾತ: ರೈಲು ಅವಘಡದಲ್ಲಿ 515 ಮಂದಿಗೆ ಗಾಯ

275
0

ಬೀಜಿಂಗ್, ಡಿ.15: ಭಾರೀ ಹಿಮಪಾತವಾದ ಕಾರಣ ಬೀಜಿಂಗ್‌ನಲ್ಲಿ ಎರಡು ಸಬ್‌ವೇ ರೈಲುಗಳು ಡಿಕ್ಕಿ ಹೊಡೆದು 515 ಮಂದಿ ಗಾಯಗೊಂಡಿದ್ದಾರೆ. ಗುರುವಾರ ಸಂಜೆ ಬೀಜಿಂಗ್‌ ಪರ್ವತದ ಪಶ್ಚಿಮದಲ್ಲಿ ಚಾಂಗ್ಪಿಂಗ್ ಲೈನ್‌ ಬಳಿ ಅಪಘಾತ ಸಂಭವಿಸಿದೆ. ತುರ್ತು ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಮತ್ತು ಸಾರಿಗೆ ಅಧಿಕಾರಿಗಳು ಘಟನಾ ಸ್ಥಳದಲ್ಲಿದ್ದು ತುರ್ತಾಗಿ ಕಾರ್ಯಾಚರಣೆ ಮಾಡಿ ಎಲ್ಲಾ ಪ್ರಯಾಣಿಕರನ್ನು ರಾತ್ರಿ 11 ಗಂಟೆಯ ವೇಳೆಗೆ ಸ್ಥಳಾಂತರಿಸಲಾಯಿತು. ಇಪ್ಪತ್ತೈದು ಪ್ರಯಾಣಿಕರು ನಿಗಾದಲ್ಲಿದ್ದಾರೆ ಮತ್ತು 67 ಮಂದಿ ಶುಕ್ರವಾರ ಬೆಳಿಗ್ಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪ್ರಾಧಿಕಾರ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.