Monday, July 27, 2026
Monday, July 27, 2026

ಬಾಲಕಿಯರ ಸ.ಪ.ಪೂ ಕಾಲೇಜು: ಜೀವನ ಕೌಶಲ್ಯ ತರಬೇತಿ

ಬಾಲಕಿಯರ ಸ.ಪ.ಪೂ ಕಾಲೇಜು: ಜೀವನ ಕೌಶಲ್ಯ ತರಬೇತಿ

Date:

ಉಡುಪಿ, ಸೆ.17: ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು ಉಡುಪಿ ಇಲ್ಲಿನ ಎನ್ ಎಸ್ ಎಸ್ ಘಟಕ ಮತ್ತು ಯುವಸ್ಪಂದನ ಉಡುಪಿ ಇವರ ಸಹಯೋಗದಲ್ಲಿ ಜೀವನ ಕೌಶಲ್ಯ ತರಬೇತಿ ಕಾರ್ಯಕ್ರಮ ನಡೆಯಿತು. ಮುಖ್ಯ ತರಬೇತುದಾರರಾಗಿ ನಿಮ್ಹಾನ್ಸ್. ಬೆಂಗಳೂರು ಇಲ್ಲಿನ ತರಬೇತುದಾರರಾದ ಅನು ಶೇಣ್ವಿ ಆಗಮಿಸಿದ್ದರು. ಅವರೊಂದಿಗೆ ಶ್ಯಾಮಲಾ. ಯುವಸ್ಪಂದನ ಉಡುಪಿ, ಗಿರಿಜಾ ಹೆಗಡೆ, ಉಪನ್ಯಾಸಕರು ತರಬೇತುದಾರರಾಗಿ ಸುಮಾರು 300 ಕ್ಕೂ ಹೆಚ್ಚು ವಿಧ್ಯಾರ್ಥಿನಿಯರಿಗೆ ಜೀವನ ಕೌಶಲ್ಯ ಕುರಿತ ಒಂದು ದಿನದ ತರಬೇತಿಯು ಚಟುವಟಿಕೆಗಳ ಮೂಲಕ ನಡೆಸಲಾಯಿತು.

ಪ್ರಾಂಶುಪಾಲರಾದ ಜಗದೀಶ್ ಕುಮಾರ್ ಗಿಡಗಳಿಗೆ ನೀರು ಸಿಂಚನ ಮಾಡುವುದರ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದರು. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಪ್ರಿಯಾಂಕಾ ಮತ್ತು ಬಳಗ ಪ್ರಾರ್ಥನೆ ಮಾಡಿದರು. ಇತಿಹಾಸ ಉಪನ್ಯಾಸಕರಾದ ಪ್ರಕಾಶ್ ಶೆಟ್ಟಿ ನಿರೂಪಿಸಿದರು. ಅರ್ಥಶಾಸ್ತ್ರ ಉಪನ್ಯಾಸಕರಾದ ಗಿರಿಜಾ ಹೆಗಡೆ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಸುಝೈಫಾ ವಂದಿಸಿದರು. ಯುವಸ್ಪಂದನದ ಪಾರ್ಥಸಾರಥಿ, ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶುಭಗೀತಾ, ಎನ್ ಎಸ್ ಎಸ್ ಘಟಕದ ವಿಧ್ಯಾರ್ಥಿ ನಾಯಕಿ ಮೇಘಾ ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದು ಹೆಮ್ಮೆಯ ಕ್ಷಣ: ಕಾರ್ಗಿಲ್ ಯೋಧ ಅನಂತಪದ್ಮನಾಭ ನಾಯಕ್

ಶಿರ್ವ, ಜು.26: 1999 ರ ಕಾರ್ಗಿಲ್ ಯುದ್ಧದಲ್ಲಿ ಭಾರತ ದೇಶದ ಪರವಾಗಿ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ದೇಶದ ಎಚ್ಚೆತ್ತ ಯುವಜನರ ಗೆಲುವಾಗಿದೆ: ಸಿದ್ದರಾಮಯ್ಯ

ಬೆಂಗಳೂರು, ಜು.26: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ದೇಶದ ಎಚ್ಚೆತ್ತ ಯುವಜನರ ಗೆಲುವಾಗಿದೆ....
error: Content is protected !!