Tuesday, September 29, 2026
Tuesday, September 29, 2026

ಸಂಕಟದ ಸಂತೆಯಲ್ಲೂ ಸಂಭ್ರಮ ಹುಡುಕಿಕೊಳ್ಳಿ

ಸಂಕಟದ ಸಂತೆಯಲ್ಲೂ ಸಂಭ್ರಮ ಹುಡುಕಿಕೊಳ್ಳಿ

Date:

ಹಿರಿಯಡಕ, ಸೆ.16: ಆತ್ಮವಿಶ್ವಾಸ ಕಳೆದುಕೊಳ್ಳದೇ ಸಂಕಟದ ಸಂತೆಯಲ್ಲೂ ಸಂಭ್ರಮವನ್ನು ಹುಡುಕಿಕೊಳ್ಳುವ ಮೂಲಕ ಪರೀಕ್ಷೆಗಿಂತ ಬದುಕಿನಲ್ಲಿ ಗೆಲ್ಲುವಂತಾಗಬೇಕು ಮಾತ್ರವಲ್ಲ ಯಾರಿಗೂ ಮೋಸ ಮಾಡದೆ ಸೋಲನ್ನೂ ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ಆತ್ಮೋನ್ನತಿಯ ಗುಣವನ್ನು ಬೆಳೆಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಸಮಾಜ ಮತ್ತು ದೇಶಕ್ಕೆ ಆಸ್ತಿಯಾಗಬೇಕೆಂದು ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಹೇಳಿದರು. ಅವರು ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2025- 26ನೆಯ ಸಾಲಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಉದ್ಘಾಟನಾ ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶಿರ್ವ ಎಂ. ಎಸ್‌. ಆರ್‌. ಎಸ್‌. ಕಾಲೇಜಿನ ಪ್ರಾಂಶುಪಾಲ ಡಾ. ಮಿಥುನ್‌ ಚಕ್ರವರ್ತಿಯವರು, ʼಪರಂಪರೆಯ ಬೆಳಕಿನೊಂದಿಗೆ ವರ್ತಮಾನದ ಎಚ್ಚರದಲ್ಲಿ ರೂಪುಗೊಳ್ಳುವ ಶಿಕ್ಷಣ ಆತ್ಮವಿಶ್ವಾಸದ ಜೊತೆಗೆ ಸಾಮಾಜಿಕ ನೆಮ್ಮದಿಯನ್ನು ತರಬಲ್ಲದುʼಎಂದರು.

ಪ್ರಾಂಶುಪಾಲ ಪ್ರೊ. ಜಯಪ್ರಕಾಶ್‌ ಶೆಟ್ಟಿ ಹೆಚ್‌, ಐಕ್ಯುಎಸಿ ಸಂಚಾಲಕ ಡಾ. ಲಿತಿನ್‌ ಬಿ ಎಂ., ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಅಧ್ಯಕ್ಷ ಈರಬಸು ಕುಂಬಾರ, ಉಪಾಧ್ಯಕ್ಷೆ ವೈಷ್ಣವಿ, ಕಾರ್ಯದರ್ಶಿ ಸಂತೋಷ್‌ ಹಾಗೂ ಇತರರು ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಸಂಚಾಲಕಿ ಡಾ. ಸೌಮ್ಯಲತಾ ಪಿ. ಪ್ರಮಾಣವಚನ ಬೋಧಿಸಿದರು. ಸಿತೀಕ್ಷಾ ಸ್ವಾಗತಿಸಿ, ಸುಹಾ ವಂದಿಸಿದರು. ಪಲ್ಲವಿ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ ಜ್ಞಾನಸುಧಾ: ಎನ್.ಎಸ್. ಎಸ್ ದಿನಾಚರಣೆ

ಮಣಿಪಾಲ, ಸೆ.29: ಮಣಿಪಾಲ ಜ್ಞಾನಸುಧಾ ಪ. ಪೂ. ಕಾಲೇಜಿನಲ್ಲಿ ಎನ್.ಎಸ್. ಎಸ್...

ಸಂಗೊಳ್ಳಿ ರಾಯಣ್ಣ ಪುರಸ್ಕಾರಕ್ಕೆ ಸಂಘಟಕ, ರಂಗಕರ್ಮಿ ರವಿರಾಜ್ ಎಚ್. ಪಿ. ಆಯ್ಕೆ

ಉಡುಪಿ, ಸೆ.29: ಹತ್ತು ಹಲವು ಸಂಘ ಸಂಸ್ಥೆಯಲ್ಲಿ ತೊಡಗಿಸಿಕೊಂಡಿರುವ ಸಂಘಟಕ, ರಂಗಕರ್ಮಿ,...

ದೇಶದ ಕೃಷಿಯಲ್ಲಿ ರೈತ ಮಹಿಳೆಯರ ಪಾತ್ರ ಪ್ರಮುಖವಾದುದು: ವಿಧಾನಸಭೆ ಸಭಾಧ್ಯಕ್ಷ ಜಿ.ಎಸ್.ಪಾಟೀಲ

ಧಾರವಾಡ, ಸೆ.29: ರೈತರು ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ದೊರೆಯಬೇಕು. ವಿಶ್ವಸಂಸ್ಥೆಯು...
error: Content is protected !!