Monday, October 5, 2026
Monday, October 5, 2026

ಬಜೆಟ್ ವಿಶ್ಲೇಷಣೆ

ಬಜೆಟ್ ವಿಶ್ಲೇಷಣೆ

Date:

ನಗರ ಪ್ರದೇಶಗಳ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ನೀಡಿರುವುದು ಸ್ವಾಗತಾರ್ಹ. ಹೈ ಸ್ಪೀಡ್ ರೈಲ್ವೆ ಕಾರಿಡಾರ್ ಬೆಂಗಳೂರಿಗೂ ವಿಸ್ತರಣೆ ಮಾಡಿರುವುದು ಶ್ಲಾಘನೀಯ. ಟ್ಯೂರಿಸಂ ಬೆಳವಣಿಗೆಗೆ ಪೂರಕವಾಗಿ ಮೆಡಿಕಲ್‌ ಟ್ಯುಾರಿಸಂ ಹೆಸರಿನಲ್ಲಿ ಐದು ಪ್ರದೇಶದಲ್ಲಿ ಮೆಡಿಕಲ್‌ ಹಬ್ ಸ್ಥಾಪನೆಗೆ ಮುಂದಾಗಿರುವುದು ಉದ್ಯೋಗ ಸೃಷ್ಟಿಗೆ ಸಹಾಯಕವಾಗಬಹುದು ಅನ್ನುವುದು ಸರ್ಕಾರದ ನಿರೀಕ್ಷೆ. ಪಶು ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಹೆಚ್ಚಿನ ಅನುದಾನದ ಭರವಸೆ ಆಶಾದಾಯಕ. ಸಣ್ಣ ಕೈಗಾರಿಕೆ ಮತ್ತು ಖಾದಿ ಗುಡಿಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚಿನ ಉತ್ತೇಜನ ಕ್ರಮ ಸ್ವಾಗತಾರ್ಹ.

ಕರಾವಳಿ ಪ್ರದೇಶದ ಮೀನುಗಾರರ ಸಹಕಾರಿ ಸಂಸ್ಥೆ ಸ್ಥಾಪನೆ ಬಗ್ಗೆ ಬಜೆಟ್ ನಲ್ಲಿ ಒತ್ತು ನೀಡಿರುವುದು ಬಜೆಟ್ ನಲ್ಲಿ ಕಾಣುವ ಉತ್ತಮ ಅಂಶ. ಜಿ.ಎಸ್.ಟಿ ಸರಳೀಕೃತ ನಿರ್ಧಾರ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಸಮಾಧಾನಕರ ಬಜೆಟ್. ಕ್ಯಾನ್ಸರ್‌ ನಂತಹ ಪ್ರಮುಖ ಖಾಯಿಲೆಗಳ ಔಷಧಿಗಳಿಗೆ ತೆರಿಗೆ ವಿನಾಯಿತಿ ತೇೂರಿರುವುದು ಬಜೆಟ್ ನಲ್ಲಿ ಕಾಣುವ ಇನ್ನೊಂದು ಪ್ರಮುಖ ಅಂಶ. 2047 ತನಕ ಭಾರತದಲ್ಲಿ ವಿದೇಶಿ ಕಂಪನಿಗಳ ಬಂಡವಾಳ ಹೂಡಿಕೆಗೆ ತೆರಿಗೆ ವಿನಾಯಿತಿ ನೀಡಿರುವುದರಿಂದ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಬಹುದು.

ಒಟ್ಟಿನಲ್ಲಿ ವಿತ್ತ ಸಚಿವರು ಮಂಡಿಸಿದ ಬಜೆಟ್ ಅಭಿವೃದ್ಧಿ ಜನಪರ ಯೇೂಗಕ್ಷೇಮದ ದೃಷ್ಟಿಯಿಂದ ಹೊಸದೊಂದು ಕನಸು ಮೂಡಿಸಿದೆ. ಆದರೆ ಜನಸಾಮಾನ್ಯರ ಮುಂದಿರುವ ಬಹುದೊಡ್ಡ ಪ್ರಶ್ನೆ ಅಂದರೆ ಕಳೆದ ಆರ್ಥಿಕ ವರ್ಷದಲ್ಲಿ ಮಂಡಿಸಿದ ಬಜೆಟ್ ಎಷ್ಟರ ಮಟ್ಟಿಗೆ ಅನುಷ್ಠಾನಗೊಂಡಿದೆ ಅನ್ನುವ ಲೆಕ್ಕಾಚಾರ ಪ್ರಸ್ತುತ ಬಜೆಟ್ ನಲ್ಲಿ ಎಲ್ಲಿಯೂ ಉಲ್ಲೇಖಿಸದೇ ಇರುವುದು ವಿಷಾದನೀಯ. ಜನಸಾಮಾನ್ಯರಿಗೆ ಯಾವುದೇ ಬಜೆಟ್ ಮೇಲೆ ವಿಶ್ವಾಸಾರ್ಹತೆ ಮೂಡಿಬರಬೇಕಾದರೆ ಹಿಂದಿನ ಬಜೆಟ್ ಮೇಲಿನ ಪ್ರಗತಿಯ ಕುರಿತಾಗಿ ಸದನಕ್ಕೆ ಮಾಹಿತಿ ನೀಡುವ ಕಾರ್ಯ ನಡೆಯಲೇಬೇಕು ಅನ್ನುವುದು ನನ್ನ ಸ್ವಷ್ಟ ಅಭಿಪ್ರಾಯ.

ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ (ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕ)

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ಜಾನಕಿ ನಮನ’

ಉಡುಪಿ, ಅ.4: ಉಡುಪಿಯ ಕೋಸ್ಟಲ್‌ ಸ್ಟಾರ್‌ ಮ್ಯೂಸಿಕ್‌ ಕ್ಲಬ್‌ ಆಶ್ರಯದಲ್ಲಿ ಕರ್ಣಾಟಕ...

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ. ನಿಖಿಲ್ ಗುಪ್ತ ಭೇಟಿ

ಕಾಪು, ಅ.4: ಮಹಾರಾಷ್ಟ್ರದ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ...

ಕುಪ್ಮಾ ಉತ್ತಮ ಉಪನ್ಯಾಸಕ ಪ್ರಶಸ್ತಿ ಪ್ರದಾನ

ಮಣಿಪಾಲ, ಅ.4: ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ...
error: Content is protected !!