Sunday, October 4, 2026
Sunday, October 4, 2026

2025 ರಲ್ಲಿ ಖಗೋಳದಲ್ಲಿ ಕೆಲ ವಿಶೇಷಗಳು

2025 ರಲ್ಲಿ ಖಗೋಳದಲ್ಲಿ ಕೆಲ ವಿಶೇಷಗಳು

Date:

1. ಸೂರ್ಯನ ಜ್ವಾಲೆಗಳ ನರ್ತನ: ಹನ್ನೊಂದು ವರ್ಷದಲ್ಲೊಮ್ಮೆ ನಡೆಯುವ ಅತೀ ಹೆಚ್ಚು ಸೌರಜ್ವಾಲೆಗಳು ಸೂರ್ಯ ಹೊರ ಹಾಕುವಿಕೆ ಕಳೆದ ವರ್ಷ ಪ್ರಾರಂಭವಾದುದು ಈ ವರ್ಷದ ಪ್ರಾರಂಭದ ಕೆಲ ತಿಂಗಳಲ್ಲಿ ಅತಿಯಾಗಲಿದೆ. ಕುದಿಯುವ ಸೂರ್ಯ ದಶದಿಶೆಗೆ ವಿಶೇಷ ಶಕ್ತಿ ಕಣಗಳೊಂದಿಗೆ ಬೆಳಕನ್ನು ಚಿಮ್ಮಿ, ಅತೀ ಹೆಚ್ಚು ಸೌರಕಲೆಗಳುಂಟಾಗಲಿವೆ.

2. ಗ್ರಹಣಗಳು: ಈ ವರ್ಷ ನಾಲ್ಕು ಗ್ರಹಣಗಳು ಸಂಭವಿಸುವುವಾದರೂ ಭಾರತಕ್ಕೆ ಒಂದೇ. ಮಾರ್ಚ್ 13/14 ಚಂದ್ರ ಗ್ರಹಣ, ಮಾರ್ಚೆ 29 ಪಾರ್ಶ್ವ ಸೂರ್ಯ ಗ್ರಹಣ, ಸೆಪ್ಟಂಬರ್ 7/8 ಚಂದ್ರ ಗ್ರಹಣ ಹಾಗೂ ಸೆಪ್ಟಂಬರ್ 21 ಪಾರ್ಶ್ವ ಸೂರ್ಯ ಗ್ರಹಣ. ಇವುಗಳಲ್ಲಿ ಭಾರತಕ್ಕೆ ಸಪ್ಟಂಬರ್ 7 ರ ಚಂದ್ರಗ್ರಹಣ ಒಂದೇ ಗೋಚರ.

3. ಸೂಪರ್ಮೂನ್ಗಳು: ಈ ವರ್ಷ ಮೂರು ಸೂಪರ್ಮೂನ್ಗಳು. ಅಕ್ಟೋಬರ್ 7 ನವಂಬರ್ 5, ಡಿಸೆಂಬರ್ 4 ಸೂಪರ್ ಮೂನ್ಗಳಾದರೆ, ಮಾರ್ಚ್ 14, ಎಪ್ರಿಲ್ 13 ಹಾಗೂ ಮೇ 12 ಗಳಲ್ಲಿ ಮೈಕ್ರೋ ಮೂನ್ ಸಂಭವಿಸಲಿದೆ.

4. ಶನಿಗ್ರಹದ ಬಳೆ ಮಾಯ: 29 ವರ್ಷಕ್ಕೆ ಎರಡು ಬಾರಿ ಭೂಮಿಯವರಿಗೆ ಶನಿಗ್ರಹದ ಸುಂದರ ಬಳೆಗಳು ಕಾಣುವುದೇ ಇಲ್ಲ.ಈ ವರ್ಷದ ಮಾರ್ಚ್ ನಿಂದ ನವಂಬರ್ ವರೆಗೆ ದೂರದರ್ಶಕದಲ್ಲಿ ಶನಿಯ ಬಳೆಗಳೇ ಕಾಣುವುದಿಲ್ಲ. ಶನಿಗ್ರಹದ ಬಳೆಗಳ ಸಮತಲ ಹಾಗೂ ಭೂಮಿಯ ಸಮತಲ ಒಂದೇ ಆಗುವುದೇ ಇದಕ್ಕೆ ಕಾರಣ.

ಈ ವರ್ಷ ಜನವರಿಯಲ್ಲಿ ಮಂಗಳ, ಸಪ್ಟಂಬರ್ ನಲ್ಲಿ ಶನಿ ಡಿಸೆಂಬರ್ ನಲ್ಲಿ ಗುರುಗ್ರಹ ಭವ್ಯವಾಗಿ ಕಾಣಲಿವೆ. ವಿಶೀಷವೆಂದರೆ ಸಂಜೆಯ ಆಕಾಶದಲ್ಲಿ ಜನವರಿ ಅಂತ್ಯದಲ್ಲಿ ಕಣ್ಣಿಗೆ ಕಾಣುವ ನಾಲ್ಲು ಗ್ರಹಗಳು ಹಾಗೆಯೇ ಫೆಬ್ರವರಿ ಅಂತ್ಯದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಬುದ, ಶುಕ್ರ, ಶನಿ ಗುರು ಹಾಗೂ ಮಂಗಳ ಈ ಐದು ಗ್ರಹಗಳೂ ಸುಂದರವಾಗಿ ಕಾಣಲಿವೆ.

-ಡಾ. ಎ.ಪಿ ಭಟ್, ಉಡುಪಿ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತೆಂಕನಿಡಿಯೂರು ಕಾಲೇಜು: ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ

ತೆಂಕನಿಡಿಯೂರು, ಅ.3: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ...

ವಿಧಿಕ್ತ–2026 ಉದ್ಘಾಟನೆ

ಕುಂದಾಪುರ, ಅ.3: ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ವಾಣಿಜ್ಯ ವಿಭಾಗದ...

ಕ್ರಿಯೇಟಿವ್ ಕಾಲೇಜು: ಗಾಂಧಿ ಜಯಂತಿ ಸಂಭ್ರಮ

ಕಾರ್ಕಳ, ಅ.3: ಕ್ರಿಯೇಟಿವ್ ಪದವಿ ಕಾಲೇಜಿನಲ್ಲಿ ಮಹಾತ್ಮ ಗಾಂಧಿ ಜಯಂತಿ ಹಾಗೂ...
error: Content is protected !!