Tuesday, October 6, 2026
Tuesday, October 6, 2026

ಭಾಸ್ಕರ್ ಶೆಟ್ಟಿ ಕೊಲೆ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಭಾಸ್ಕರ್ ಶೆಟ್ಟಿ ಕೊಲೆ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Date:

ರಾಜ್ಯವನ್ನು ಬೆಚ್ಚಿ ಬೀಳಿಸಿದ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಮಂದಿ ಅಪರಾಧಿಗಳಿಗೆ ಜೀವಿತಾವಧಿ ಜೈಲು ಶಿಕ್ಷೆ ಪ್ರಕಟಿಸಿ ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. ಮೂವರು ಅಪರಾಧಿಗಳಾದ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಶೆಟ್ಟಿ, ಮತ್ತು ರಾಜೇಶ್ವರಿಯ ಗೆಳೆಯ ನಂದಳಿಕೆಯ ಜೋತಿಷ್ಯ ನಿರಂಜನ ಭಟ್ ಗೆ ಜೀವಿತಾವಧಿ ಶಿಕ್ಷೆ ನೀಡಲಾಗಿದೆ. 

2016 ಜುಲೈ 28ರಂದು ಉಡುಪಿಯ ಇಂದ್ರಾಳಿಯಲ್ಲಿರುವ ಮನೆಯಿಂದ ಉದ್ಯಮಿ ಭಾಸ್ಕರ್ ಶೆಟ್ಟಿ ನಾಪತ್ತೆಯಾಗಿದ್ದರು. ಸುಮಾರು ಒಂದು ವಾರದ ನಂತರ ಪೊಲೀಸರು ಭಾಸ್ಕರ್ ಶೆಟ್ಟಿಯವರ ಪತ್ನಿ ಮತ್ತು ಮಗನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿತ್ತು. 

ಪ್ರಕರಣದ ಪ್ರಮುಖ ಆರೋಪಿಗಳಾದ ಭಾಸ್ಕರ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿಗೆ ಜಾಮೀನು ಲಭಿಸಿದ್ದರೆ ಮಗ ನವನೀತ್ ಮತ್ತು ಆಕೆಯ ಗೆಳೆಯ ನಿರಂಜನ ಭಟ್ ಬೆಂಗಳೂರಿನ ಜೈಲಿನಲ್ಲಿದ್ದಾರೆ. ನಾಲ್ಕನೇ ಆರೋಪಿ ನಿರಂಜನ ಭಟ್ ತಂದೆ ಶ್ರೀನಿವಾಸ ಭಟ್ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಐದನೇ ಆರೋಪಿ ರಾಘವೇಂದ್ರ ಖುಲಾಸೆಗೊಂಡಿದ್ದಾರೆ. 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಅ.8: ನೇರ ಸಂದರ್ಶನ

ಉಡುಪಿ, ಅ.5: ನಗರದ ಶಾಂತ ಎಲೆಕ್ಟ್ರಿಕಲ್ಸ್ ಪ್ರೈ ಲಿ., ಆಭರಣ ಜುವೆರ‍್ಸ್...

ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ಅಭಿವಿನ್ಯಾಸ ಕಾರ್ಯಕ್ರಮ

ಕುಂದಾಪುರ, ಅ.5: ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ ಸರ್ಕಾರಿ ಪ್ರಥಮ...

ವಿಶ್ವ ಕೊಂಕಣಿ ಕೇಂದ್ರ: ಕನಕದಾಸರ ಸಾಹಿತ್ಯ ವಿಚಾರಸಂಕಿರಣ; ಗೀತ ಗಾಯನ

ಮಂಗಳೂರು, ಅ.5: ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನ ವಿಶ್ವ ಕೊಂಕಣಿ...

‘ಗಾಂಧೀ ಚಿಂತನೆ ಮತ್ತು ಪ್ರಸ್ತುತತೆ’ ಉಪನ್ಯಾಸ

ಬಸ್ರೂರು, ಅ.5: ಗಾಂಧೀ ಜಯಂತಿ ಪ್ರಯುಕ್ತ ಶ್ರೀ ಶಾರದಾ ಕಾಲೇಜು ಬಸ್ರೂರಿನಲ್ಲಿ...
error: Content is protected !!