Wednesday, July 29, 2026
Wednesday, July 29, 2026

ಹಳಿ ತಪ್ಪಿದ ಹೌರಾ-ಮುಂಬೈ ರೈಲು; 2 ಸಾವು, 20 ಮಂದಿಗೆ ಗಾಯ

ಹಳಿ ತಪ್ಪಿದ ಹೌರಾ-ಮುಂಬೈ ರೈಲು; 2 ಸಾವು, 20 ಮಂದಿಗೆ ಗಾಯ

Date:

ಚಕ್ರಧರಪುರ್ (ಜಾರ್ಖಂಡ್), ಜು.30: ಹೌರಾ-ಮುಂಬೈ ರೈಲಿನ 18 ಬೋಗಿಗಳು ಹಳಿ ತಪ್ಪಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು  20 ಮಂದಿಗೆ ಗಾಯಗೊಂಡ ದುರಂತದ ಘಟನೆ ಜಾರ್ಖಂಡ್‌ನ ಚಕ್ರಧರಪುರ ವಿಭಾಗದ ಪೊಟೊಬೆಡಾ ಗ್ರಾಮದ ಬಳಿ ಸಂಭವಿಸಿದೆ. ಹೌರಾದಿಂದ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್‌ಗೆ ರೈಲು ಪ್ರಯಾಣ ಬೆಳೆಸಿತ್ತು. ಗಾಯಗೊಂಡ ಪ್ರಯಾಣಿಕರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಹಿರಿಯ ರೈಲ್ವೇ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಪಘಾತದ ಸ್ಥಳಕ್ಕೆ ಪರಿಹಾರ ರೈಲು ತಲುಪಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ರೈಲ್ವೇಯು ಟಾಟಾನಗರ (06572290324), ಚಕ್ರಧರಪುರ (06587 238072), ರೂರ್ಕೆಲಾ (06612501072, 06612500244), ರಾಂಚಿ (0651278711) ಮತ್ತು ಹೌರಾ (93233873203373203356) ಗೆ ಸಹಾಯವಾಣಿ ಸಂಖ್ಯೆಗಳನ್ನು ನೀಡಿದೆ.

ಏನಾಗಿತ್ತು?: ಸೋಮವಾರ ರಾತ್ರಿ ಹೌರಾದಿಂದ ಪ್ರಯಾಣ ಬೆಳೆಸಿದ ಹೌರಾ-ಮುಂಬೈ ರೈಲು, ಮಂಗಳವಾರ ಬೆಳಿಗ್ಗೆ 3.45 ಗಂಟೆಗೆ ಕೆಲವೇ ಕ್ಷಣಗಳ ಹಿಂದೆ ಹಳಿ ತಪ್ಪಿದ ಗೂಡ್ಸ್ ರೈಲಿಗೆ ಢಿಕ್ಕಿಯಾದ ಪರಿಣಾಮ ಹೌರಾ-ಮುಂಬೈ ರೈಲು ಹಳಿ ತಪ್ಪಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನಿವೃತ್ತ ಶಿಕ್ಷಕ ಮಲ್ಪೆ ರಾಘವೇಂದ್ರರಿಗೆ ಸೇವಾ ಪ್ರಶಸ್ತಿ

ಕಟಪಾಡಿ, ಜು.28: ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದಲ್ಲಿ...

ಹೆಜಮಾಡಿ ಟೋಲ್ ಸಮಸ್ಯೆ: ಅಧಿಕಾರಿಗಳು ಮತ್ತು ಸ್ಥಳೀಯರೊಂದಿಗೆ ಶಾಸಕರ ಸಭೆ

ಹೆಜಮಾಡಿ, ಜು.28: ಹೆಜಮಾಡಿ ಟೋಲ್ ಸಮಸ್ಯೆಗೆ ಸಂಬಂಧಿಸಿದಂತೆ ಶಾಸಕರಾದ ಗುರ್ಮೆ ಸುರೇಶ್...

ಶ್ರೀ ಕಾಮೇಶ್ವರ ದೇವಸ್ಥಾನ ಬೈಕಾಡಿ: ಸಮಿತಿ ಸದಸ್ಯರಿಂದ ಧರ್ಮಸ್ಥಳ ಭೇಟಿ

ಬ್ರಹ್ಮಾವರ, ಜು.28: ಶ್ರೀ ಕಾಮೇಶ್ವರ ದೇವಸ್ಥಾನ ಬೈಕಾಡಿ ಇದರ ಅಭಿವೃದ್ಧಿ ಮತ್ತು...
error: Content is protected !!