Thursday, October 1, 2026
Thursday, October 1, 2026

ನಾಳೆಯಿಂದ ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭ

ನಾಳೆಯಿಂದ ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭ

Date:

ನವದೆಹಲಿ, ಜು.19: ಮಳೆಗಾಲದ ಅಧಿವೇಶನವು ನಾಳೆಯಿಂದ ಪ್ರಾರಂಭವಾಗಿ ಮುಂದಿನ ತಿಂಗಳ 13 ರವರೆಗೆ ನಡೆಯಲಿದೆ. ಅಧಿವೇಶನದ ಸಂದರ್ಭದಲ್ಲಿ, ಹಲವಾರು ಪ್ರಮುಖ ಶಾಸನಗಳನ್ನು ಚರ್ಚೆ ಮತ್ತು ಅಂಗೀಕಾರಕ್ಕಾಗಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.

ಮಳೆಗಾಲದ ಅಧಿವೇಶನದ ಮುನ್ನಾದಿನ, ಸರ್ಕಾರ ಭಾನುವಾರ ಸಂಸತ್ ಭವನದ ಅನೆಕ್ಸ್‌ನಲ್ಲಿ ಸರ್ವಪಕ್ಷ ಸಭೆ ಕರೆದಿತ್ತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮತ್ತು ರಾಜ್ಯಸಭೆಯಲ್ಲಿ ಸದನದ ನಾಯಕ ಜಗತ್ ಪ್ರಕಾಶ್ ನಡ್ಡಾ, ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರು ಅರ್ಜುನ್ ರಾಮ್ ಮೇಘವಾಲ್ ಮತ್ತು ಡಾ. ಎಲ್. ಮುರುಗನ್ ಸಭೆಯಲ್ಲಿ ಉಪಸ್ಥಿತರಿದ್ದರು. ಅಪ್ನಾ ದಳ ನಾಯಕ ಅನುಪ್ರಿಯಾ ಪಟೇಲ್, ಜೆಡಿಯು ನಾಯಕ ಸಂಜಯ್ ಝಾ, ಟಿಡಿಪಿ ನಾಯಕ ಲಾವು ಶ್ರೀಕೃಷ್ಣ ದೇವರಾಯಲು, ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಸಮಾಜವಾದಿ ಪಕ್ಷದ ನಾಯಕ ಧರ್ಮೇಂದ್ರ ಯಾದವ್, ಜಾರ್ಖಂಡ್ ಮುಕ್ತಿ ಮೋರ್ಚ್ ರಾಜ್ಯಸಭಾ ಸಂಸದೆ ಮಹುವಾ ಮಾಜಿ ಜೊತೆಗೆ 40 ರಾಜಕೀಯ ಪಕ್ಷಗಳ 50 ಕ್ಕೂ ಹೆಚ್ಚು ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಉಡುಪಿ ಜಿಲ್ಲಾ ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿಗೆ ಐವರು ಆಯ್ಕೆ

ಉಡುಪಿ, ಅ.1: ಕರ್ನಾಟಕ ಅನುದಾನರಹಿತ ಪದವಿಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘಟನೆ...
error: Content is protected !!