Saturday, November 21, 2026
Saturday, November 21, 2026

ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ರೂ.2.2 ಲಕ್ಷ ನೆರವು; ಕೆ,ಎಂ,ಸಿ ಆಸ್ಪತ್ರೆ ಎಸಿ ವಿಭಾಗ ಹಾಗೂ ಉಡುಪಿಯ ದರ್ಪಣ ಮಹಿಳಾ ಪಿಲಿ ತಂಡದಿಂದ ಶ್ಲ್ಯಾಘನೀಯ ಕಾರ್ಯ

ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ರೂ.2.2 ಲಕ್ಷ ನೆರವು; ಕೆ,ಎಂ,ಸಿ ಆಸ್ಪತ್ರೆ ಎಸಿ ವಿಭಾಗ ಹಾಗೂ ಉಡುಪಿಯ ದರ್ಪಣ ಮಹಿಳಾ ಪಿಲಿ ತಂಡದಿಂದ ಶ್ಲ್ಯಾಘನೀಯ ಕಾರ್ಯ

Date:

ಮಣಿಪಾಲ, ಅ.1: ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ಎಸಿ ವಿಭಾಗ ಹಾಗೂ ದರ್ಪಣ ಮಹಿಳಾ ಪಿಲಿ ತಂಡವು ಆಸ್ಪತ್ರೆಯ ಮಕ್ಕಳ ರಕ್ತಶಾಸ್ತ್ರ ಮತ್ತು ಕ್ಯಾನ್ಸರ್ ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಚಿಕಿತ್ಸೆಗಾಗಿ ಒಟ್ಟು ರೂ.2.2 ಲಕ್ಷ ನೆರವು ನೀಡಿವೆ.

ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ಎಸಿ ವಿಭಾಗದ ಸಿಬ್ಬಂದಿ ವಿಭಿನ್ನ ಶೈಲಿಯ ವೇಷಗಳನ್ನು ಧರಿಸಿ ರೂ. 70,000 ಸಂಗ್ರಹಿಸಿದ್ದು, ಈ ಸಂಪೂರ್ಣ ಮೊತ್ತವನ್ನು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ನೇರವಾಗಿ ವಿಭಾಗಕ್ಕೆ ಹಸ್ತಾಂತರಿಸಲಾಯಿತು. ಈ ಕೊಡುಗೆಯೊಂದಿಗೆ, ವಿವಿಧ ಚಟುವಟಿಕೆಗಳ ಮೂಲಕ ಎಸಿ ವಿಭಾಗವು ಇದುವರೆಗೆ ನೀಡಿರುವ ಸೇವಾ ನೆರವಿನ ಮೊತ್ತ ರೂ.40.7 ಲಕ್ಷ ದಾಟಿದೆ.

ಇನ್ನೊಂದೆಡೆ, ಉಡುಪಿಯ ದರ್ಪಣ ಮಹಿಳಾ ಪಿಲಿ ತಂಡವು ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಮಕ್ಕಳಿಗೆ ರೂ.1,50,000 ಚಿಕಿತ್ಸಾ ನೆರವು ನೀಡಿದೆ. ತಂಡದ ಮಕ್ಕಳು, ಪೋಷಕರು, ಹಿತೈಷಿಗಳು ಹಾಗೂ ಅಭಿಮಾನಿಗಳ ಪ್ರೀತಿ ಮತ್ತು ಸಹಕಾರದಿಂದ ಈ ನೆರವು ಸಾಧ್ಯವಾಯಿತು ಎಂದು ತಂಡ ತಿಳಿಸಿದ್ದು, ಮುಂದೆಯೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಸಂಕಲ್ಪ ವ್ಯಕ್ತಪಡಿಸಿದೆ. ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಶೀಘ್ರ ಚೇತರಿಕೆಗೂ ತಂಡ ಹಾರೈಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ್ ಶೆಟ್ಟಿ, “ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಕುಟುಂಬಗಳ ಮೇಲೆ ಅಪಾರ ಭಾವನಾತ್ಮಕ ಹಾಗೂ ಆರ್ಥಿಕ ಹೊರೆಯನ್ನು ಉಂಟುಮಾಡುತ್ತದೆ. ಸಕಾಲದಲ್ಲಿ ದೊರೆಯುವ ಚಿಕಿತ್ಸೆ ಮಗುವಿನ ಬದುಕಿನಲ್ಲಿ ದೊಡ್ಡ ಬದಲಾವಣೆ ತರಬಲ್ಲದು. ನಮ್ಮದೇ ಆಸ್ಪತ್ರೆಯ ಎಸಿ ವಿಭಾಗದ ತಂಡ ಹಬ್ಬದ ಸಂಪ್ರದಾಯವನ್ನು ಈ ಮಕ್ಕಳ ಪಾಲಿಗೆ ಭರವಸೆಯ ಬೆಳಕನ್ನಾಗಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯ. ತಮ್ಮ ಕಲೆಯ ಮೂಲಕ ಪುಟ್ಟ ರೋಗಿಗಳಿಗೆ ನೆರವಾದ ದರ್ಪಣ ಮಹಿಳಾ ಪಿಲಿ ತಂಡಕ್ಕೂ ನಾವು ಆಭಾರಿಯಾಗಿದ್ದೇವೆ. ಕಸ್ತೂರ್ಬಾ ಆಸ್ಪತ್ರೆಯ ಪರವಾಗಿ ಪ್ರತಿಯೊಬ್ಬ ಸದಸ್ಯರು, ಬೆಂಬಲಿಗರು ಮತ್ತು ದಾನಿಗಳ ಬದ್ಧತೆ ಹಾಗೂ ಉದಾರತೆಗೆ ಧನ್ಯವಾದಗಳು. ಆರ್ಥಿಕ ಸಂಕಷ್ಟದ ಕಾರಣದಿಂದ ಯಾವುದೇ ಮಗು ಚಿಕಿತ್ಸೆಯಿಂದ ವಂಚಿತವಾಗದಂತೆ ನೋಡಿಕೊಳ್ಳುವ ನಮ್ಮ ಪ್ರಯತ್ನಕ್ಕೆ ಇಂತಹ ನೆರವು ಬಲ ನೀಡುತ್ತದೆ,” ಎಂದು ಹೇಳಿದರು.

ಈ ಸೇವಾ ಕಾರ್ಯಗಳಿಗೆ ಕೈಜೋಡಿಸಿದ ಹಾಗೂ ಬೆಂಬಲ ನೀಡಿದ ಎಲ್ಲರಿಗೂ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ ಕೃತಜ್ಞತೆ ಸಲ್ಲಿಸಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ವೈಯಕ್ತಿಕ ಬಿಸಿನೆಸ್ ಕರೆಸ್ಪಾಂಡೆಂಟ್‌ಗಳ ನೇಮಕಾತಿ : ಅರ್ಜಿ ಆಹ್ವಾನ

ಉಡುಪಿ, ನ.21: ಅಂಚೆ ಕಚೇರಿಯ ಬ್ಯಾಂಕ್ ಆದ ಇಂಡಿಯಾ ಪೋಸ್ಟ್ ಪೇಮೆಂಟ್ಸ್...

ಬಡ್ಡಿ ಸಹಾಯಧನ ಸಾಲದ ಖಾತೆಗೆ ಜಮಾ: ಪ್ರಸ್ತಾವನೆ ಆಹ್ವಾನ

ಉಡುಪಿ, ನ.21: ಕೇಂದ್ರ ಸರ್ಕಾರದ ಎಂ.ಎಸ್.ಎA.ಇ ಮಂತ್ರಾಲಯ ಹಾಗೂ ರಾಜ್ಯ ಸರ್ಕಾರದ...

ಉಚಿತ ಆರೋಗ್ಯ ಶಿಬಿರಗಳು ಅತ್ಯಂತ ಅವಶ್ಯಕ: ಪ್ರಸಾದ್ ಮಲ್ಯ

ಉಡುಪಿ, ನ.21: ಹರಿಖಂಡಿಗೆಯ ಮುನಿಯಾಲು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಸ್ಥೆಯ...

ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ: ಬಿ. ಬಿ. ಹೆಗ್ಡೆ ಕಾಲೇಜಿನ ಶ್ರಾವ್ಯಾ ವಿಜಯ್ ಪ್ರಥಮ

ಕುಂದಾಪುರ, ನ.21: ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ....
error: Content is protected !!