Tuesday, September 29, 2026
Tuesday, September 29, 2026

ಬುಲೆಟ್ ಪ್ರೂಫ್ ಜಾಕೆಟ್‌ ಅಭಿವೃದ್ಧಿಪಡಿಸಲು ಐಐಟಿ ದೆಹಲಿ- ಡಿಆರ್‌ಡಿಒ ಒಪ್ಪಂದ

ಬುಲೆಟ್ ಪ್ರೂಫ್ ಜಾಕೆಟ್‌ ಅಭಿವೃದ್ಧಿಪಡಿಸಲು ಐಐಟಿ ದೆಹಲಿ- ಡಿಆರ್‌ಡಿಒ ಒಪ್ಪಂದ

Date:

ನವದೆಹಲಿ, ಸೆ.26: ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್, ಡಿಆರ್‌ಡಿಒ ಭಾರತೀಯ ತಂತ್ರಜ್ಞಾನ ಸಂಸ್ಥೆ, ಐಐಟಿ ದೆಹಲಿಯೊಂದಿಗೆ ಸುಧಾರಿತ ಬ್ಯಾಲಿಸ್ಟಿಕ್ಸ್ ಲೈಟ್ ವೇಟ್ ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ಅಭಿವೃದ್ಧಿಪಡಿಸಲು ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಬಗ್ಗೆ ಮಾತನಾಡಿದ ಡಿಆರ್‌ಡಿಒ ಕಾರ್ಯದರ್ಶಿ ಡಾ. ಸಮೀರ್ ವಿ ಕಾಮತ್ ಅವರು, ಡಿಆರ್‌ಡಿಒ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಯ ಪರಿಣಾಮಕಾರಿ ಮಿಶ್ರಣದ ಫಲವೇ ಈ ಲೈಟ್ ವೇಟ್ ಬುಲೆಟ್ ಪ್ರೂಫ್ ಜಾಕೆಟ್ ಎಂದು ಹೇಳಿದರು. ಪಾಲಿಮರ್‌ಗಳು ಮತ್ತು ಸ್ಥಳೀಯ ಬೋರಾನ್ ಕಾರ್ಬೈಡ್ ಸೆರಾಮಿಕ್ ವಸ್ತುಗಳಿಂದ ಜಾಕೆಟ್‌ಗಳನ್ನು ರಚಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ದಾರಿದೀಪ ಹಾಗೂ ಹೈಮಾಸ್ಟ್ ಲೈಟ್‌ಗಳ ಸಮಸ್ಯೆ ಬಗೆಹರಿಸುವಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಮನವಿ

ಮಣಿಪಾಲ, ಸೆ.29: ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್...

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಸಾಧ್ಯತೆ ಪರಿಶೀಲಿಸಲು ಸಮಿತಿ ರಚನೆ- ಮಂಗಳೂರು ವಕೀಲರ ಸಂಘ ಸ್ವಾಗತ

ಮಂಗಳೂರು, ಸೆ.29: ಮಂಗಳೂರು ಉಡುಪಿ ಸೇರಿದಂತೆ ಕರಾವಳಿ ಕರ್ನಾಟಕ ಭಾಗದಲ್ಲಿ ಕರ್ನಾಟಕ...

ಬಿ. ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು: ವಿದ್ಯಾರ್ಥಿಗಳಿಂದ ಕೈಗಾರಿಕಾ ಭೇಟಿ

ಕುಂದಾಪುರ, ಸೆ.29: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ...
error: Content is protected !!