Thursday, November 19, 2026
Thursday, November 19, 2026

ದೇಶೀಯ ಸೌರ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯ 144 ಗಿಗಾವ್ಯಾಟ್‌ಗೆ ತಲುಪಿದೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ದೇಶೀಯ ಸೌರ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯ 144 ಗಿಗಾವ್ಯಾಟ್‌ಗೆ ತಲುಪಿದೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

Date:

ನವದೆಹಲಿ, ಫೆ.12: ದೇಶದಲ್ಲಿ ದೇಶೀಯ ಸೌರ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯ 144 ಗಿಗಾವ್ಯಾಟ್‌ಗೆ ತಲುಪಿದೆ. ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಉತ್ತರಿಸಿದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಈ ವಿಷಯ ತಿಳಿಸಿದರು. ಈ ಹಿಂದೆ ಸೌರ ವಿದ್ಯುತ್ ಉತ್ಪಾದನೆ ಕೇವಲ ಆರರಿಂದ ಏಳು ಗಿಗಾವ್ಯಾಟ್‌ಗಳಷ್ಟಿತ್ತು ಮತ್ತು ಈಗ ಹೆಚ್ಚಿದ ಸಾಮರ್ಥ್ಯದೊಂದಿಗೆ ದೇಶವು ಅದನ್ನು ರಫ್ತು ಮಾಡುವ ಸ್ಥಿತಿಯಲ್ಲಿದೆ ಎಂದು ಜೋಶಿ ಹೇಳಿದರು.

ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿ, ಹತ್ತು ವರ್ಷಗಳ ಅವಧಿಯಲ್ಲಿ ನವೀಕರಿಸಬಹುದಾದ ಇಂಧನಕ್ಕಾಗಿ ಕೇವಲ 856 ಕೋಟಿ ರೂಪಾಯಿಗಳನ್ನು ಮಾತ್ರ ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು. ಇದಕ್ಕೆ ಹೋಲಿಸಿದರೆ, ಎನ್‌ಡಿಎ ಸರ್ಕಾರದ ಕಳೆದ ಹನ್ನೊಂದು ವರ್ಷಗಳಲ್ಲಿ, ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಒಂದು ಲಕ್ಷ 27 ಸಾವಿರ ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ ಎಂದು ಜೋಶಿ ಹೇಳಿದರು. ಹಸಿರು ಇಂಧನ ಕಾರಿಡಾರ್ ಹಂತ-1 ರ ಅಡಿಯಲ್ಲಿ, ಸರ್ಕಾರವು ರಾಜ್ಯಗಳಿಗೆ ಹತ್ತು ಸಾವಿರ ಕೋಟಿ ರೂಪಾಯಿಗಳನ್ನು ಒದಗಿಸಿದೆ. ಹಸಿರು ಇಂಧನ ಕಾರಿಡಾರ್ ಹಂತ-2 ರ ಅಡಿಯಲ್ಲಿ 12 ಸಾವಿರ ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾವೇರಿ 2.0: ಆಸ್ತಿ ನೋಂದಣಿಗೆ ಡಿಜಿಟಲ್ ಸ್ಪರ್ಶ

ಬೆಂಗಳೂರು, ನ.19: ಆಸ್ತಿ ನೋಂದಣಿಗಾಗಿ ಕಚೇರಿಗಳಿಗೆ ತೆರಳಿ ಭೌತಿಕ ದಾಖಲೆಗಳನ್ನು ಸಲ್ಲಿಸುವ...

‘ಋತು ತಾರೆ’ ವಿನೂತನ ಕಾರ್ಯಕ್ರಮ

ಬೆಂಗಳೂರು, ನ.೧೯: ಮಹಿಳೆಯರ ಮಧ್ಯವಯಸ್ಸಿನಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳನ್ನು ಗುರುತಿಸಿ, ಸೂಕ್ತ...

ಬಂಟ್ವಾಳ: ಹೊಂಡ-ಗುಂಡಿಗಳ ವರದಿ ಬಗ್ಗೆ ಸಿಎಂ ಕಛೇರಿ ಸ್ಪಂದನೆ

ಬಂಟ್ವಾಳ, ನ.19: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೂಲಕ ಹಾದುಹೋಗುವ...

ಮುರಳಿ ಕಡೆಕಾರ್ ಇವರಿಗೆ ಶಾರದಾಕೃಷ್ಣ ಪ್ರಶಸ್ತಿ-2027

ಉಡುಪಿ, ನ.18: ಹೆಬ್ರಿಯ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಸಂಸ್ಕೃತಿ ವಿಶ್ವ...
error: Content is protected !!