Monday, July 27, 2026
Monday, July 27, 2026

ಬಾವಿಗೆ ಬಿದ್ದ ಕಾಡುಹಂದಿಯ ರಕ್ಷಣೆ

ಬಾವಿಗೆ ಬಿದ್ದ ಕಾಡುಹಂದಿಯ ರಕ್ಷಣೆ

Date:

ಕುಮಟಾ: ರಾತ್ರಿ ವೇಳೆ ಆಹಾರ ಅರಸಿ ಬಂದಿದ್ದ ಕಾಡುಹಂದಿಯೊಂದು ಆಯತಪ್ಪಿ ತೆರೆದ ಬಾವಿಗೆ ಬಿದ್ದು 7-8 ಗಂಟೆಯ ನಂತರ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ವನ್ಯಜೀವಿ ರಕ್ಷಕರ ಸಹಾಯದಿಂದ ರಕ್ಷಿಸಿದ ಘಟನೆ ಕುಮಟಾ ತಾಲೂಕಿನ ಗುಡ್ಕಾಗಲ್ ನಲ್ಲಿ ನಡೆದಿದೆ.‌

ಗುಡ್ಕಾಗಲಿನ ಬಲಿಂದ್ರ ಹರಿಕಂತ್ರ ಎಂಬುವವರ ಮನೆಯ 15 ಅಡಿ ಆಳದ ಬಾವಿಯಲ್ಲಿ ಕಾಡುಹಂದಿಯೊಂದು ಬಿದ್ದು ಮೇಲೆ ಬರಲಾರದೇ ನರಳುತ್ತಿತ್ತು. ಮನೆಯವರು ಬೆಳಗ್ಗಿನ ಜಾವ ನೀರು ತರಲು ಹೋದಾಗ ಗಮನಿಸಿ ಕುಮಟಾ ಅರಣ್ಯ ಇಲಾಖೆಗೆ ತಿಳಿಸಿದರು.

ತಕ್ಷಣ ಸ್ಥಳಕ್ಕೆ ಧಾವಿಸಿದ ಉಪವಲಯ ಅರಣ್ಯಾಧಿಕಾರಿಗಳಾದ ರಾಘವೇಂದ್ರ ನಾಯ್ಕ, ಹೂವಣ್ಣ ಗೌಡ, ಅರಣ್ಯ ರಕ್ಷಕ ಪ್ರಮೋದ, ವನ್ಯಜೀವಿ ರಕ್ಷಕ ಪವನ ನಾಯ್ಕ, ಬೀರ ಗೌಡ, ಸುರೇಶ್ ನಾಯ್ಕ ಹಾಗೂ ಸ್ಥಳೀಯರು ಸತತ 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಕಾಡುಹಂದಿಯನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದು ಹೆಮ್ಮೆಯ ಕ್ಷಣ: ಕಾರ್ಗಿಲ್ ಯೋಧ ಅನಂತಪದ್ಮನಾಭ ನಾಯಕ್

ಶಿರ್ವ, ಜು.26: 1999 ರ ಕಾರ್ಗಿಲ್ ಯುದ್ಧದಲ್ಲಿ ಭಾರತ ದೇಶದ ಪರವಾಗಿ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ದೇಶದ ಎಚ್ಚೆತ್ತ ಯುವಜನರ ಗೆಲುವಾಗಿದೆ: ಸಿದ್ದರಾಮಯ್ಯ

ಬೆಂಗಳೂರು, ಜು.26: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ದೇಶದ ಎಚ್ಚೆತ್ತ ಯುವಜನರ ಗೆಲುವಾಗಿದೆ....
error: Content is protected !!