Tuesday, July 7, 2026
Tuesday, July 7, 2026

ಸಂವಿಧಾನ ಶಿಲ್ಪಿ ಡಾ.‌ ಬಿ. ಆರ್. ಅಂಬೇಡ್ಕರ್‌ ಅವರ 14 ಅಡಿ ಎತ್ತರದ ಕಂಚಿನ ಪ್ರತಿಮೆ ಲೋಕಾರ್ಪಣೆ

ಸಂವಿಧಾನ ಶಿಲ್ಪಿ ಡಾ.‌ ಬಿ. ಆರ್. ಅಂಬೇಡ್ಕರ್‌ ಅವರ 14 ಅಡಿ ಎತ್ತರದ ಕಂಚಿನ ಪ್ರತಿಮೆ ಲೋಕಾರ್ಪಣೆ

Date:

ಬೆಂಗಳೂರು, ಜು.6: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಭವನದಲ್ಲಿ ಸಂವಿಧಾನ ಶಿಲ್ಪಿ ಡಾ.‌ ಬಿ. ಆರ್. ಅಂಬೇಡ್ಕರ್‌ ಅವರ 14 ಅಡಿ ಎತ್ತರದ ಭವ್ಯ ಕಂಚಿನ ಪ್ರತಿಮೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಎಐಸಿಸಿ ಅಧ್ಯಕ್ಷರು, ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ್ ಖರ್ಗೆ ಲೋಕಾರ್ಪಣೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಬಾಬಾಸಾಹೇಬರು ಆಶಿಸಿದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಸಿಗುವಂತಾಗಬೇಕು. ಈ ಪ್ರತಿಮೆಯು ನಮಗೆ ಸದಾ ಸಂವಿಧಾನದ ಆಶಯಗಳನ್ನು ನೆನಪಿಸುವ ಮತ್ತು ಆ ದಾರಿಯಲ್ಲಿ ಪ್ರಾಮಾಣಿಕವಾಗಿ ಶ್ರಮಿಸಲು ಪ್ರೇರೇಪಿಸುವ ಸಾಂಕೇತಿಕ ದಿಕ್ಸೂಚಿಯಾಗಿದೆ ಎಂದರು.

ಸಚಿವರಾದ ಕೆ.ಎಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಶಾಸಕರಾದ ಶರತ್ ಬಚ್ಚೇಗೌಡ, ಆನೇಕಲ್ ಶಿವಣ್ಣ, ಎನ್. ಶ್ರೀನಿವಾಸ್, ಧೀರಜ್ ಮುನಿರಾಜು, ಶ್ರೀನಿವಾಸ್, ಸಂಸದರಾದ ಡಾ. ಕೆ. ಸುಧಾಕರ್, ಎಂಎಲ್‌ಸಿ ರವಿ ಮತ್ತಿತರರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಬೆಳೆ ವಿಮೆ ಯೋಜನೆ: ನೋಂದಣಿ ಅವಧಿ ವಿಸ್ತರಣೆ

ಉಡುಪಿ, ಜು.6: ತೋಟಗಾರಿಕೆ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಮರು ವಿನ್ಯಾಸಗೊಳಿಸಿದ...

ಮೆಸ್ಕಾಂ ಜನಸಂಪರ್ಕ ಸಭೆ

ಉಡುಪಿ, ಜು. 6: ಮೆಸ್ಕಾಂ ಶಂಕರನಾರಾಯಣ ಉಪವಿಭಾಗ ಕಛೇರಿಯಲ್ಲಿ ಜುಲೈ 8...

ಉಚಿತ ಉಪಕರಣ ಸೌಲಭ್ಯ ಪಡೆಯಲು ಕುಶಲಕರ್ಮಿಗಳಿಂದ ಅರ್ಜಿ ಆಹ್ವಾನ

ಉಡುಪಿ, ಜು.6: ಗ್ರಾಮಾಂತರ ಕೈಗಾರಿಕೆ ಇಲಾಖೆ ವತಿಯಿಂದ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿರುವ...

ತೆಂಕನಿಡಿಯೂರು ಕಾಲೇಜಿನಲ್ಲಿ ಎಸ್.ಐ.ಆರ್ ಮಾಹಿತಿ; ಜಾಥಾ ಕಾರ್ಯಕ್ರಮ

ತೆಂಕನಿಡಿಯೂರು, ಜು.6: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ...
error: Content is protected !!