Friday, October 16, 2026
Friday, October 16, 2026

ಪತಿ ಸಾವಿನಿಂದ ಮಾನಸಿಕ ಅಸ್ವಸ್ಥಳಾದ ಮಹಿಳೆಯ ರಕ್ಷಣೆ

ಪತಿ ಸಾವಿನಿಂದ ಮಾನಸಿಕ ಅಸ್ವಸ್ಥಳಾದ ಮಹಿಳೆಯ ರಕ್ಷಣೆ

Date:

ಪತಿಯ ಸಾವಿನಿಂದ ನೊಂದು ಅತಂತ್ರಳಾದ ಮಹಿಳೆಯೋರ್ವಳು ಒಂಟಿಯಾಗಿದ್ದು ತೀರಾ ಮಾನಸಿಕ ಅಸ್ವಸ್ಥಳಾಗಿದ್ದು ವಿಷಯ ತಿಳಿದ ವಿಶು ಶೆಟ್ಟಿಯವರು ಕೋಟ ಠಾಣೆಯ ಎ.ಎಸ್.ಐ. ಮುಕ್ತಾರವರ ಸಹಾಯದಿಂದ ರಕ್ಷಿಸಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ ಘಟನೆ ಶನಿವಾರ ಸಂಜೆ ನಡೆದಿದೆ.

ಘಟನೆಯ ವಿವರ: ಮಹಿಳೆಯ ಪತಿ ಕೃಷ್ಣಮೂರ್ತಿ ಹೊಳ್ಳ ಮೇ 17ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಈ ದಂಪತಿಗಳ ಪ್ರೇಮ ವಿವಾಹವಾಗಿದ್ದು ಮಕ್ಕಳಿರಲಿಲ್ಲ. ಮದುವೆಗೆ ಎರಡು ಕುಟುಂಬಗಳ ಸಮ್ಮತಿ ಇರಲಿಲ್ಲ ಎಂದು ತಿಳಿದು ಬಂದಿದೆ. ಇಬ್ಬರೂ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಪತಿ ನಿಧನದ ನಂತರ ಪತ್ನಿ ಏಕಾಂಗಿಯಾಗಿದ್ದು ಸಂಬಂಧಿಕರ ಸ್ಪಂದನೆ ಇರದೇ ಇರುವುದರಿಂದ ಮಹಿಳೆ ತೀರಾ ಮನನೊಂದು ಮಾನಸಿಕವಾಗಿ ಅಸ್ವಸ್ಥಳಾಗಿ, ಅಡುಗೆ ಕೂಡ ಮಾಡದೆ ಒಂಟಿಯಾಗಿ ಅಸಹಾಯಕ ಬದುಕು ಸಾಗಿಸುತ್ತಿದ್ದರು. ನೆರೆಮನೆಯವರು ಆಹಾರ ನೀಡಿ ಸಂತೈಸುತ್ತಿದ್ದರು. ಇದೀಗ ಮಹಿಳೆಯ ಪರಿಸ್ಥಿತಿ ಚಿಂತಾಜನಕವಾಗಿದ್ದು ಸ್ಥಳೀಯರು ವಿಶು ಶೆಟ್ಟಿಯವರಲ್ಲಿ ಮಹಿಳೆಯ ರಕ್ಷಣೆಗೆ ನೆರವು ಕೇಳಿದ್ದಾರೆ. ಕೂಡಲೇ ವಿಶು ಶೆಟ್ಟಿಯವರು ಕೋಟ ಠಾಣೆಯ ಎ.ಎಸ್.ಐ. ಮುಕ್ತಾರವರೊಂದಿಗೆ ಸ್ಥಳಕ್ಕೆ ಧಾವಿಸಿ ಮಹಿಳೆಯನ್ನು ವಶಕ್ಕೆ ಪಡೆದು ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಹಿಳೆಯ ಸಂಬಂಧಿಕರು ಸ್ಪಂದಿಸದೆ ಇರುವುದು ಖಂಡನೀಯ. ಭವಿಷ್ಯದಲ್ಲಿ ಯಾರೂ ಸ್ಪಂದಿಸದೆ ಇದ್ದಲ್ಲಿ ಸಂಬಂಧಪಟ್ಟ ಇಲಾಖೆ ಮಹಿಳೆಯ ರಕ್ಷಣೆಯ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕಾಗಿ ವಿಶು ಶೆಟ್ಟಿಯವರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತಾಲೂಕು ಮಟ್ಟದ ಯುವ ಸಂಸತ್ತು ಸಭೆ

ಕಾರ್ಕಳ, ಅ.16: ಪ್ರಪಂಚದಲ್ಲಿಯೇ ಅತ್ಯಂತ ಬಲಿಷ್ಟವಾದ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು. ಯಾವುದೇ...

ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ

ಉಡುಪಿ, ಅ.16: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ನ್ಯಾಯಬೆಲೆ ಅಂಗಡಿಗಳಿಂದ ಪಡಿತರ ಪಡೆಯುತ್ತಿರುವ...

‘ಹಣಕಾಸು ಸಾಕ್ಷರತೆ ಮತ್ತು ಹೂಡಿಕೆದಾರರ ಶಿಕ್ಷಣ’ ಅರಿವು ಕಾರ್ಯಕ್ರಮ

ಬಸ್ರೂರು, ಅ.15: ಶ್ರೀ ಶಾರದಾ ಕಾಲೇಜು ಬಸ್ರೂರು ಐಕ್ಯೂಎಸಿ ಮತ್ತು ವಾಣಿಜ್ಯ...
error: Content is protected !!