Monday, August 31, 2026
Monday, August 31, 2026

​ಕ್ರೀಡೆಯಿಂದ ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಿ: ಪ್ರಕಾಶ್ ಜತ್ತನ್

​ಕ್ರೀಡೆಯಿಂದ ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಿ: ಪ್ರಕಾಶ್ ಜತ್ತನ್

Date:

ಉಡುಪಿ: ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ನಮ್ಮ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಬ್ರಹ್ಮಾವರ ವಲಯಾಧ್ಯಕ್ಪ ಪ್ರಕಾಶ್ ಜತ್ತನ್ ಹೇಳಿದರು.

ಅವರು ನಗರಸಭೆಯ ಬೀಡಿನಗುಡ್ಡೆ ಕ್ರೀಡಾಂಗಣದಲ್ಲಿ ಉಡುಪಿ ವಲಯ ಆಯೋಜಿಸಿದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ನಾವು ಸದಾ ಆರೋಗ್ಯವಂತರಾಗಿರಬೇಕಾದರೆ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಇನ್ನೋರ್ವ ಅತಿಥಿ ಉಡುಪಿ ವಲಯದ ಮಾಜಿ ಅಧ್ಯಕ್ಷ ಅನಿಶ್ ಶೆಟ್ಟಿಗಾರ್ ಮಾತನಾಡಿ, ಪ್ರತಿಯೊಬ್ಬರು ವೃತ್ತಿಯ ಜತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸಬೇಕು ಎಂದು ಕರೆಯಿತ್ತರು.

ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುಂದರ ಪೂಜಾರಿ ಕೊಳಲಗಿರಿ, ಕ್ರೀಡಾ ಕಾರ್ಯದರ್ಶಿಗಳಾದ ಅಶೋಕ್ ಪುತ್ರನ್, ಪ್ರವೀಣ್ ಖಂಡಿಗೆ, ಕೋಶಾಧಿಕಾರಿ ದಿವಾಕರ ಹಿರಿಯಡ್ಕ, ಉಪಾಧ್ಯಕ್ಷ ಸುರಭಿ ಸುದೀರ್ ಶೆಟ್ಟಿ, ಎಸ್. ಕೆ.ಪಿ.ಎ ಸೊಸೈಟಿ ಅಧ್ಯಕ್ಷ ಕೆ ವಾಸುದೇವ ರಾವ್, ಕಟ್ಟಡ ಸಮಿತಿ ಸಂಚಾಲಕ ಆಸ್ಟ್ರೋ ಮೋಹನ್ ಉಪಸ್ಥಿತರಿದ್ದರು.

ವಲಯಾಧ್ಯಕ್ಷ ಜನಾರ್ದನ್ ಕೊಡವೂರು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪರ್ವೀನ್ ಕೊರೆಯ ಧನ್ಯವಾದವಿತ್ತರು. ರಾಘವೇಂದ್ರ ಶೇರಿಗಾರ್ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತೆಂಕನಿಡಿಯೂರು ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

ಉಡುಪಿ, ಆ.30: ವಿಶ್ವವೇ ಕಂಡ ಅತ್ಯದ್ಭುತ ಕ್ರೀಡಾಪಟು, ಹಾಕಿ ದಂತಕಥೆ ಮೇಜರ್...

ಕೆಂಜೂರು ಆಯುಷ್ಮಾನ್ ಆರೋಗ್ಯ ಕೇಂದ್ರ ಕಾಮಗಾರಿಗೆ ಶಿಲಾನ್ಯಾಸ

ಬ್ರಹ್ಮಾವರ, ಆ.30: ಕಳ್ತೂರು ಗ್ರಾಮ ಪಂಚಾಯತ್ ಕೆಂಜೂರಿನಲ್ಲಿ ಸುಮಾರು 65 ಲಕ್ಷ...

ಎಸ್.ಐ.ಆರ್ ಪರಿಶೀಲನಾ ಸಭೆ ಮತ್ತು ಬಿ.ಎಲ್.ಎ-2 ಕಾರ್ಯಗಾರ

ಕಾಪು, ಆ.30: ಭಾರತೀಯ ಜನತಾ ಪಾರ್ಟಿ ಕಾಪು ವಿಧಾನಸಭಾ ಕ್ಷೇತ್ರ ಎಸ್.ಐ.ಆರ್...

ಕಾಪು ಪುರಸಭೆಯ ಸಾಮಾನ್ಯ ಸಭೆ

ಕಾಪು, ಆ.30: ಕಾಪು ಪುರಸಭೆಯ ಸಾಮಾನ್ಯ ಸಭೆ ಕಾಪು ಪುರಸಭೆಯ ಸಭಾಂಗಣದಲ್ಲಿ...
error: Content is protected !!