Tuesday, July 28, 2026
Tuesday, July 28, 2026

ಪರವಾನಿಗೆ ರಹಿತ ವಾಹನಗಳು ಸಂಚರಿಸಿದರೆ ಮುಟ್ಟುಗೋಲು

ಪರವಾನಿಗೆ ರಹಿತ ವಾಹನಗಳು ಸಂಚರಿಸಿದರೆ ಮುಟ್ಟುಗೋಲು

Date:

ಜಿಲ್ಲೆಯಾದ್ಯಂತ ಪರವಾನಿಗೆ ರಹಿತ, ವೇಳಾಪಟ್ಟಿ ರಹಿತ ಹಾಗೂ ಅಧ್ಯರ್ಪಣೆಯಿಂದ ಬಿಡುಗಡೆ ಹೊಂದದೇ ಇರುವ ವಾಹನಗಳು ರಸ್ತೆಯಲ್ಲಿ ಓಡಾಡುವುದು ಕಂಡುಬಂದಲ್ಲಿ ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ ಗಂಗಾಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಖಾಸಗಿ ಬಸ್, ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಮ್ಯಾಕ್ಸಿಕ್ಯಾಬ್ ವಾಹನಗಳನ್ನು ಓಡಿಸುವ ಚಾಲಕರು ಹಾಗೂ ನಿರ್ವಾಹಕರು ಕೋವಿಡ್ ಲಸಿಕೆ ಪಡೆಯದೇ, ಮಾಸ್ಕ್ ಹಾಕಿಕೊಳ್ಳದೇ ಕರ್ತವ್ಯ ನಿರ್ವಹಿಸಿದ್ದಲ್ಲಿ ವಾಹನದ ಮಾಲೀಕರ ಮೇಲೆ ಹಾಗೂ ತತ್ಸಂಬಂಧ ನೌಕರರ ಮೇಲೆ ಕಟ್ಟುನಿಟ್ಟಿನ ಕೋವಿಡ್ 19 ರ ಜಾಗೃತ ಕ್ರಮವಾಗಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು.

ರಾಜ್ಯ ಉಚ್ಛ ನ್ಯಾಯಾಲಯದ ಆದೇಶದನ್ವಯ ವಾಹನದ ನೋಂದಣಿ ಫಲಕದ ಮೇಲೆ ರಾಷ್ಟ್ರ‍ೀಯ ಮಾನವ ಹಕ್ಕುಗಳ ಆಯೋಗ/ ರಾಜ್ಯ/ ಜಿಲ್ಲಾ ಮಾನವ ಹಕ್ಕುಗಳ ಸಂಸ್ಥೆ/ ಒಕ್ಕೂಟ ಅಥವಾ ಹೆಸರುಗಳನ್ನು, ಚಿಹ್ನೆ/ ಲಾಂಛನಗಳನ್ನು ಹಾಗೂ ಇತರೆ ಸಂಘ ಸಂಸ್ಥೆಗಳ ಹೆಸರುಗಳನ್ನು ಹಾಕಿಕೊಂಡಲ್ಲಿ ಕಡ್ಡಾಯವಾಗಿ ತೆರವುಗೊಳಿಸಬೇಕು.

ನೋಂದಣಿ ಫಲಕಕ್ಕೆ ಅಡಚಣೆಯಾಗದ ರೀತಿಯಲ್ಲಿ ಇಲಾಖೆ ಹಾಗೂ ಸಂಸ್ಥೆಗಳ ಹೆಸರುಗಳನ್ನು ನೋಂದಣಿ ಫಲಕದಿಂದ ತೆಗೆದುಹಾಕಿ, ನೋಂದಣಿ ಸಂಖ್ಯೆ ಫಲಕವನ್ನು ಮಾತ್ರ ವಾಹನಕ್ಕೆ ಅಳವಡಿಸಬೇಕು. ನೋಂದಣಿ ಫಲಕದಲ್ಲಿ ನ್ಯೂನ್ಯತೆಗಳು ಕಂಡುಬಂದಲ್ಲಿ ಕಾನೂನು ರೀತಿಯಲ್ಲಿ ದಂಡ ವಿಧಿಸಲಾಗುವುದು.

ಈಗಾಗಲೇ ಸಾರಿಗೆ ಕಚೇರಿಯಲ್ಲಿ 223 ಬಸ್‌ಗಳನ್ನು ಅದ್ಯರ್ಪಣದಿಂದ ಬಿಡುಗಡೆಗೊಳಿಸಲಾಗಿದೆ ಎಂದು ಸಾರಿಗೆ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನರೇಂದ್ರ ಎಸ್ ಗಂಗೊಳ್ಳಿಗೆ ಕಾವ್ಯಶ್ರೀ ಪ್ರಶಸ್ತಿ

ಗಂಗೊಳ್ಳಿ, ಜು.27: ಕರ್ನಾಟಕ ರಾಜ್ಯ ಬರಹಗಾರರ ಸಂಘ(ರಿ) ಹೂವಿನಹಡಗಲಿ ವತಿಯಿಂದ ಕೊಡಲ್ಪಡುವ...

ಕಾಮನ್‌ವೆಲ್ತ್ ಕ್ರೀಡಾಕೂಟ: ಮುಂದುವರಿದ ಭಾರತದ ಪದಕ ಬೇಟೆ

ಯು.ಬಿ.ಎನ್.ಡಿ., ಜು.27: ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ವೇಟ್‌ಲಿಫ್ಟರ್ ಜ್ಞಾನೇಶ್ವರಿ...

ಸಂಸ್ಕೃತ ಪ್ರತಿಭಾ ಪುರಸ್ಕಾರ

ಉಡುಪಿ, ಜು.27: ಉಡುಪಿ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಶೀರೂರು...
error: Content is protected !!