Friday, November 27, 2026
Friday, November 27, 2026

ಜ್ಞಾನಸುಧಾ: ಮೌಲ್ಯಸುಧಾ-54

ಜ್ಞಾನಸುಧಾ: ಮೌಲ್ಯಸುಧಾ-54

Date:

ಗಣಿತನಗರ, ನ.25: ಮನುಷ್ಯನ ಹೊಸವಿಚಾರ, ಯೋಚನೆ, ಪ್ರಶ್ನೆ, ತಿಳುವಳಿಕೆಗಳ ಹುಡುಕಾಟವೇ ಅವನ ಶಕ್ತಿಯೇ ಆಗಿದೆ. ಇವುಗಳ ಸತತ ಅಭ್ಯಾಸಗಳ ಮನೋಭಾವವೇ ಮುಂದೆ ಭವಿಷ್ಯದಲ್ಲಿ ವ್ಯಕ್ತಿಯನ್ನು ಸಾಧಕನನ್ನಾಗಿ ರೂಪಿಸುತ್ತದೆ. ಇದಕ್ಕೆ ಮನಸ್ಸೇ ಮೂಲ ಆಕರವಾಗಿದೆ. ಮನಸ್ಸನ್ನು ಧನಾತ್ಮಕವಾಗಿ ರೂಪುಗೊಳಿಸುವುದು ಅಗತ್ಯ ಎಂದು ಪ್ರಸಿದ್ಧ ಮನೋಭಾವ ತರಬೇತುದಾರ ಶ್ರೀ ಮಹೇಶ ಮಾಸಾಳ ನುಡಿದರು. ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಸಹಯೋಗದಲ್ಲಿ ನಡೆಯುತ್ತಿರುವ ಮೌಲ್ಯಸುಧಾ ಮಾಲಿಕೆ- 54ರಲ್ಲಿ ‘ಯಾಕ್! ಹಿಂಗ ಯಾಕ್?’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿಗಳಾದಂತಹ ಅನಿಲ್ ಕುಮಾರ್ ಜೈನ್, ಸಿ.ಇ.ಒ ಹಾಗೂ ಪ್ರಾಂಶುಪಾಲರು ದಿನೇಶ್ ಎಂ ಕೊಡವೂರು, ಉಪಪ್ರಾಂಶುಪಾಲರಾದ ಸಾಹಿತ್ಯ ಉಪಸ್ಥಿತರಿದ್ದರು. ಆಂಗ್ಲಭಾಷಾ ಉಪನ್ಯಾಸಕಿ ಶಮಿತಾ ರವಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸ್ವಾವಲಂಬಿ ಸಾರಥಿ ಯೋಜನೆಯಡಿ ಫಲಾನುಭವಿಗಳಿಗೆ ಹಸ್ತಾಂತರ

ಕಾಪು, ನ.26: ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಉಡುಪಿ ಜಿಲ್ಲೆ...

ಬೃಹತ್ ಫ್ಯಾನ್ ಉದ್ಘಾಟನೆ

ಉಡುಪಿ, ನ.26: ಪರ್ಯಾಯ ಪೀಠಾಧೀಶ ಶ್ರೀ ವೇದವರ್ಧನತೀರ್ಥರು ರಾಜಾಂಗಣದಲ್ಲಿ ಬೃಹತ್ ಫ್ಯಾನ್...

ಬಿ. ಸದಾಶಿವ ಪ್ರಭು ಅಧಿಕಾರ ಸ್ವೀಕಾರ

ಉಡುಪಿ, ನ.26: ಬಿ. ಸದಾಶಿವ ಪ್ರಭು ಭಾ.ಆ.ಸೇ (ನಿವೃತ್ತ) ರವರು 2026...
error: Content is protected !!