Thursday, November 26, 2026
Thursday, November 26, 2026

ತೆಂಕನಿಡಿಯೂರು ಕಾಲೇಜು: ಗ್ರೇಡ್-‌1 ಪ್ರಾಂಶುಪಾಲರಾಗಿ ಡಾ. ಗೋಪಾಲಕೃಷ್ಣ ಎಂ ಗಾಂವಕರ್‌ ಅಧಿಕಾರ ಸ್ವೀಕಾರ

ತೆಂಕನಿಡಿಯೂರು ಕಾಲೇಜು: ಗ್ರೇಡ್-‌1 ಪ್ರಾಂಶುಪಾಲರಾಗಿ ಡಾ. ಗೋಪಾಲಕೃಷ್ಣ ಎಂ ಗಾಂವಕರ್‌ ಅಧಿಕಾರ ಸ್ವೀಕಾರ

Date:

ಉಡುಪಿ, ನ.25: ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಗ್ರೇಡ್‌-1 ಪ್ರಾಂಶುಪಾಲರಾಗಿ ಡಾ. ಗೋಪಾಲಕೃಷ್ಣ ಎಂ ಗಾಂವಕರ್‌ ದಿನಾಂಕ 23-11-2026 ರಂದು ಅಧಿಕಾರ ಸ್ವೀಕರಿಸಿದರು. ಕಾಲೇಜು ಶಿಕ್ಷಣ ಇಲಾಖೆಯು ನಡೆಸಿದ ಪರೀಕ್ಷೆ ಹಾಗೂ ಇತರೆ ನಿಯಮಾನುಸಾರ ಗ್ರೇಡ್-1‌ ಪ್ರಾಂಶುಪಾಲರ ಆಯ್ಕೆ ಪ್ರಕ್ರಿಯೆಯಲ್ಲಿ ಡಾ. ಗೋಪಾಲಕೃಷ್ಣ ಎಂ ಗಾಂವಕರ್‌ ಇವರು ತೆಂಕನಿಡಿಯೂರು ಕಾಲೇಜಿಗೆ ನೇಮಕಾತಿಗೊಂಡಿರುತ್ತಾರೆ. 30 ವರ್ಷಕ್ಕೂ ಹೆಚ್ಚು ಕಾಲ ಬೋಧನಾ ಅನುಭವವನ್ನು ಹೊಂದಿದ್ದು, ಇವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪ್ರಥಮ ದರ್ಜೆಯಲ್ಲಿ ಎಂ.ಎ. ಮತ್ತು ಪಿಎಚ್.ಡಿ. ಪದವಿಗಳನ್ನು ಪಡೆದಿದ್ದಾರೆ.

ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥರಾಗಿ, ಸ್ನಾತಕೋತ್ತರ ವಿಭಾಗದ ಸಂಯೋಜಕರಾಗಿ ಸೇವೆಯನ್ನು ಸಲ್ಲಿಸಿರುತ್ತಾರೆ. ಕಾಲೇಜುಗಳಲ್ಲಿ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಯಾಗಿ, ರೂಸಾ ಸಂಯೋಜಕರಾಗಿ, ನ್ಯಾಕ್ ಮತ್ತು ಐಕ್ಯೂಎಸಿ ಸಂಯೋಜಕರಾಗಿ ಸೇವೆ ಸಲ್ಲಿಸಿದ್ದಾರೆ. ಪಿ.ಎಚ್.ಡಿ ಹಾಗೂ ಎಂ.ಪೀಲ್‌ ಸಂಶೋಧನಾ ಅಭ್ಯರ್ಥಿಗಳಿಗೆ ವಿವಿಧ ವಿಶ್ವವಿದ್ಯಾನಿಲಯದಲ್ಲಿ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಮಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗ, ಉಜಿರೆಯ ಎಸ್.ಡಿ.ಎಂ. [ಸ್ವಾಯತ್ತ] ಕಾಲೇಜು ಮತ್ತು ಮಂಗಳೂರಿನ ಸೇಂಟ್ ಅಲೋಶಿಯಸ್ [ಸ್ವಾಯತ್ತ] ಕಾಲೇಜಿನ ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ಮಂಡಳಿ ಹಾಗೂ ಪರೀಕ್ಷಾ ಮಂಡಳಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ವಿಚಾರಗೋಷ್ಟಿಗಳಲ್ಲಿ ಪ್ರಭಂದವನ್ನು ಮಂಡಿಸಿದ್ದು, ಒಂದು ಪರಾಮರ್ಶನ ಗ್ರಂಥವನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಕಾಲೇಜಿನ ವಿವಿಧ ವಿಭಾಗಗಳ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದ ಡಾ. ಗೋಪಾಲಕೃಷ್ಣ ಎಂ ಗಾಂವಕರ್‌ ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿಯೂ ಕರ್ತವ್ಯವನ್ನು ನಿರ್ವಹಿಸಿರುತ್ತಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಅರಿವಿನ ಬೆಳಕು ಉಪನ್ಯಾಸ ಮಾಲೆ- 21

ಉಡುಪಿ, ನ.25: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಡಾ. ಶಿವರಾಮ ಕಾರಂತ...

ಜಿಲ್ಲಾ ಉಸ್ತುವಾರಿ ಸಚಿವರಿಂದ ದೃಷ್ಟಿ ಕಮಾಂಡ್ ಸೆಂಟರ್ ವೀಕ್ಷಣೆ

ಉಡುಪಿ, ನ.25: ಜಿಲ್ಲಾ ಉಸ್ತುವಾರಿ ಸಚಿವರಾದ ರಿಜ್ವಾನ್ ಅರ್ಷದ್ ಅವರು ಉಡುಪಿ...

ಜ್ಞಾನಸುಧಾ: ಮೌಲ್ಯಸುಧಾ-54

ಗಣಿತನಗರ, ನ.25: ಮನುಷ್ಯನ ಹೊಸವಿಚಾರ, ಯೋಚನೆ, ಪ್ರಶ್ನೆ, ತಿಳುವಳಿಕೆಗಳ ಹುಡುಕಾಟವೇ ಅವನ...
error: Content is protected !!