ಉಡುಪಿ, ನ.26: ಪರ್ಯಾಯ ಪೀಠಾಧೀಶ ಶ್ರೀ ವೇದವರ್ಧನತೀರ್ಥರು ರಾಜಾಂಗಣದಲ್ಲಿ ಬೃಹತ್ ಫ್ಯಾನ್ ಉದ್ಘಾಟಿಸಿದರು. ನಿರಂತರ ನಡೆಯುವ ಧಾರ್ಮಿಕ -ಸಾಂಸ್ಕೃತಿಕ ಕಾರ್ಯಕ್ರಮದ ವೀಕ್ಷಕರ ಅನುಕೂಲಕ್ಕಾಗಿ ಶ್ರೀಪಾದರು ಈ ವ್ಯವಸ್ಥೆ ಲೋಕಾರ್ಪಣೆ ಮಾಡಿದರು.


ಶಾಂತ ಎಲೆಕ್ಟ್ರಿಕಲ್ ಅವರ ಈ ಕೊಡುಗೆ ನಿಜ ಅರ್ಥದ ಸಾರ್ಥಕತೆ ಪಡೆದಿದೆ ಎಂದು ಶ್ರೀಗಳು ಅಶೀರ್ವಚಿಸಿದರು. ಶ್ರೀ ಮಠದ ದಿವಾನರು, ಶಾಂತ ಎಲೆಕ್ಟ್ರಿಕಲ್ ನ ಮುಖ್ಯಸ್ಥರಾದ ಶ್ರೀಪತಿ ಭಟ್ ಉಚ್ಚಿಲ, ಮಠದ ಸಿಬ್ಬಂದಿಗಳು ಉಪಸ್ಥಿತರಿದ್ದರು.




By
ForthFocus™